ನೆನಗುದಿಗೆ ಬಿದ್ದಿದ್ದ ಅಂಗನವಾಡಿ ಕಾನನಕೊಪ್ಪಲು ಅಂಗನವಾಡಿಗೆ ಚಾಲನೆ

KannadaprabhaNewsNetwork |  
Published : Jun 05, 2025, 01:34 AM IST
4ಎಚ್ಎಸ್ಎನ್13ಎ : ಅರಕಲಗೂಡು ತಾಲೂಕು ಕಾನನಕೊಪ್ಪಲು ಗ್ರಾಮದ ಅಂಗವಾಡಿ ಕಾರ್ಯಕರ್ತೆಯ ವಾಸದ ಮನೆಯಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದು. | Kannada Prabha

ಸಾರಾಂಶ

ಕಾನನಕೊಪ್ಪಲು ಗ್ರಾಮದಲ್ಲಿ ನೆನಗುದಿಗೆ ಬಿದ್ದಿದ್ದ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಗ್ರಾಮಸ್ಥರ ಸಹಕಾರದೊಂದಿಗೆ ಚಾಲನೆ ನೀಡಲಾಗಿದೆ ಎಂದು ತಾಲೂಕು ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ್ ತಿಳಿಸಿದರು. ಕಾನನಕೊಪ್ಪಲು ಗ್ರಾಮದ ಗ್ರಾಮಠಾಣ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಗ್ರಾಮಸ್ಥರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ಕೆಲಸ ನೆನಗುದಿಗೆ ಬಿದ್ದಿತ್ತು. ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಕಟ್ಟಡ ನಿರ್ಮಾಣ ಜಾಗವನ್ನು ಸ್ವಾಧೀನಕ್ಕೆ ಪಡೆದು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ಅಳತೆ ಕೂಡ ಮಾಡಿ ಜಿಪಂ ಎಇಇ, ಜೆಇ, ಸಿಡಿಪಿಒ ಸಮ್ಮುಖದಲ್ಲಿ ಫೌಂಡೇಷನ್ ಕೆಲಸವನ್ನು ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಕಾನನಕೊಪ್ಪಲು ಗ್ರಾಮದಲ್ಲಿ ನೆನಗುದಿಗೆ ಬಿದ್ದಿದ್ದ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಗ್ರಾಮಸ್ಥರ ಸಹಕಾರದೊಂದಿಗೆ ಚಾಲನೆ ನೀಡಲಾಗಿದೆ ಎಂದು ತಾಲೂಕು ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ್ ತಿಳಿಸಿದರು.

ಕಾನನಕೊಪ್ಪಲು ಗ್ರಾಮದ ಗ್ರಾಮಠಾಣ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಗ್ರಾಮಸ್ಥರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ಕೆಲಸ ನೆನಗುದಿಗೆ ಬಿದ್ದಿತ್ತು. ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಕಟ್ಟಡ ನಿರ್ಮಾಣ ಜಾಗವನ್ನು ಸ್ವಾಧೀನಕ್ಕೆ ಪಡೆದು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ಅಳತೆ ಕೂಡ ಮಾಡಿ ಜಿಪಂ ಎಇಇ, ಜೆಇ, ಸಿಡಿಪಿಒ ಸಮ್ಮುಖದಲ್ಲಿ ಫೌಂಡೇಷನ್ ಕೆಲಸವನ್ನು ಆರಂಭಿಸಲಾಗಿದೆ. ಗ್ರಾಮಸ್ಥರು ಕೆಲಸ ನಡೆಯುವ ವೇಳೆ ನಿಂತ್ತು ಗುಣಮಟ್ಟದ ಕೆಲಸ ಮಾಡಿಸಿಕೊಂಡು ಪುಟ್ಟಮಕ್ಕಳ ಶೈಕ್ಷಣಿಕ ಬೆಳವಣಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಇಲಾಖೆ ವತಿಯಿಂದ ದೊರೆಯುವ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಕಾನನಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ಕಟ್ಟಡವಿಲ್ಲದೇ ಕಾರ್ಯಕರ್ತೆಯರ ವಾಸದ ಮನೆಯಲ್ಲಿಯೇ ಕಳೆದ ಆರು ವರ್ಷಗಳಿಂದಲೂ ಕೂಡ ನಡೆಯುತ್ತಿದೆ. ಸುಮಾರು 15ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. 10ಕ್ಕೂ ಹೆಚ್ಚುಮಂದಿ ಗರ್ಭಿಣಿಯರು, ಬಾಣಂತಿಯರು ಸಹ ಫಲಾನುಭವಿಗಳಾಗಿದ್ದಾರೆ. 2022-23ರಲ್ಲಿಯೇ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 23 ಲಕ್ಷ ರು. ಮಂಜೂರಾಗಿ, ಏಜೆನ್ಸಿ ಕೂಡ ಫಿಕ್ಸ್ ಆಗಿದೆ. ಟೆಂಡರ್‌ ಪಡೆದಿರುವ ವ್ಯಕ್ತಿಗೆ ಕಾರ್ಯಾದೇಶ ಕೂಡ ನೀಡಲಾಗಿದೆ. ಜಾಗವನ್ನು ಸ್ಥಳೀಯ ಗ್ರಾಪಂ ವತಿಯಿಂದ ಒದಗಿಸಲಾಗಿದೆ. ಹೀಗಿದ್ದರೂ ಕೂಡ ಕೆಲಸ ಆರಂಭಿಸಲು ಹೋದಾಗ ಗ್ರಾಮದ ಒಂದು ಗುಂಪು ಕೆಲಸ ಮಾಡಿ ಎಂದರೇ ಇನ್ನೊಂದು ಗುಂಪು ಬೇಡ ಎಂದು ತಕರಾರು ತೆಗೆಯುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಇಂದು ಪೊಲೀಸರ ರಕ್ಷಣೆಯೊಂದಿಗೆ ಕಟ್ಟಡದ ಕೆಲಸ ಆರಂಭಿಸಲಾಗಿದೆ. ಯಾವುದೇ ಗ್ರಾಮಸ್ಥರು ಸ್ಥಳಕ್ಕೆ ಹಾಜರಾಗಿ ತೊಂದರೆ ನೀಡಲು ಮುಂದಾಗಿಲ್ಲ. ಇದೇ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಸಿಡಿಪಿಒ ಎಂ.ಆರ್‌. ವೆಂಕಟೇಶ್ ವಿನಂತಿ ಮಾಡಿದರು.

ತಾಲೂಕಿನಲ್ಲಿ ಒಟ್ಟು 292 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸ್ವತಃ ಕಟ್ಟಡದಲ್ಲಿ 241 ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಕಟ್ಟಡದಲ್ಲಿ 19 ಇದ್ದು, ಇತರೆ ಕಟ್ಟಡಗಳಲ್ಲಿ 32 ಕೇಂದ್ರಗಳು ನಡೆಯುತ್ತಿವೆ. ಒಟ್ಟು 20 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದು ಅವರು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌
ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು