ಕಡೂರುಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾದ ಸೇವಾ ಸಂಕಲ್ಪ ಅಭಿಯಾನ - ಸೇವಾ ಸೇತು ಕಾರ್ಯಕ್ರಮದಡಿ ಕಡೂರಿನ ಕೆಎಂಎಚ್ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕಡೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾದ ಸೇವಾ ಸಂಕಲ್ಪ ಅಭಿಯಾನ - ಸೇವಾ ಸೇತು ಕಾರ್ಯಕ್ರಮದಡಿ ಕಡೂರಿನ ಕೆಎಂಎಚ್ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಪಟ್ಟಣ ಸಮೀಪದ ಲಕ್ಷಾ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ಘಟಕದಿಂದ ಕೆಎಂಹೆಚ್ಆಸ್ಪತ್ರೆ ಸಹಯೋಗದಲ್ಲಿ ನಡೆದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಸಮಾಜದ ಕಟ್ಟಕಡೆ ವ್ಯಕ್ತಿ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವುದು, ಪ್ರಧಾನಿ ಮೋದಿಯವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸುವುದು ಈ ಅಭಿಯಾನದ ಮುಖ್ಯ ಗುರಿ.ಕಡೂರಿನ ಪ್ರಮುಖ ಆರೋಗ್ಯ ಸಂಸ್ಥೆ ಕೆಎಂಎಚ್ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಮತ್ತು ಬಿಜೆಪಿ ಪಕ್ಷದ ಪ್ರಮುಖರ ನೇತೃತ್ವದ ಸೇವಾ ಸಂಕಲ್ಪ ಅಭಿಯಾನದ ಜತೆ ಕೈಜೋಡಿಸಿ ಈ ಶಿಬಿರ ಯಶಸ್ವಿಗೊಳಿಸಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಶಿಬಿರ ಆಯೋಜಿಸುವ ಆಲೋಚನೆ ಇದೆ ಎಂದರು.
ಕೆಎಂಹೆಚ್ಆಸ್ಪತ್ರೆ ಮುಖ್ಯಸ್ಥ ಡಾ.ದಿನೇಶ್ ಮಾತನಾಡಿ ಶಿಬಿರದಲ್ಲಿ ರಕ್ತದ ಒತ್ತಡ, ಮಧುಮೇಹ ಇತರೆ ಆರೋಗ್ಯದ ಬಗ್ಗೆ
ತಪಾಸಣೆ ಮಾಡಲಾಗಿದೆ. ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಯಿತು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದರು.
ಆರೋಗ್ಯ ತಪಾಸಣೆ ಶಿಬಿರದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವರಾಜ್, ಕೆ.ಆರ್.ಮಹೇಶ್ಒ ಡೆಯರ್,ಅಡಿಕೆ ಚಂದ್ರು, ಮಲ್ಲಿಕಾರ್ಜುನ್, ಪಕ್ಷದ ವಕ್ತಾರ ಶಾಮಿಯಾನ ಚಂದ್ರು, ವೈದ್ಯರಾದ ಡಾ.ಆಕಾಶ್, ಡಾ.ತೇಜಸ್ವಿ ಮತ್ತಿತರರು ಇದ್ದರು.
18ಕೆಡಿಆರ್4
ಕಡೂರು ಪಟ್ಟಣ ಸಮೀಪದ ಲಕ್ಷಾ ಕಲ್ಯಾಣ ಮಂಟಪದಲ್ಲಿ ಕಡೂರು ಬಿಜೆಪಿ ಘಟಕದಿಂದ ಕೆಎಂಹೆಚ್ಆಸ್ಪತ್ರೆಯ ಸಹಯೋಗದೊಂದಿಗೆ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಸೇವಾ ಸಂಕಲ್ಪ ಅಭಿಯಾನ ಅಡಿನಡೆದ ಸೇವಾ ಸೇತು ಅಭಿಯಾನಕ್ಕೆ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.