ದಾಬಸ್‍ಪೇಟೆ: ರೈತರು ತಮ್ಮ ಜಮೀನಿನ ಹಣ ಪಡೆಯದೆ ಇದ್ದಲ್ಲಿ ಕೆಎಡಿಬಿಐ ವತಿಯಿಂದ ಅಭಿವೃದ್ಧಿಪಡಿಸಿದ ಹಾಗೂ ವ್ಯಾಪಾರ ಕೇಂದ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ 10781 ಅಡಿಗಳ ಭೂಪ್ರದೇಶವನ್ನು ಒಂದು ಎಕರೆ ಭೂಮಿ ಬದಲಿಗೆ ನೀಡುತ್ತೇವೆ. ಈ ಯೋಜನೆ ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ. ಇದರ ಅನುಕೂಲ ಪಡೆದುಕೊಳ್ಳಿ ಎಂದು ಕೆಎಡಿಬಿಐ ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಹೇಳಿದರು.
ತ್ಯಾಮಗೊಂಡ್ಲುನಲ್ಲಿ ಕ್ಲೀನ್ ಸಿಟಿ ನಿರ್ಮಾಣ ಪ್ರಕ್ರಿಯೆಗೆ ಭೂಸ್ವಾಧೀನ ಸಂಬಂಧ ಆಯೋಜಿಸಿದ್ದ ಭೂಮಿ ದರ ನಿಗದಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮಾವಳಿಗಳಂತೆ ಬಳ್ಳಗೆರೆ ಗ್ರಾಮ ಜಮೀನಿನ ಬೆಲೆಯನ್ನು ಗಮನಿಸಿ ಹುಲಿಕುಂಟೆ, ಕೋಡಿಗೇಹಳ್ಳಿ ಹಾಗೂ ಕೆಂಚಿನಮರ ಗ್ರಾಮದ ರೈತರಿಗೆ ನೀಡಿದ ಎಕರೆಗೆ 1.60 ಕೋಟಿ ದರ ಬೆಲೆಯನ್ನೇ ನೀಡುತ್ತಿದ್ದೇವೆ ಎಂದು ಹೇಳಿದರು.ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕ್ಲೀನ್ ಸಿಟಿ ನಿರ್ಮಾಣದಿಂದ ನಿಮಗೂ ಜಾಗತಿಕ ಮಟ್ಟದಲ್ಲಿನ ಆರೋಗ್ಯ, ಶಿಕ್ಷಣ, ಸೋಲಾರ್ ವಿದ್ಯುತ್, ಹಸಿರು ಪರಿಕಲ್ಪನೆ, ಸಂಶೋಧನಾ ಘಟಕಗಳು ಕಾರ್ಯರೂಪಕ್ಕೆ ಬರಲಿವೆ. ಈ ಭೂಸ್ವಾಧೀನಕ್ಕೆ ಒಳಪಟ್ಟ ಭೂಪ್ರದೇಶದಲ್ಲಿ 5-6 ಎಕರೆ ಭೂಮಿಯನ್ನು ಸ್ಮಶಾನ, ಗುಂಡು ತೋಪು, ದೇವಾಲಯಗಳ ನಿರ್ಮಾಣಕ್ಕೆ ಮೀಸಲಿಡಲಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಹನುಮಂತೇಗೌಡ ಮಾತನಾಡಿ, ನಮ್ಮ ಭಾಗದ ರೈತರಿಗೆ ಸರಿಯಾದ ರೀತಿಯಲ್ಲಿ ಜಮೀನಿನ ಬೆಲೆ ನಿಗದಿ ಮಾಡಬೇಕು. ಈಗಾಗಲೇ ಓಬಳಾಪುರ ಹಾಗೂ ಹುಲಿಕುಂಟೆ ಕೈಗಾರಿಕಾ ಪ್ರದೇಶಕ್ಕೆ ನೀಡಿದ ಬೆಲೆ ಗಮನಿಸಿದರೆ ನಮಗೆ ನೀಡುತ್ತಿರುವ ಬೆಲೆ ತುಂಬಾ ಕಡಿಮೆ. ಐದಾರು ವರ್ಷದಲ್ಲಿ ಭೂಮಿ ಬೆಲೆ ಹೆಚ್ಚಾಗಿದೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಬೇಕು. ಸರ್ಕಾರದ ಗಮನಕ್ಕೆ ತಂದು ಭೂದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಬಾಕ್ಸ್..............
ರೈತರ ಬೇಡಿಕೆಗಳು :1. ಪ್ರತಿ ಎಕರೆಗೆ ಕನಿಷ್ಟ 2.60 ಕೋಟಿ ನಿಗದಿ ಮಾಡಬೇಕು.
2. ಕ್ವೀನ್ ಸಿಟಿಯಲ್ಲಿ ಸ್ಥಳೀಯರಿಗೂ ಉದ್ಯೋಗದಲ್ಲಿ ಆದ್ಯತೆ.3. ಎಕರೆಗೆ 10781 ಅಡಿ ಬದಲು 50:50 ಅನುಪಾತದಲ್ಲಿ ಭೂಮಿ ನೀಡಬೇಕು.
5. ಸ್ಮಶಾನ, ಶಾಲೆ ಅಭಿವೃದ್ದಿಗೆ ಕನಿಷ್ಠ ಜಮೀನು ಮೀಸಲಿಡಬೇಕು.6. ಈಗಿನ ಮಾರುಕಟ್ಟೆ ಬೆಲೆಗೆ ದರ ನಿಗದಿ ಮಾಡಬೇಕು.
ಪೋಟೋ 1 :ತ್ಯಾಮಗೊಂಡ್ಲು ಹೋಬಳಿಯ ಬಳ್ಳಗೆರೆ ಗ್ರಾಮದ ಭೂಸ್ವಾಧೀನಕ್ಕೆ ಒಳಪಟ್ಟಿರುವ 463 ಎಕರೆ ಭೂಪ್ರದೇಶಕ್ಕೆ ದರ ನಿಗದಿ ಸಭೆಯಲ್ಲಿ ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಮಾತನಾಡಿದು. ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ ಇತರರಿದ್ದರು.