ಭಾಷಾ ಬಾಂಧವ್ಯ: ಮರಾಠಿ ಮುಖಂಡರಿಂದ ಚನ್ನಮ್ಮ, ರಾಯಣ್ಣನಿಗೆ ಪೂಜೆ

KannadaprabhaNewsNetwork |  
Published : Nov 02, 2025, 04:15 AM IST
ಬೆಳಗಾವಿಯ ಭಾಗ್ಯನಗರದಲ್ಲಿ ಮರಾಠಿ ಮುಖಂಡರು ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿರಾಯಣ್ಣ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಲವಕ್ಕೆ ಚಾಲನೆ ನೀಡಿದರು | Kannada Prabha

ಸಾರಾಂಶ

ಒಂದೆಡೆ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಿಸಿದರೆ, ಮತ್ತೊಂದೆಡೆ ಅದೇ ಬೆಳಗಾವಿಯ ಭಾಗ್ಯನಗರದಲ್ಲಿ ಮರಾಠಿ ಮುಖಂಡರು ಕನ್ನಡದ ಕ್ರಾಂತಿವೀರರ ಪಾದಸ್ಪರ್ಶದಿಂದ ನಿಜವಾದ ಭಾಷಾಭಾಂಧವ್ಯಕ್ಕೆ ನಿದರ್ಶನ ನೀಡಿದ ಅಪರೂಪದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಒಂದೆಡೆ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಿಸಿದರೆ, ಮತ್ತೊಂದೆಡೆ ಅದೇ ಬೆಳಗಾವಿಯ ಭಾಗ್ಯನಗರದಲ್ಲಿ ಮರಾಠಿ ಮುಖಂಡರು ಕನ್ನಡದ ಕ್ರಾಂತಿವೀರರ ಪಾದಸ್ಪರ್ಶದಿಂದ ನಿಜವಾದ ಭಾಷಾಭಾಂಧವ್ಯಕ್ಕೆ ನಿದರ್ಶನ ನೀಡಿದ ಅಪರೂಪದ ಘಟನೆ ನಡೆದಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ಜೋಶಿ ಅವರ ವಾರ್ಡನ ಭಾಗ್ಯನಗರ ಎರಡನೇ ಕ್ರಾಸ್ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳದವರು ಆಯೋಜಿಸಿದ ರಾಜ್ಯೋತ್ಸವ ಸಂಭ್ರಮ ಬಣ್ಣ ತುಂಬಿತು. ಈ ವರ್ಷ ಚನ್ನಮ್ಮ ಹಾಗೂ ರಾಯಣ್ಣರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಮರಾಠಿ ಮುಖಂಡರಾದ ಮಧು ಗುರುವ ಮತ್ತು ಆದಿನಾಥ ದೇಸಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು.ಪೂಜೆ ಸಲ್ಲಿಸಿದ ಬಳಿಕ ಅವರು ಚನ್ನಮ್ಮ ಹಾಗೂ ರಾಯಣ್ಣ ಕನ್ನಡಿಗರ ಹೆಮ್ಮೆಯೇ ಅಲ್ಲ, ಇಡೀ ಭಾರತದ ಸ್ವಾಭಿಮಾನಿಗಳ ಸಂಕೇತ ಎಂದು ಹೇಳಿ ಜೈಕಾರ ಹಾಕಿದರು. ಇದೇ ವೇಳೆ ಜೈ ಚನ್ನಮ್ಮ! ಜೈ ರಾಯಣ್ಣ ಎಂಬ ಘೋಷಣೆಗಳು ಭಾಗ್ಯನಗರದದಲ್ಲಿ ಭರ್ಜರಿಯಾಗಿ ಕೇಳಿಬಂದವು.ಕನ್ನಡ-ಮರಾಠಿ ಹೃದಯ ಸೇತುವೆ:

ಇದೊಂದು ಭಾಷಾ ಸಮರದಿಂದಲೂ ತಲ್ಲಣಗೊಂಡು ಬಂದಿರುವ ಗಡಿನಾಡಿನ ನೆಲದಲ್ಲಿ ನಿಜವಾದ ಸಂಸ್ಕೃತಿ ಭಾವನೆಗೆ ಜೀವ ತುಂಬಿದ ಘಟನೆಯಾಗಿ ಸ್ಥಳೀಯರು ಪರಿಗಣಿಸಿದ್ದಾರೆ. ಇದು ನಾಡದ ಪ್ರೀತಿ ಮೀರಿದ ಮಾನವೀಯತೆ .ಇದೇ ಬೆಳಗಾವಿಯ ನಿಜವಾದ ಸಂಸ್ಕೃತಿ ಎಂದು ಯುವಕ ಮಂಡಳದವರು ಅಭಿಪ್ರಾಯಪಟ್ಟರು. ಪೊಲೀಸರು ಸಹಕಾರ:

ದೀಪಾವಳಿಯ ನಿಮಿತ್ತ 2ನೇ ಕ್ರಾಸ್‌ನಲ್ಲಿ ಕಟ್ಟಲಾಗಿದ್ದ ವಿದ್ಯುತ್ ಅಲಂಕಾರ ಮತ್ತು ಭಗವಾ ಪರಪರಿಗಳು ಮೆರವಣಿಗೆಗೆ ಅಡಚಣೆಯಾಗಿದ್ದರೂ, ಟಿಳಕವಾಡಿ ಪೊಲೀಸರ ತ್ವರಿತ ಕ್ರಮದಿಂದ ಎಲ್ಲವೂ ಸುಗಮವಾಯಿತು.

ರಸ್ತೆ ಮಧ್ಯದಲ್ಲಿದ್ದ ವಿದ್ಯುತ್ ಸರಗಳನ್ನು ತೆರವುಗೊಳಿಸಿ, ಸಂಭ್ರಮದ ಕಾರ್ಯಕ್ರಮ ಅಡಚಣೆಯಿಲ್ಲದೆ ನಡೆಯುವಂತೆ ಸಹಕರಿಸಿದರು. ಮೆರವಣಿಗೆಯ ಮಾರ್ಗದಲ್ಲಿದ್ದ ನಿವಾಸಿಗಳೂ ಸಹ ಸಕಾಲದಲ್ಲಿ ಪರಪರಿಗಳನ್ನು ತೆರವು ಮಾಡಿ ಕನ್ನಡದ ಹಬ್ಬ ನಮ್ಮ ಹಬ್ಬ ಎಂಬ ಮನೋಭಾವ ತೋರಿದರು.

ಭಾಗ್ಯನಗರದಲ್ಲಿ ನಡೆದ ಈ ದೃಶ್ಯ, ಗಡಿನಾಡದ ರಾಜಕೀಯ-ಭಾಷಾ ವಿವಾದಗಳ ಮಧ್ಯೆ ನಾಡಭಾವನೆ ಮತ್ತು ಮಾನವೀಯತೆ ಗೆದ್ದ ಕಣಜದಂತೆ ಪರಿವರ್ತನೆಯಾಗಿದೆ.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ