ಹುಲಿಕೆರೆ ಸುರಂಗ ಬಳಿ ಭೂ ಕುಸಿತ: ಗ್ರಾಮಸ್ಥರ ಆತಂಕ

KannadaprabhaNewsNetwork |  
Published : Nov 08, 2023, 01:01 AM IST
೭ಕೆಎಂಎನ್‌ಡಿ-೪ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿರುವ ಸ್ಥಳದ ದೃಶ್ಯ. | Kannada Prabha

ಸಾರಾಂಶ

ಹುಲಿಕೆರೆ ಸುರಂಗ ಬಳಿ ಭೂ ಕುಸಿತ: ಗ್ರಾಮಸ್ಥರ ಆತಂಕದುದ್ದ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ

- ದುದ್ದ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ

- ಮೇಲ್ಭಾಗದಲ್ಲಿ ನಿರ್ಮಿಸಿದ್ದ ಫ್ಲೋರ್‌ಮಿಲ್ ಗೋಡೆ ಕುಸಿತಕನ್ನಡಪ್ರಭ ವಾರ್ತೆ ಮಂಡ್ಯ

ಏಷ್ಯಾದ ಮೊಟ್ಟ ಮೊದಲ ಸುರಂಗ ನಾಲೆ ಹುಲಿಕೆರೆ ಸುರಂಗದ ಬಳಿ ಸೋಮವಾರ ರಾತ್ರಿ ಭೂ ಕುಸಿತ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ತಾಲೂಕಿನ ದುದ್ದ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಭೂ ಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ.

ಹುಲಿಕೆರೆ ಸುರಂಗದಿಂದ ಕೇವಲ ೨೦ ಮೀಟರ್ ದೂರದಲ್ಲಿ ಭೂ ಕುಸಿತ ಉಂಟಾಗಿದೆ. ಅದರ ಪಕ್ಕದಲ್ಲೇ ನಿರ್ಮಾಣಗೊಂಡಿದ್ದ ಹಲ್ಲರ್ ಫ್ಲೋರ್‌ಮಿಲ್‌ನ ಗೋಡೆಯೂ ಕುಸಿದಿದ್ದು, ಒಳಗಡೆ ಯಾರೂ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹುಲಿಕೆರೆ ಸುರಂಗ ಆಧುನೀಕರಣ ಮಾಡುವ ವೇಳೆ ಮಣ್ಣು ಹಾಗೂ ಸಾಮಗ್ರಿ ಸಾಗಿಸಲು ದಾರಿ ಮಾಡಿಕೊಂಡಿದ್ದ ಜಾಗದಲ್ಲಿ ಭೂ ಕುಸಿತ ಸಂಭವಿಸಿದೆ. ಸುರಂಗಕ್ಕೆ ಸಂಪರ್ಕ ಕಲ್ಪಿಸಿದ್ದ ಜಾಗವನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಟಿರಲಿಲ್ಲ. ಮೇಲ್ಭಾಗದಲ್ಲಿ ಮಣ್ಣು ಹಾಕಿ ಮುಚ್ಚಿದ್ದು, ಅದೇ ಜಾಗದಲ್ಲಿ ರಾಜಣ್ಣ ಎಂಬುವರು ಫ್ಲೋರ್‌ಮಿಲ್ ನಿರ್ಮಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ದುದ್ದ ಗ್ರಾಮದ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿರುವ ಪರಿಣಾಮ ಮಣ್ಣು ಸಡಿಲಗೊಂಡು ಭೂ ಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಭೂ ಕುಸಿತ ಸಂಭವಿಸಿದ ಜಾಗವನ್ನು ನೋಡುವುದಕ್ಕೆ ಜನಸಾಗರವೇ ನೆರೆದಿತ್ತು. ಮೊದಲು ಸುರಂಗ ಕುಸಿದಿರುವುದಾಗಿ ಶಂಕಿಸಲಾಗಿತ್ತು. ಆದರೆ, ಸುರಂಗದ ಮೇಲ್ಭಾಗದಲ್ಲಿ ಭೂ ಕುಸಿತ ಸಂಭವಿಸಿರುವುದು ಬೆಳಕಿಗೆ ಬಂದಿತು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ