₹33.62 ಲಕ್ಷ ವೆಚ್ಚದ ನೀರು ಸರಬರಾಜು ಯೋಜನೆಗೆ ಚಾಲನೆ

KannadaprabhaNewsNetwork | Published : Dec 6, 2024 8:58 AM

ಸಾರಾಂಶ

ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಹೊನ್ನಾಳಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೇನೂ ತೀಕ್ಷಣವಾಗಿಲ್ಲ. ಆದಾಗ್ಯೂ ಕೂಡ ತಾಲೂಕಿನ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಹೊನ್ನಾಳಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೇನೂ ತೀಕ್ಷಣವಾಗಿಲ್ಲ. ಆದಾಗ್ಯೂ ಕೂಡ ತಾಲೂಕಿನ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಅವರು ಗುರುವಾರ ತಾಲೂಕಿನ ತರಗನಹಳ್ಳಿ ಗ್ರಾಮಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಮಾತನಾಡಿ, ತುರ್ತು ಕುಡಿಯುವ ನೀರಿನ ಯೋಜನೆಯಡಿ ಅಂದಾಜು ₹3 ಲಕ್ಷ ವೆಚ್ಚದಲ್ಲಿ 15 ನೇ ಹಣಕಾಸು ಯೋಜನೆಯಡಿ (ತಾ.ಪಂ.) 2 ಬೋರ್ ವೆಲ್ ಗಳು ಕೊರೆಸಲಾಗಿದ್ದು, 2024-25 ಟಾಸ್ಕ್ ಫೋರ್ಸ್ ಯೋಜನೆಯಡಿ (ಜಿ.ಪಂ.) 2 ಕೊಳವೆ ಬಾವಿಗಳ ಪಂಪ್ ಮೋಟಾರ್ ಅಳವಡಿಸಲು ಅಂದಾಜು ಮೊತ್ತ ₹3 ಲಕ್ಷ ವೆಚ್ಚದಲ್ಲಿ ನಿರ್ವಹಿಸಲಾಗಿದೆ ಎಂದು ಹೇಳಿದರು.

ತರಗನಹಳ್ಳಿ ಗ್ರಾಮದ ಕೊಳವೆ ಬಾವಿ ನೀರು ಸರಬರಾಜು ಯೋಜನೆಗೆ ಎಂ. ಹನುನಮಹಳ್ಳಿ ಕರೆಯಲ್ಲಿ ಕೊರೆದಿರುವ ಕೊಳವೆ ಬಾವಿಯಿಂದ ಪೈಪ್ ಲೈನ್ ಕಾಮಗಾರಿ ಸುಮಾರು 4.5 ಕಿ.ಮೀ. 90 ಎಂ.ಎಂ. ಎಚ್.ಡಿ.ಪಿ.ಇ. ಪೈಪ್ ಲೈನ್ ಅಳವಡಿಸಲು ಅಂದಾಜು ₹24.31ಲಕ್ಷ ವೆಚ್ಚಮಾಡಲಾಗಿದೆ ಎಂದ ಶಾಸಕರು, ಗ್ರಾಮದ ತುರ್ತು ಕುಡಿಯುವ ನೀರು ಯೋಜನೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಆಂದಾಜು ₹3.31 ಲಕ್ಷ ವೆಚ್ಛದಲ್ಲಿ ಕೆಲಸ ನಿರ್ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

2021-22ನೇ ಸಾಲಿನಲ್ಲಿ ಜೆ.ಜೆ.ಎಂ. ಯೋಜನೆಯಡಿಯಲ್ಲಿ ಅಂದಾಜು ₹99.50 ಲಕ್ಷಗಳಿಗೆ 438 ಮನೆಗಳಿಗೆ ನಲ್ಲಿಗಳ ಸಂಪರ್ಕ ಕಾಮಗಾರಿ ಕೂಡ ಈಗಾಗಲೇ ನಿರ್ವಹಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣಾಭಿವೃದ್ದಿ ಮತ್ತು ನೈರ್ಮಲ್ಯ ಉಪವಿಭಾಗ ಇಲಾಖೆಯ ಸಹಾಯಕ ಕಾರ್ಯಪಾಲಕ ಆಭಿಯಂತರ ಟಿ. ಸೋಮ್ಲನಾಯಕ್, ತಿಮ್ಲಾಪುರ ಗ್ರಾ.ಪಂ ಸದಸ್ಯೆ ಚಂದ್ರಮ್ಮ, ತಿಮ್ಲಾಪುರ ಗ್ರಾ,ಪಂ ಪಿ.ಡಿ.ಓ, ಶಿವಕುಮಾರ್, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ್, ಮುರುಗೇಶ್, ಕಮ್ಮಾರಗಟ್ಟೆ ಶಿವಕುಮಾರ್, ಮಂಜುನಾಥ್, ಹುಚ್ಚಪ್ಪ, ಆಶೋಕ್, ರಾಜಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Share this article