ಬೇಸಿಗೆಯಲ್ಲಿ ಜೆಸಿಬಿಗಳ ಸದ್ದು । ಮಳೆಗಾಲದಲ್ಲಿ ಘರ್ಜಿಸುತ್ತಿದೆ ಮಲೆನಾಡಿನ ಬೆಟ್ಟಗುಡ್ಡಗಳು ನೆಮ್ಮಾರ್ ಅಬೂಬಕರ್
ಮಡಿಕೇರಿ, ಕೊಡಗು, ಶಿರೂರು ವಯನಾಡು ಗುಡ್ಡಬೆಟ್ಟಗಳ ಕುಸಿತದಂತಹ ಘಟನೆಗಳ ನಂತರ ಇದೀಗ ಶಾಂತವಾಗಿದ್ದ ಮಲೆನಾಡು ಪ್ರದೇಶಗಳಲ್ಲಿಯೂ ಬೆಟ್ಟಗುಡ್ಡ, ರಸ್ತೆ ಸೇರಿದಂತೆ ಆಗುತ್ತಿರುವ ಭೂ ಕುಸಿತಗಳು ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿವೆ. ಬೆಟ್ಟಗುಡ್ಡಗಳು ಜಾರಿ ಕೆಳ ಬರುತ್ತಿದೆ, ರಸ್ತೆಗಳು ಕುಸಿದು ಕಂದಕಕ್ಕೆ ಉರುಳುತ್ತಿವೆ. ಬೆಟ್ಟಗುಡ್ಡಗಳ ಅಂಚಿನ ಜನರು ಜೀವಭೀತಿಯಿಂದ ಬದುಕುವ ಆತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ರಸ್ತೆಗಳ ನಡುವೆ ಬಿರುಕು ಬಿಟ್ಟು ಕಂದಕಗಳು ಸೃಷ್ಠಿಯಾಗುತ್ತಿದೆ. ರಸ್ತೆಯೇ ಕುಸಿದು ಪ್ರಪಾತಕ್ಕೆ ಸೇರುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಜೀವ ಅಂಗೈಯಲ್ಲಿಟ್ಟು ಓಡಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಎಲ್ಲಿ ಬೆಟ್ಟಗುಡ್ಡ ಕುಸಿದು ರಸ್ತೆ ಮೇಲೆ ಉರುಳಿ ಬೀಳುತ್ತದೆಯೋ, ರಸ್ತೆಯೇ ಕುಸಿದು ಪ್ರಪಾತಕ್ಕೆ ಸೇರುತ್ತದೆಯೋ ಎಂಬ ಆತಂಕದ ಛಾಯೆ ಜನರಲ್ಲಿ ಆವರಿಸಿದೆ.ಕಳೆದ ಕೆಲ ವರ್ಷಗಳಿಂದ ಮಲೆನಾಡಿನ ಬೆಟ್ಟಗುಡ್ಡಗಳು ಸೇರಿದಂತೆ ಪ್ರದೇಶಗಳಲ್ಲಿ ಬೇಸಿಗೆಯೆಲ್ಲಾ ಜೆಸಿಬಿ ಯಂತ್ರ ಗಳದ್ದೇ ಸದ್ದು ಮಾರ್ದನಿಸುತ್ತಿತ್ತು. ಬೆಟ್ಟಗುಡ್ಡಗಳನ್ನು ಕೊರೆದು ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣದಂತಹ ಅಭಿವೃದ್ಧಿ ಕಾಮಗಾರಿಗಳು ಎಗ್ಗಿಲ್ಲದೇ ನಡೆಯಿತು. ಬಹುತೇಕ ಅವೈಜ್ಞಾನಿಕ ಕಾಮಗಾರಿಯೂ ನಡೆಯಿತು. ಕೆಲವೆಡೆ ಗುಡ್ಡಗಳಲ್ಲಿ ಇದ್ದ ಬಂಡೆಗಳನ್ನು ಸ್ಪೋಟಕ ಬಳಸಿ ಒಡೆದು ಹಾಕಲಾಯಿತು. ಇದೀಗ ಮಳೆ ಅಬ್ಬರಕ್ಕೆ ಬೆಟ್ಟಗುಡ್ಡಗಳಲ್ಲಿ ಜಲ ಸಹಿತ ಮಣ್ಣು ಜಾರುತ್ತಿದ್ದು ಮಲೆನಾಡಿನಲ್ಲಿ ಪ್ರಕೃತಿ ಮುನಿದು ಎಚ್ಚರಿಕೆಯ ಗಂಟೆ ಭಾರಿಸಲಾರಂಬಿಸಿದೆ.
ಇಂತಹ ಒಂದು ಘಟನೆ ಕಣ್ಣೆದುರು ನಡೆದರೂ ಮತ್ತೆ ಮಲೆನಾಡಿನ ಪ್ರದೇಶಗಳಲ್ಲಿ ಜೆಸಿಬಿ ಯಂತ್ರಗಳ ಸದ್ದು ಹೆಚ್ಚತೊಡಗಿತು. ಕಂಡಕಂಡಲ್ಲಿ ರಸ್ತೆಗಳ ಅಭಿವೃದ್ಧಿಗೆ ಅವೈಜ್ಞಾನಿಕವಾಗಿ ಬೆಟ್ಟಗುಡ್ಡಗಳನ್ನು ಕೊರೆಯಲಾಯಿತು. ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ಕೊಪ್ಪದಿಂದ ಶೃಂಗೇರಿ ನೆಮ್ಮಾರು ತನಿಕೋಡುವರೆಗೂ ರಸ್ತೆ ಅಗಲೀಕರಣ ಕಾಮಗಾರಿ ವೇಳೆಯಲ್ಲಿ ಕಳೆದ 3-4 ವರ್ಷಗಳಿಂದ ರಸ್ತೆ ಬದಿಯ ಗುಡ್ಡಗಳನ್ನು ಕೊರೆದು, ಬಂಡೆಗಳನ್ನು ಪುಡಿ ಮಾಡಿ ಅಗಲೀಕರಣ ಮಾಡಲಾಯಿತು.
ಕೊಪ್ಪ ಶೃಂಗೇರಿ ಸಂಪರ್ಕ ಆನೆಗುಂದ , ತ್ಯಾವಣ ಬಳಿ ಉಂಟಾಗುತ್ತಿರುವ ಗುಡ್ಡಕುಸಿತ ನಿರಂತರ ಮುಂದುವರಿದಿದ್ದು ಬೃಹತ್ ಗುಡ್ಡಗಳಾದ ಇವನ್ನು ನಿರ್ಲಕ್ಷಿಸಿದಲ್ಲಿ ಶಿರೂರು ಘಟನೆಯಂತಹ ಘಟನೆ ಇಲ್ಲಿಯೂ ಮರುಕಳಿಸುವಲ್ಲಿ ಅನುಮಾನವಿಲ್ಲ. ಪಟ್ಟಣದ ಈಶ್ವರಿಗಿರಿ ಬೆಟ್ಟದ ಬಡುದಲ್ಲಿಯೂ ಕುಸಿತ ಉಂಟಾಗುತ್ತಿದೆ. ಇನ್ನು ಮಲೆನಾಡಿನ ಬುಕುಡಿ ಬೈಲು, ಶಂಕ್ಲಾಪುರ, ಮಲ್ನಾಡ್ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಗುಡ್ಡಗಳು ಕುಸಿದು ಬೀಳುತ್ತಿವೆ. ರಸ್ತೆ, ಭೂಕುಸಿತ ನಿರಂತರವಾಗಿ ಸಾಗಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಮಲೆನಾಡಿಗೆ ಮತ್ತಷ್ಟು ಕಂಟಕ ಕಾಡಲಿದೆ.
ಅಪಾಯ ಅರಿತು ಮುನ್ನೆಚ್ಚರಿಕೆ ಅಗತ್ಯ:
- ಕೆ.ಎಂ.ರಾಮಣ್ಣ ಕರುವಾನೆ.ಆನೆಗುಂದ
ಮಲೆನಾಡು ಪ್ರದೇಶಗಳಲ್ಲಿ ,ಭೂಕುಸಿತ, ಗುಡ್ಡಕುಸಿತದಂತದ ಘಟನೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪರಿಣಾಮ ಬೀರಬಹುದು.ಆ ನಿಟ್ಟಿನಲ್ಲಿ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
ತೊರೊಳ್ಳಿ, ತಾಲೂಕು ಕಿಸಾನ್ ಸೆಲ್ ಅಧ್ಯಕ್ಷ 4 ಶ್ರೀ ಚಿತ್ರ 1-
ಶೃಂಗೇರಿ ರಾ.ಹೆ.169 ರ ಮಂಗಳೂರು ಶೃಂಗೇರಿ ತ್ಯಾವಣ ಬಳಿ ಗುಡ್ಡಕುಸಿದುರಸ್ತೆಗೆ ಬೀಳುತ್ತಿರುವುದು.4 ಶ್ರೀ ಚಿತ್ರ 2-
ಶೃಂಗೇರಿ ಆನೆಗುಂದ ಸಮೀಪ ಬೃಹತ್ ಗುಡ್ಡ ಜಾರಿ ರಸ್ತೆಯ ಅಂಚಿಗೆ ಬೀಳುತ್ತಿರುವುದು.4 ಶ್ರೀ ಚಿತ್ರ 3-
ಕೆ.ಎಂ.ರಾಮಣ್ಣ4 ಶ್ರೀ ಚಿತ್ರ 4-
ಟಿ.ಕೆ.ಗೋಪಾಲ್ ನಾಯಕ್.