ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ರಾಮದ ಸರ್ವೇ ನಂ 67 ಮತ್ತು 68 ರಲ್ಲಿನ ಸ್ಮಶಾನದ ಜಾಗ, ಜೊತೆಗೆ ಸುಮಾರು ಒಂದುವರೆ ಎಕರೆ ಸರ್ಕಾರಿ ಜಮೀನನ್ನು ಬೆಂಗಳೂರು ಮೂಲದ ಮುಕ್ತಾರ್ ಅಹಮದ್ ಎಂಬ ವ್ಯಕ್ತಿ ಒತ್ತುವರಿ ಮಾಡಿಕೊಂಡು ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ತಹಸೀಲ್ದಾರ್ ಗಮನಕ್ಕೂ ತರಲಾಗಿದೆ. ಅವರು ಸಹ ಮೂರ್‍ನಾಲ್ಕು ಬಾರಿ ಸ್ಥಳಕ್ಕೆ ಆಗಮಿಸಿ ಹೋಗಿದ್ದಾರೆ ವಿನಃ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದರು.
ಸ್ಥಳೀಯ ಮಧ್ಯವರ್ತಿಗಳ ಮೂಲಕ ಗ್ರಾಮದ ಕೆಲ ರೈತರ ಜಮೀನು ಖರೀದಿಸಿಕೊಂಡು ಬಡಾವಣೆ ಮಾಡಲು ಹೊರಟಿದ್ದಾರೆ. ನಮ್ಮ ತಾತ, ಮುತ್ತಾತಂದಿರ ಕಾಲದಿಂದಲೂ ಇದ್ದ ಬಂಡಿದಾರಿಗೆ ಇದೀಗ ಕಾಂಪೌಡ್ ನಿರ್ಮಿಸಿಕೊಂಡಿರುವುದರಿಂದ ಸುಮಾರು 50-60 ಎಕರೆ ಪ್ರದೇಶದ ರೈತರು ತಮ್ಮ ಜಮೀನಿಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗದೆ ತೆಕ್ಕಲು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪ್ರಶ್ನಿದ ರೈತರ ಮೇಲೆ ತನ್ನ ಹಣ ಬಲ ಪ್ರದರ್ಶನದಿಂದ ಸುಳ್ಳು ಪ್ರಕರಣ ದಾಖಲಿಸಿದ್ದಾನೆ. ಜೊತೆಗೆ ಪರಿಶಿಷ್ಟ ಜನಾಂಗದವರು ಮೃತಪಟ್ಟರೆ ಶವಸಂಸ್ಕಾರ ಮಾಡಲು ತೆರಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಜೆಸಿಬಿ ಮೂಲಕ ಟ್ರಂಚ್ ಮಾಡಿ ಸ್ಥಳ ನಿಗದಿಪಡಿಸಿ ತೆರಳಿದ್ದರು. ಆದರೆ, ಏಕಾಏಕಿ ಟ್ರಂಚ್ ಮುಚ್ಚುವ ಮೂಲಕ ಅಧಿಕಾರಿಗಳಿಗೂ ಬೆಲೆ ಕೊಡುತ್ತಿಲ್ಲ. ಈತ ಉದ್ದಟತನ ಪ್ರದರ್ಶಿಸುತ್ತಿದ್ದಾನೆ. ಇವರಿಗೆ ಸ್ಥಳೀಯ ದಳ್ಳಾಳಿಗಳು ಸಾಥ್ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ನಮ್ಮ ಗ್ರಾಮದ ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.