ರಾಜ್ಯಾದ್ಯಂತ ಏಕರೂಪ ಬಾಡಿಗೆ ದರ ನಿಗದಿಗೆ ಮಾಲೀಕರು ಸಹಕರಿಸಿ

KannadaprabhaNewsNetwork |  
Published : Jan 03, 2026, 01:30 AM IST
ಫೋಟೋ: 2 ಹೆಚ್‌ಎಸ್‌ಕೆ 1 ಮತ್ತು 21: ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ ನಡೆದ ಹೊಸಕೋಟೆ ತಾಲೂಕು ಜೆಸಿಬಿ, ಟಿಪ್ಪರ್, ಬ್ರೇಕರ್, ಟ್ರಾಕ್ಟರ್ ಮತ್ತು ಇಟಾಚಿ ಮಾಲೀಕರ ಸಭೆಗೆ ಆಗಮಿಸಿದ ಬೆಂಗಳೂರು ಜೆಸಿಬಿ, ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ದೇವರಾಜ್ ಗೌಡ ಅವರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ಹೊಸಕೋಟೆ: ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್‌ಗಳಿಗೆ ಬಾಡಿಗೆ ದರವನ್ನು ರಾಜ್ಯಾದ್ಯಂತ ಏಕರೂಪ ನಿಗದಿ ಮಾಡಲು ಮುಂದಾಗಿದ್ದು ಸಂಘಟನೆ ಕೈಗೊಳ್ಳುವ ನಿರ್ಧಾರಕ್ಕೆ ಮಾಲೀಕರು ಸಹಕರಿಸಿ ಎಂದು ಬೆಂಗಳೂರು ಜೆಸಿಬಿ, ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ದೇವರಾಜಗೌಡ ತಿಳಿಸಿದರು.

ಹೊಸಕೋಟೆ: ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್‌ಗಳಿಗೆ ಬಾಡಿಗೆ ದರವನ್ನು ರಾಜ್ಯಾದ್ಯಂತ ಏಕರೂಪ ನಿಗದಿ ಮಾಡಲು ಮುಂದಾಗಿದ್ದು ಸಂಘಟನೆ ಕೈಗೊಳ್ಳುವ ನಿರ್ಧಾರಕ್ಕೆ ಮಾಲೀಕರು ಸಹಕರಿಸಿ ಎಂದು ಬೆಂಗಳೂರು ಜೆಸಿಬಿ, ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ದೇವರಾಜಗೌಡ ತಿಳಿಸಿದರು.

ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ ನಡೆದ ಹೊಸಕೋಟೆ ತಾಲೂಕು ಜೆಸಿಬಿ, ಟಿಪ್ಪರ್, ಬ್ರೇಕರ್, ಟ್ರ್ಯಾಕ್ಟರ್ ಮತ್ತು ಇಟಾಚಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ವಾಹನಗಳ ಬೆಲೆ ಏರಿಕೆಯಾಗಿದ್ದು, ಬಂಡವಾಳ ಹಾಕಿ ವಾಹನ ಖರೀದಿ ಮಾಡಿ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ಇದರ ನಡುವೆ ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್, ಇಟಾಚಿ ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯಾಗಿದೆ. ಇದರ ನಡುವೆ ಡೀಸೆಲ್ ಬೆಲೆ ಏರಿಕೆ, ಚಾಲಕರ ವೇತನ, ತೆರಿಗೆ ಎಲ್ಲವನ್ನೂ ಕಟ್ಟಿ ಪೊಲೀಸರು, ಆರ್‌ಟಿಒ ಅಧಿಕಾರಿಗಳಿಗೆ ದಂಡ ಕಟ್ಟಿ ಕೆಲವೊಂದು ಭಾರಿ ಇಎಂಐ ಕಟ್ಟಲಾಗದ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆ ಮಾಲೀಕರ ನಡುವೆ ತೀವ್ರ ಪೈಪೋಟಿ ಇದ್ದು ಕಡಿಮೆ ಬೆಲೆಗೆ ವಾಹನಗಳನ್ನು ಬಾಡಿಗೆಗೆ ಕಳುಹಿಸುವುದನ್ನು ಬಿಡಬೇಕು. ಆದ್ದರಿಂದ ರಾಜ್ಯಾದ್ಯಂತ ಸಂಘಟನೆಯನ್ನು ಬಲಿಷ್ಠಗೊಳಿಸಿ ಏಕರೂಪ ಬಾಡಿಗೆ ದರ ನಿಗದಿಪಡಿಸಲಿದ್ದೇವೆ. ಇದಕ್ಕೆ ಮಾಲೀಕರ ಸಹಕಾರ ಕೂಡ ಅಗತ್ಯ ಎಂದು ಹೇಳಿದರು.

ತಾಲೂಕು ಸಂಘ ಸ್ಥಾಪಿಸಿ: ಈಗಾಗಲೆ ಬೆಂಗಳೂರು ನಗರದಲ್ಲಿ ಸಂಘಟನೆ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು ಸಂಘಟನೆ ನಿಗದಿಪಡಿಸಿದ ಬಾಡಿಗೆ ದರದಿಂದ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ. ಸಂಘದ ನಿಯಮಕ್ಕೆ ಬದ್ದರಾಗಿ ಮಾಲೀಕರು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಹೊಸಕೋಟೆ ತಾಲೂಕು ಸಂಘವನ್ನು ಸಹ 13 ಜನ ಪಧಾಧಿಕಾರಿಗಳೊಂದಿಗೆ ಪ್ರಾರಂಭ ಮಾಡಿ. ಎಲ್ಲಾ ಮಾಲೀಕರು ನಿಗದಿಪಡಿಸಿದ ಶುಲ್ಕ ಪಾವತಿಸಿ ಸದಸ್ಯತ್ವ ಪಡೆಯಿರಿ. ಮುಂದಿನ ದಿನಗಳಲ್ಲಿ ಸಂಘ ಕಷ್ಟ-ನಷ್ಟಗಳಿಗೆ ಬೆನ್ನೆಲುಬಾಗಿರಲಿದೆ ಎಂದು ತಿಳಿಸಿದರು.

ಜೆಸಿಬಿ, ಟಿಪ್ಪರ್ ಮಾಲೀಕ ಲಿಂಗಾಪುರ ಮಂಜುನಾಥ್ ಮಾತನಾಡಿ, ಟಿಪ್ಪರ್, ಜೆಸಿಬಿ, ಟ್ರ್ಯಾಕ್ಟರ್ ಮಾಲೀಕರು ಹಲವಾರು ವರ್ಷಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಿರಲಿಲ್ಲ. ಈಗ ಸಂಘಟನೆ ಮೂಲಕ ಒಗ್ಗಟ್ಟಾಗಿ ಸಂಘದ ನಿಬಂಧನೆಗಳಿಗೆ ಬದ್ದರಾಗಿ ಕೆಲಸ ಮಾಡಿದರೆ ಮಾಲೀಕರೆಲ್ಲಾ ನೆಮ್ಮದಿಯಾಗಿ ಬದುಕಬಹುದು. ಈ ನಿಟ್ಟಿನಲ್ಲಿ ಎಲ್ಲಾ ಮಾಲೀಕರು ಸಂಘಟಿತರಾಗಿ ಪರಸ್ಪರ ಸಹಕಾರ ಕೊಡಬೇಕು ಎಂದರು.

ಸಭೆಯಲ್ಲಿ ಬೆಂಗಳೂರು ಜೆಸಿಬಿ, ಟಿಪ್ಪರ್ ಮಾಲೀಕರ ಸಂಘದ ಉಪಾಧ್ಯಕ್ಷ ರಮೇಶ್, ಬಾಬು, ಖಜಾಂಚಿ ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಿ.ಕುಮಾರ್, ಹೊಸಕೋಟೆ ತಾಲೂಕಿನ ಪದಾಧಿಕಾರಿಗಳಾದ ಶಿವಾನಂದ್, ತಾವರೆಕೆರೆ ನಾಗೇಶ್, ನಾಗರಾಜ್, ನಂದಕುಮಾರ್, ಎಂಡಿಸಿ ಮಂಜುನಾಥ್, ಕುಮಾರ್, ವಿಜಯ್ ಕುಮಾರ್, ಜೆಸಿಬಿ ರಾಜಣ್ಣ, ರವಿ ಹಾಜರಿದ್ದರು.

ಫೋಟೋ: 2 ಹೆಚ್‌ಎಸ್‌ಕೆ 1 ಮತ್ತು 2

ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ ಹೊಸಕೋಟೆ ತಾಲೂಕು ಜೆಸಿಬಿ, ಟಿಪ್ಪರ್, ಬ್ರೇಕರ್, ಟ್ರ್ಯಾಕ್ಟರ್ ಮತ್ತು ಇಟಾಚಿ ಮಾಲೀಕರ ಸಭೆಗೆ ಆಗಮಿಸಿದ ಬೆಂಗಳೂರು ಜೆಸಿಬಿ, ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ದೇವರಾಜಗೌಡ ಅವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಲೇಔಟ್‌ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ: ರಾಮಲಿಂಗಾರೆಡ್ಡಿ
ಧರ್ಮಸ್ಥಳ ಸಂಸ್ಥೆಯಿಂದ ಗಿಡ ನೆಟ್ಟು ನೂತನ ಸಂವತ್ಸರ ಆಚರಣೆ