ಪತ್ರಕರ್ತರ ಬಡಾವಣೆಗೆ ನಿವೇಶನ ನೀಡಲಾಗುವುದು: ಸಂಸದ ಶ್ರೇಯಸ್ ಪಟೇಲ್

KannadaprabhaNewsNetwork |  
Published : Jul 20, 2024, 12:52 AM IST
ಚನ್ನರಾಯಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಸಂಸದ ಶ್ರೇಯಸ್ ಪಟೇಲ್  ಮಾತನಾಡಿದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ಪತ್ರಕರ್ತರಿಗೆ ಮುಂದಿನ ದಿನಗಳಲ್ಲಿ ಬಡಾವಣೆ ನಿರ್ಮಾಣ ಮಾಡಲು ನಿವೇಶನ ನೀಡಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು. ಚನ್ನರಾಯಪಟ್ಟಣದಲ್ಲಿ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.

ಪತ್ರಿಕಾ ದಿನ ಸಮಾರೋಪ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ಪತ್ರಕರ್ತರಿಗೆ ಮುಂದಿನ ದಿನಗಳಲ್ಲಿ ಬಡಾವಣೆ ನಿರ್ಮಾಣ ಮಾಡಲು ನಿವೇಶನ ನೀಡಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿಕ್ಕೋನಹಳ್ಳಿ ಸಾಯಿ ಮಂದಿರದಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಿ ಮಾತನಾಡಿ, ಜಿಲ್ಲೆಯಲ್ಲೇ ಒಂದು ಮಾದರಿ ಪತ್ರಕರ್ತರ ಸಂಘ ಇದ್ದರೆ ಅದು ಚನ್ನರಾಯಪಟ್ಟಣದ ತಾಲೂಕು ಪತ್ರಕರ್ತರ ಸಂಘ, ನನ್ನ ರಾಜಕೀಯ ಪ್ರವೇಶವಾಗಿದ್ದೂ ಕೂಡ ಇದೇ ತಾಲೂಕಿನಿಂದ ಎಂಬುದು ನನಗೆ ಹೆಮ್ಮೆ ಇದೆ, ಲೋಕಸಭಾ ಚುನಾವಣೆಯಲ್ಲೂ ಸಹ ಈ ಬಾರಿ ತಾಲೂಕಿನಿಂದ ಹೆಚ್ಚು ಮತಗಳು ಬಂದಿದ್ದು ಮರೆಯುವಂತಿಲ್ಲ. ಪತ್ರಕರ್ತರ ಸಂಘಕ್ಕೂ ನಮಗೂ ಅವಿನಾಭಾವ ಸಂಬಂಧ. ಆದ್ದರಿಂದ ಪತ್ರಕರ್ತರ ಸಂಘದ ಮನವಿ ನಾವು ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ. ಪತ್ರಕರ್ತರು ಒಬ್ಬ ಪ್ರಮಾಣಿಕ ರಾಜಕಾರಣಿಯನ್ನು ತಿದ್ದಿ ತೀಡುವ ಕೆಲಸವನ್ನು ಮಾಡುತ್ತಾರೆ. ಹಾಗೆಯೇ ನಮಗೂ ಕೂಡ ಉತ್ತಮ ಮಾರ್ಗದರ್ಶನವನ್ನು ನೀಡುತ್ತಾ ಸಮಾಜದಲ್ಲಿ ನಡೆಯುವ ಆಗುಹೋಗು ವಿಚಾರಗಳ ಬಗ್ಗೆ ತಿಳಿಸುವಂತೆ ಹೇಳಿದರು.

ಇತ್ತೀಚೆಗೆ ನಿಧನ ಹೊಂದಿದ ಪತ್ರಕರ್ತ ಹೇಮಕುಮಾರ್‌ರವರ ಕುಟುಂಬಕ್ಕೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಚೆಕ್ ನೀಡಿ ಸಾಂತ್ವನ ಹೇಳಿದರು.

ಸಾಯಿಬಾಬಾ ದೇವಾಲಯದ ಪೀಠಾಧ್ಯಕ್ಷ ಗುರುಮೂರ್ತಿ ಗುರೂಜಿ, ಸರ್ಕಾರಿ ವೈದ್ಯಾಧಿಕಾರಿ ಡಾ.ವಿ.ಮಹೇಶ್, ಹಿರಿಯ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್, ಅಶೋಕ್‌ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ನಟೇಶ್‌ ಕಾಳೇನಹಳ್ಳಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!