ಶಿರಾಳಕೊಪ್ಪ: ಮೊಬೈಲ್ ಹಾವಳಿಯಿಂದ ಭಾಷೆ, ಸಾಹಿತ್ಯ ಬೆಳೆಯದೇ ಕುಂಠಿತವಾಗುತ್ತಿದೆ ಎಂದು ಎಸ್ ಐ. ಪ್ರಶಾಂತ ಕುಮಾರ ಹೇಳಿದರು.
ಸೊರಬ ಸರ್ಕಾರಿ ಸ.ಪ.ಪೂ ಕಾಲೇಜಿನ ಪ್ರಾಧ್ಯಾಪಕ ಶಂಕರ್ ನಾಯಕ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ದಾಸರಕೊಡುಗೆ ಅಪಾರವಾದದ್ದು. ಸಂಗೀತ ಪಿತಾಮಹ ಪುರಂದರ ದಾಸರು ಮತ್ತು ಕನಕದಾಸರು ತಮ್ಮ ಕೀರ್ತನೆಗಳಿಂದ ನಾಡಿನಲ್ಲಿ ಪ್ರಖ್ಯಾತರಾಗಿ ಉಳಿದಿದ್ದು, ಕೀತರ್ನೆಗಳು ಸದಾ ಎಲ್ಲ ಜನಾಂಗದವರ ಮನದಲ್ಲಿ ಉಳಿಯುವಂತೆ ಹಾಡಿದ್ದಾರೆ ಎಂದರು.
ಕಾರ್ಯಕ್ರಮದ ಶಾಲೆಯ ಮುಖ್ಯೋಪಾಧ್ಯಾಯ ಪಿ. ನಾಗರಾಜಪ್ಪ, ಶಿಕಾರಿಪುರ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ವೈ.ಎಸ್ ಮಾತನಾಡಿದರು.ವೇದಿಕೆ ಮೇಲೆ ಶಾಲಾ ಸಮಿತಿ ಅಧ್ಯಕ್ಷ ಬಸವರಾಜ್ ಅಕ್ಕಿ, ಶಿರಾಳಕೊಪ್ಪ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸುರಹೊನ್ನೆ, ನಿವೃತ್ತ ಸೈನಿಕ ಕ್ರಷ್ಣಮೂರ್ತಿ, ಶಾಲಾ ಸಮಿತಿ ಸದಸ್ಯರಾದ ಪರಮೇಶ್ವರಪ್ಪ, ಹಾಲೇಶಪ್ಪ, ಆಶಾ ಮಂಜುನಾಥ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ರಂಜಿತಾ ಕಾಯರ್ಕ್ರಮ ನಿರೂಪಿಸಿದರು.