ಇಂದು ಅಥಣಿಗೆ ಲಾವಣ್ಯ ಬಲ್ಲಾಳ್ ಜೈನ್ ಆಗಮನ

KannadaprabhaNewsNetwork |  
Published : Mar 11, 2026, 02:45 AM IST
ಲಾವಣ್ಯ ಬಲ್ಲಾಳ್ ಜೈನ್  | Kannada Prabha

ಸಾರಾಂಶ

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಯಶ್ರೀ ಕಿಣಿಂಗೆ, ಶರ್ಮಿಳಾ ಪಾಟೀಲ್, ಶೀಲಾ ಯಲಗುದ್ರಿ, ದೀಪಾ ನಂದಗಾವ ಸೇರಿದಂತೆ ಹಂಸಗಾಮಿನಿ ಮಹಿಳಾ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಹಂಸಗಾಮಿನಿ ಮಹಿಳಾ ಸಂಘ ವತಿಯಿಂದ ಮಾ.11 ರಂದು ಮಧ್ಯಾಹ್ನ 1 ಗಂಟೆಗೆ ಹಲ್ಯಾಳ ರಸ್ತೆಯಲ್ಲಿರುವ R-VEG ಹೋಟೆಲ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಲಿದೆ. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್ ಕಾರ್ಯಕ್ರಮ ಉದ್ಘಾಟಿಸುವರು. ಹಂಸಗಾಮಿನಿ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕಿನಿಂಗೆ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಯರಗಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕಿ ಶ್ರೀದೇವಿ ಸುರೇಂದ್ರ ಮಗದುಮ್ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಕ್ರೇಶ್ವರಿ ಮಹಿಳಾ ತಂಡದ ಸದಸ್ಯರು ನಡೆಸಿಕೊಡಲಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಯಶ್ರೀ ಕಿಣಿಂಗೆ, ಶರ್ಮಿಳಾ ಪಾಟೀಲ್, ಶೀಲಾ ಯಲಗುದ್ರಿ, ದೀಪಾ ನಂದಗಾವ ಸೇರಿದಂತೆ ಹಂಸಗಾಮಿನಿ ಮಹಿಳಾ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.ಆರ್‌ಜೆಯಿಂದ ಅಧ್ಯಕ್ಷೆಯವರೆಗೆ ಲಾವಣ್ಯ ಬಲ್ಲಾಳ್ ದಾರಿ:

ದಕ್ಷಿಣ ಕನ್ನಡದ ಬಂಟ್ವಾಳ ಮೂಲದ ಲಾವಣ್ಯ ಬಲ್ಲಾಳ್ ಅವರು ಬಿಸಿಎ ಪದವಿ ಪಡೆದಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಹೋಗುವ ಮುನ್ನ ಮಂಗಳೂರಿನಲ್ಲಿ ಆರ್‌.ಜೆ ಆಗಿ ರೇಡಿಯೋ ಮಿರ್ಚಿಯಲ್ಲಿ 13 ವರ್ಷಗಳ ಕಾಲ ಕೆಲಸ ಮಾಡಿದ್ದರು. ಆರ್‌.ಜೆ ಆಗುವ ಮುನ್ನ ಬೆಂಗಳೂರಿನ ಎನ್ಐಐಟಿಯಲ್ಲಿ 11 ತಿಂಗಳು ಎಚ್ಆರ್ ಅಸಿಸ್ಟೆಂಟ್ ಆಗಿಯೂ ಕೆಲಸ ಮಾಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಆರ್‌ಜೆ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಸೇರಿದರು. ಕನ್ನಡ, ಹಿಂದಿ, ತುಳು ಹಾಗೂ ಇಂಗ್ಲಿಷ್‌ನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಅವರು ಕಾಂಗ್ರೆಸ್‌ ಸೊಸಿಯಲ್‌ ಮೀಡಿಯಾ ಸಂಯೋಜಕಿ ಹಾಗೂ ವಕ್ತಾರೆಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
ಪರೀಕ್ಷಾ ಭಯ ಹೋಗಲಾಡಿಸುವ ಪ್ರೇರಣಾ ಶಿಬಿರ