ಕಟೀಲು: ಇಂದು ಲಲಿತಾ ಪಂಚಮಿ, ಶೇಷ ವಸ್ತ್ರ ವಿತರಣೆ

KannadaprabhaNewsNetwork |  
Published : Oct 15, 2026, 02:45 AM IST
ಕಟಿಲು ದುರ್ಗೆ  | Kannada Prabha

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಸಂದರ್ಭದಲ್ಲಿ ಗುರುವಾರ ಲಲಿತಾ ಪಂಚಮಿಯಂದು ಮಹಿಳೆಯರಿಗೆ ಶೇಷ ವಸ್ತ್ರ ವಿತರಣೆ ನಡೆಯಲಿದೆ. ಅಲ್ಲದೆ ಚಂಡಿಕಾ ಹೋಮ, ಸುವಾಸಿನಿ ಕನ್ನಿಕಾ ಪೂಜೆ ಜರಗಲಿದೆ

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಸಂದರ್ಭದಲ್ಲಿ ಗುರುವಾರ ಲಲಿತಾ ಪಂಚಮಿಯಂದು ಮಹಿಳೆಯರಿಗೆ ಶೇಷ ವಸ್ತ್ರ ವಿತರಣೆ ನಡೆಯಲಿದೆ. ಅಲ್ಲದೆ ಚಂಡಿಕಾ ಹೋಮ, ಸುವಾಸಿನಿ ಕನ್ನಿಕಾ ಪೂಜೆ ಜರಗಲಿದೆ ಎಂದು ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದ್ದಾರೆ. ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಳಿಗ್ಗೆಯಿಂದ ಸರಸ್ವತಿ ಸದನದಲ್ಲಿ ಭಜನಾ ಕಾರ್ಯಕ್ರಮ, ಮಂಜೇಶ್ವರ ನೃತ್ಯ ಸಂಗಮ ಸಂಸ್ಥೆಯಿಂದ ನಾಟ್ಯ ಪ್ರದರ್ಶನ. ಸಂಜೆ 7ಕ್ಕೆ ಯಕ್ಷಗಾನ ಮೈರಾವಣ ಕಾಳಗ ನಡೆಯಲಿದೆ. ಕಟೀಲು ದೇವಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬುಧವಾರ ಬೆಳಿಗ್ಗೆ ಸರಸ್ವತಿ ಸದನದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 4ರಿಂದ ನೃತ್ಯ ಕುಟೀರ ಬೆಂಗಳೂರು ಅವರಿಂದ ಭರತನಾಟ್ಯ, ಶ್ರೀ ಶೈಲೇಶ್‌ ಕುಮಾರ್‌ದಾಸ ಸಕಲೇಶಪುರ ಅವರಿಂದ ಹರಿಕಥೆ, ಸಂಜೆ 7ರಿಂದ ಯಕ್ಷಗಾನ: ಕಾಲನೇಮಿ ಕಾಳಗ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನರೂರು ಕ್ಷೇತ್ರ ಬ್ರಹ್ಮಕಲಶ ಲಾಂಛನ ಬಿಡುಗಡೆ
ಕುಂಟಿಕಾನಮಠ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ