ಧರ್ಮಸ್ಥಳ ಸಂಸ್ಥೆಯಿಂದ ಗಿಡ ನೆಟ್ಟು ನೂತನ ಸಂವತ್ಸರ ಆಚರಣೆ

KannadaprabhaNewsNetwork |  
Published : Jan 03, 2026, 01:30 AM IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗಿಡ ನೆಡುವ ಮುಖಾಂತರ ನೂತನ ಸಂವತ್ಸರದ ಆಚರಣೆ | Kannada Prabha

ಸಾರಾಂಶ

ಯುವ ಸಮೂಹ ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿಗಳಿಗೆ ದುಂದುವೆಚ್ಚ ಮಾಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವದನ್ನು ಮನಗಂಡ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನರಿಗೆ ಹೊಸ ಸಂವತ್ಸರದ ಮಹತ್ವವನ್ನು ತಿಳಿಸಲು ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ತಿಪಟೂರು

ತಾಲೂಕಿನ ಚಿಕ್ಕಹೊನ್ನವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಲ್ಪವೃಕ್ಷ ನೆಡುವ ಮುಖಾಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಉದಯ್.ಕೆ ನೇತೃತ್ವದಲ್ಲಿ ನೂತನ ಸಂವತ್ಸರ ಆಚರಿಸಲಾಯಿತು.

ವಿದ್ಯಾರ್ಥಿಗಳೊಟ್ಟಿಗೆ ಶಾಲಾ ಆವರಣದಲ್ಲಿ ತೆಂಗಿನ ಸಸಿ ನಾಟಿ ಮಾಡಿ ಶುಭ ಹಾರೈಸಿದ ಉದಯ್, ೨೦೨೫ನೇ ಸಂವತ್ಸರದ ಮಧುರ ಕ್ಷಣ ನೆನೆಸಿಕೊಳ್ಳುತ್ತಾ ಕಹಿ ನೆನಪುಗಳನ್ನು ತೊಡೆದು ೨೦೨೬ರ ನೂತನ ಸಂವತ್ಸರಕ್ಕೆ ನಾವೆಲ್ಲಾ ಕಾಲಿಡುತ್ತಿದ್ದೇವೆ. ಎಲ್ಲರಿಗೂ ಶುಭವಾಗಲಿ ಎಂದರು.

ಯುವ ಸಮೂಹ ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿಗಳಿಗೆ ದುಂದುವೆಚ್ಚ ಮಾಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವದನ್ನು ಮನಗಂಡ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನರಿಗೆ ಹೊಸ ಸಂವತ್ಸರದ ಮಹತ್ವವನ್ನು ತಿಳಿಸಲು ಹೇಳಿದ್ದಾರೆ. ಸಸಿನೆಡುವ ಕಾರ್ಯಕ್ರಮ, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಉಚಿತ ಹಣ್ಣು ಹಂಪಲು ವಿತರಣೆ, ಶ್ರದ್ಧಾಕೇಂದ್ರಗಳ ಸ್ವಚ್ಛತೆ ಮುಖೇನ ಸಮಾಜಮುಖಿ ಕಾರ್ಯ ಮಾಡಲು ತಿಳಿಸಿದ್ದಾರೆ. ದಯವಿಟ್ಟು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿ ರಾಜ್ಯದ ಜನತೆ ನೂತನ ಸಂವತ್ಸರಾಚರಣೆ ಮಾದರಿಯಾಗಿ ಬದಲಾಗಬೇಕು. ತಾಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಿರುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲ್ಲಾ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿ ವಿನಂತಿಸಿದರು.

ಶಾಲೆ ಮುಖ್ಯ ಶಿಕ್ಷಕರಾದ ಉಮೇಶ್, ಡೈರಿ ಕಾರ್ಯದರ್ಶಿ ಅಶೋಕ್, ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಒಕ್ಕೂಟ ಅಧ್ಯಕ್ಷರಾದ ವೀಣಾ, ಸೇವಾ ಪ್ರತಿನಿಧಿಗಳಾದ ರೇಣುಕಮ್ಮ, ಮಮತ ಹಾಗೂ ವಿದ್ಯಾರ್ಥಿಗಳು ಸೇರಿ ಧರ್ಮಸ್ಥಳ ಸಂಘದ ಪಾಲುದಾರಬಂಧುಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ