ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ತಾಪಂ ಕಾರ್ಯಾಲಯಆವರಣದಲ್ಲಿ ಸೋಮವಾರ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಉದ್ಯೋಗ ವಾಹಿನಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕರು (ಗ್ರಾಉ) ಸಂಗಮೇಶ ರೊಡ್ಡನ್ನವರ ಮಾತನಾಡಿ, ಮುಂದಿನ ವರ್ಷದ ಆಯವ್ಯಯ ತಯಾರಿಸುವ ಅರ್ಹ ಫಲಾನುಭವಿಗಳ ಹಾಗೂ ಸಾರ್ವಜನಿಕ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲಾಗುವುದು. ಹಾಗಾಗಿ ಗ್ರಾಮೀಣ ಭಾಗದ ಜನರಿಗೆ ಮನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಲು ಉದ್ಯೋಗ ವಾಹಿನಿ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಪಿಡಿಒಗಳಾದ ಅಂಜನಾ ಗಚ್ಚಿ, ಶ್ರೀಶೈಲ ತಡಸನ್ನವರ, ಅನುರಾಧಾ ಭಜಂತ್ರಿ, ಆರತಿ ಪತ್ತಾರ, ತಾಂತ್ರಿಕ ಸಂಯೋಜಕ ನಾರ್ಗಾಜುನ ಇಳಗೇರ, ಎಂಐಎಸ್ ಸಂಯೋಜಕ ನಿರಂಜನ ಮಲ್ಲವ್ವಗೋಳ, ತಾಪಂ ಸಿಬ್ಬಂದಿ ಮಲ್ಲಿಕಾರ್ಜುನ ತೆರದಾಳ, ಗಂಗಾಧರ ಹಾಗೂ ಬಿಎಫ್ ಟಿಗಳಾದ ಅಶೋಕ ದೊಡ್ಡಮನಿ, ಬಸವರಾಜ ಇಟ್ನಾಳ, ಜುಬೇರ ಎನ್., ರವಿ.ಡಿ ಇತರರು ಇದ್ದರು.