೨೧೫ ಕೇಸಲ್ಲಿ ೫೮ ಸಾವು, ೨೦೦ ಕ್ಕೂ ಹೆಚ್ಚು ಮಂದಿಗೆ ಗಾಯ । ಗುಂಡ್ಲುಪೇಟೆ ಠಾಣೆ ೩೩, ಬೇಗೂರು ೨೩, ತೆರಕಣಾಂಬಿ ೨ ಸಾವುರಂಗೂಪುರ ಶಿವಕುಮಾರ್
೨೦೨೩ ರ ಅವಧಿಯಲ್ಲಿ ತಾಲೂಕಲ್ಲಿ ೨೧೫ ರಸ್ತೆ ಅಪಘಾತದ ಪ್ರಕರಣದಲ್ಲಿ ೫೮ ಮಂದಿ ಸಾವನ್ನಪ್ಪಿದ್ದು, ೨೦೦ ಕ್ಕೂ ಹೆಚ್ಚು ಮಂದಿ ವಿವಿಧ ರೀತಿಯಲ್ಲಿ ಗಾಯಾಳುಗಳಾಗಿದ್ದಾರೆ.
ತಾಲೂಕಿನ ಗುಂಡ್ಲುಪೇಟೆ, ಬೇಗೂರು,ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತಗಳು ನಡೆದಿದ್ದು ಅಪಘಾತದಲ್ಲಿ ಅಂಥ ಭೀಕರ ಅಪಘಾತಗಳು ನಡೆದಿಲ್ಲ. ಕೇವಲ ೨ ಅಥವಾ ೩ ಮಂದಿ ಒಂದೆರಡು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಲೂಕಿನ ಸರಹದ್ದಿನಲ್ಲಿ ಈ ಸಾಲಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿವೆ. ಬೇಗೂರು ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು ವಿ.ಸಿ ಹಾಗೂ ಗುಂಡ್ಲುಪೇಟೆ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ಪರಶಿವಮೂರ್ತಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ತಾಲೂಕಿನ ಗುಂಡ್ಲುಪೇಟೆ,ಬೇಗೂರು, ತೆರಕಣಾಂಬಿ ಠಾಣೆಯಲ್ಲಿ ೨೦೨೩ ನೇ ಸಾಲಿನಲ್ಲಿ ೧೬೮೧ ಪ್ರಕರಣಗಳಲ್ಲಿ ೧೦.೮೮ ಲಕ್ಷಕ್ಕೂ ಹೆಚ್ಚು ದಂಡ ವಸೂಲಿಯಾಗಿದೆ.ಚಾಲಕ/ಮಾಲೀಕ ಕುಡಿದು ಚಾಲನೆ ಮಾಡುವ ವೇಳೆ ಹೆಚ್ಚಿನ ಕೇಸು ಹೆಚ್ಚಾಗಿವೆ.
ಸವಾರರಿಗೆ ಕನ್ನಡಪ್ರಭ ಕೆಲ ಟಿಪ್ಸ್
2 ವಾಹನ ಕೈಗೆ ಸಿಕ್ಕಿತು ಎನ್ನುವ ಭರದಲ್ಲಿ ವೇಗದ ಇತಿಮಿತಿಯ ಜೊತೆಗೆ ¨ವೇಗದ ಪರಿಜ್ಞಾನ ಅರಿಯಬೇಕಿದೆ ಹಾಗೂ ನಮ್ಮ ಮನೆಯ ಮಂದಿ ಕಾಯುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವಿಲ್ಲದೆ ಇದ್ದರೆ ಅಪಘಾತಕ್ಕೆ ಕಾರಣವಾಗಲಿದೆ.
ಗುಂಡ್ಲುಪೇಟೆ, ಬೇಗೂರು ಠಾಣಾ ವ್ಯಾಪ್ತಿಯ ಮೈಸೂರು-ಊಟಿ ಹಾಗು ಗುಂಡ್ಲುಪೇಟೆ-ಕೇರಳ ಹೆದ್ದಾರಿ ನಾಲ್ಕು ಪಥದ ರಸ್ತೆಯಾಗುವ ತನಕ ಅಪಘಾತಗಳ ಸಂಖ್ಯೆ ಇಳಿಮುಖವಾಗುವುದಿಲ್ಲ.ನಂಜನಗೂಡಿಂದ ಗುಂಡ್ಲುಪೇಟೆ ಮಾರ್ಗ ಮೇಲುಕಾಮನಹಳ್ಳಿ ಹಾಗೂ ಮದ್ದೂರು ತನಕ ನಾಲ್ಕು ಪಥ ರಸ್ತೆಯಾದರೆ ಜನರ ಸಾವು, ನೋವುಗಳು ತಪ್ಪಲಿದೆ.
೨೦೨೩ ರ ಹೊಸ ವರ್ಷದಲ್ಲಾದರೂ ಅಪಘಾತಗಳು ಕಡಿಮೆಯಾಗಲಿ.ವಾಹನ ಮಾಲೀಕರು ಹಾಗು ಚಾಲಕರು ಮೊದಲು ಕುಡಿದು ಚಾಲನೆ ಮಾಡುವುದನ್ನು ಬಿಟ್ಟರೆ ಹೆಚ್ಚಿನ ಅಪಘಾತ ತಡೆಯಬಹುದು.ರಸ್ತೆ ಸುರಕ್ಷತಾ ಸಪ್ತಾಹದ ಸಮಯದಲ್ಲಿ ರಸ್ತೆ ಅಪಘಾತಗಳು, ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ನಾಲ್ಕು ಪಥದ ರಸ್ತೆ ಆದರೆ ಅಪಘಾತ ಕಡಿಮೆಯಾಗಲಿದೆ.ವನರಾಜು ವಿ.ಸಿ, ಸರ್ಕಲ್ ಇನ್ಸ್‌ಪೆಕ್ಟರ್, ಬೇಗೂರು ಠಾಣೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ರಸ್ತೆಯಲ್ಲಿ ಕಾರು, ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂಗೊಂಡಿದೆ.