ಭೂ ಗ್ಯಾರಂಟಿ ಪ್ರಭಾವ: ಸರ್ಕಾರಿ ಜಾಗೆಗೆ ಲಗ್ಗೆಯಿಟ್ಟ ಗ್ರಾಮಸ್ಥರು

KannadaprabhaNewsNetwork |  
Published : Feb 22, 2026, 02:30 AM IST
ಫೋಟೊ ಶೀರ್ಷಿಕೆ: 21ಆರ್‌ಎನ್‌ಆರ್5, 5ಎರಾಣಿಬೆನ್ನೂರು ತಾಲೂಕು ಆರೇಮಲ್ಲಾಪುರ ಗ್ರಾಮದ ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದ ಬಳಿಯ ಗೋಮಾಳ ಜಾಗೆಯಲ್ಲಿ ಜನರು ಅಕ್ರಮವಾಗಿ ಕಂಬಗಳನ್ನು ನೆಟ್ಟಿರುವುದು.  | Kannada Prabha

ಸಾರಾಂಶ

ರಾಜ್ಯ ಸರ್ಕಾರ ಇತ್ತೀಚಿಗೆ ಹಾವೇರಿಯಲ್ಲಿ ನಡೆಸಿದ ಭೂ ಗ್ಯಾರಂಟಿ ಸಮಾವೇಶದ ನಂತರ ಸರ್ಕಾರದ ಜಾಗಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಕಂಡ ಕಂಡ ಜಾಗದಲ್ಲಿ ಟೆಂಟ್ ಹಾಕಿಕೊಂಡು ಅಕ್ರಮವಾಗಿ ಅತಿಕ್ರಮಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ರಾಜ್ಯ ಸರ್ಕಾರ ಇತ್ತೀಚಿಗೆ ಹಾವೇರಿಯಲ್ಲಿ ನಡೆಸಿದ ಭೂ ಗ್ಯಾರಂಟಿ ಸಮಾವೇಶದ ನಂತರ ಸರ್ಕಾರದ ಜಾಗಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಕಂಡ ಕಂಡ ಜಾಗದಲ್ಲಿ ಟೆಂಟ್ ಹಾಕಿಕೊಂಡು ಅಕ್ರಮವಾಗಿ ಅತಿಕ್ರಮಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಒಟ್ಟು 27.5 ಎಕರೆ ಜಾಗೆ ಗೋಮಾಳಕ್ಕೆ ಸೇರಿದ್ದು ಅದರಲ್ಲಿ 5 ಎಕರೆಯನ್ನು ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರಕ್ಕೆ ಹಾಗೂ 1 ಎಕರೆಯನ್ನು ಶಿವಾಜಿ ನಗರ ಸ್ಮಶಾನಕ್ಕೆ ನೀಡಲಾಗಿದೆ. ಇದೀಗ 19.11 ಎಕರೆ ಗೋಮಾಳ ಜಾಗೆ ಖಾಲಿ ಇದೆ. ವಸತಿ ಇಲ್ಲದವರಿಗೆ ಸರ್ಕಾರ ಜಾಗೆ ಮಂಜೂರು ಮಾಡಲಿದೆ ಎಂಬ ಪುಕಾರು ನಂಬಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಜನರು ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದ ಹತ್ತಿರ ಇರುವ ಸರ್ಕಾರಿ ಗೋಮಾಳದಲ್ಲಿ ಜೆಸಿಬಿ ತಂದು ಅತೀಕ್ರಮಣ ಮಾಡಿಕೊಂಡು ಕಂಬಗಳನ್ನು ನೆಟ್ಟಿದ್ದಾರೆ. ಅಕ್ಕಪಕ್ಕದ ಊರಿನ ಜನರು ಸಹ ಅಲ್ಲಿಗೆ ಬಂದು ಜಾಗವನ್ನ ಅತೀಕ್ರಮಣ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ತೆರವು ಕಾರ್ಯಾಚರಣೆ: ಗ್ರಾಮಸ್ಥರು ಅತಿಕ್ರಮಣ ಮಾಡುತ್ತಿರುವ ಮಾಹಿತಿ ದೊರೆಯುತ್ತಿದ್ದಂತೆ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದನ್ನು ತೆರವುಗೊಳಿಸುತ್ತಿದ್ದಾರೆ. 2018ಕ್ಕಿಂತ ಮೊದಲು ಸರ್ಕಾರಿ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮಾತ್ರ ಭೂ ಗ್ಯಾರಂಟಿ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಆದರೆ ಆರೇಮಲ್ಲಾಪುರ ಗ್ರಾಮದ ಕೆಲವರು ದುರಾಸೆಯಿಂದ ಕಳೆದ ಒಂದೆರಡು ದಿನಗಳಿಂದ ಗೋಮಾಳ ಜಾಗೆಯಲ್ಲಿ ನಿರ್ಮಾಣ ಕಾರ್ಯ ಕೈಗೊಂಡಿರುವುದು ತಿಳಿದು ಬಂದಿದೆ. ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್‌ ಆರ್.ಎಚ್. ಭಾಗವಾನಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳ್ಳತನದ ಆತಂಕ: ಕನಕಾಚಲಪತಿ ದೇಗುಲದ ಆಭರಣ ಗಂಗಾವತಿಗೆ ಶಿಪ್ಟ್
24ರ ಕೊಪ್ಪಳ ಬಂದ್‌ಗೆ ಶಾಸಕರು, ಸಂಸದರು, ಶ್ರೀಗಳ ಬೆಂಬಲ