ಕನ್ನಡಪ್ರಭ ವಾರ್ತೆ, ಕಡೂರು
ಬಿಡುವಿನ ಕಾಲದಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆ ರೈತಾಪಿ ವರ್ಗಕ್ಕೆ ಮನರಂಜನೆ ನೀಡುವ ಕ್ರೀಡೆ ಆಗಿದ್ದು ಅದರಲ್ಲೂ ನಮ್ಮ ಯುವಕರಿಗೆ ಹಬ್ಬದ ಸಂಭ್ರಮವಾಗಿರುತ್ತದೆ ಎಂದು ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು. ಪಟ್ಟಣದ ಸಮೀಪದ ಹರುವನಹಳ್ಳಿ ಗ್ರಾಮದ ರಾಯಣ್ಣ ಯುವ ಪಡೆಯಿಂದ ಆಯೋಜಿಸಿದ್ದ 2 ದಿನಗಳ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ವರ್ಷಪೂರ್ತಿ ಹೊಲಗಳಲ್ಲಿ ದುಡಿಯುವ ರೈತಾಪಿವರ್ಗಕ್ಕೆ ಬೇಸಿಗೆ ಬಂತೆಂದರೆ ಅದರಲ್ಲಿಯೂ ಬಯಲು ಸೀಮೆ ರೈತರು ಎತ್ತಿನಗಾಡಿ ಸ್ಪರ್ಧೆಗಳನ್ನು ಆಯೋಜಿಸುವುದು ವಾಡಿಕೆಯಾಗಿರುವ ಜೊತೆ ಇದು ಗ್ರಾಮೀಣ ಭಾಗದ ರೈತರ ಕ್ರೀಡೆ ಎನ್ನಬಹುದು. ಹರುವನಹಳ್ಳಿಯ ಯುವಕರು ಸುತ್ತಮುತ್ತ ನಡೆಯುವ ಜೋಡೆತ್ತಿನ ಗಾಡಿ ಸ್ಪರ್ಧೆಗಳನ್ನು ಕಂಡು ನಾವು ಯಾಕೆ ನಮ್ಮ ಗ್ರಾಮದಲ್ಲಿ ಮಾಡಬಾರದು ಎಂಬ ಮಹದಾಸೆಯಿಂದ ಇದೇ ಮೊಟ್ಟಮೊದಲಿಗೆ ಈ ಕ್ರೀಡೆಯನ್ನು ಆಯೋಜಿಸಿದ್ದಾರೆ. ನೆರೆ ಊರು, ಬರೆಬೇರೆ ಊರುಗಳಿಂದ ಬರುವವರನ್ನು ಸ್ನೇಹದಿಂದ ಕಂಡು ಗ್ರಾಮಕ್ಕೆ, ತಾಲೂಕಿಗೂ ಹೆಸರು ತನ್ನಿ ಎಂದು ರಾಯಣ್ಣ ಯುವ ಪಡೆಗೆ ಕಿವಿ ಮಾತು ಹೇಳಿದರು.ಸ್ಪರ್ಧೆ ಯಾವುದೇ ಇದ್ದರೂ ತೀರ್ಪುಗಾರರು ತಪ್ಪು ಮಾಡದೆ ನ್ಯಾಯ ಸಮ್ಮತವಾಗಿ ತೀರ್ಪು ನೀಡಬೇಕು ಆಗ ಮಾತ್ರ ನಂಬಿಕೆ, ವಿಶ್ವಾಸ ಹೆಚ್ಚಲು ಸಾಧ್ಯಗೆಲುವು-ಸೋಲು ಮುಖ್ಯವಲ್ಲ ಭಾಗವಹಿಸಿದ ನೆನಪುಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿನಯ್, ರಾಯಣ್ಣ ಯುವ ಪಡೆ ಅಧ್ಯಕ್ಷ ಮಧು, ಸುನೀಲ್, ಸತೀಶ್, ತಮ್ಮಯ್ಯ ಅಶೋಕ್, ಮೋಹನ್, ಗ್ರಾಪಂ ಅಧ್ಯಕ್ಷ ರಘು, ಡೈರಿ ಆನಂದ್, ಯುವ ಪಡೆಯ ಯುವಕರು ಗ್ರಾಮಸ್ಥರು ಇದ್ದರು.5ಕೆಕೆಡಿಯು1.
ಕಡೂರು ತಾಲೂಕು ಹರುವನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಗೆ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಗಾಡಿ ಓಡಿಸುವ ಮೂಲಕ ಚಾಲನೆ ನೀಡಿದರು.ರಾಯಣ್ಣ ಯುವ ಪಡೆಯ ಯುವಕರು ಇದ್ದರು.