ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅದೇ ರೀತಿ 15-20 ಮಂದಿಯೊಂದಿಗೆ ಹಿರಿಯ ದಲಿತ ನಾಯಕ ಸಭೆ ನಡೆಸಿದ್ದಕ್ಕೆ ಆರೇಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆಂದು ಪೋಕ್ಸೋ ಪ್ರಕರಣ ದಾಖಲು ಮಾಡಲು ಪೋಲಿಸರು ಹೋಗುತ್ತಾರೆ. ಅದೇ ರೀತಿ ಯಾರೋ ವ್ಯೆಕ್ತಿ ಜಿಲ್ಲಾಡಳಿತ ಭವನದಲ್ಲಿ ಆತ್ಮಹತ್ಯೆ ಮಾಡಿಕೊಂಡರೆಂದು ನನ್ನ ಮೇಲೆ ಕೊಲೆ ಪ್ರಕರಣ ದಾಖಲಿಸಿ, ಕೊನೆಗೆ ಬಿ ರಿಪೋರ್ಟ್ ಹಾಕಿದ್ದಾರೆ. ಈ ರೀತಿ ದುರುದ್ದೇಶ ಪೂರ್ವಕವಾಗಿ ನನ್ನ ಹಾಗೂ ಬೆಂಬಲಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಇವರಂತೆ ವರ್ತಿಸಿದ್ದರೆ ಇವರ ಮೇಲೆ ಪ್ರಕರಣಗಳನ್ನು ದಾಖಲಿಸಿ ಹಗೆ ಸಾದಿಸಬಹುದಿತ್ತಲ್ಲಾ. ಇನ್ನೆರಡು ವರ್ಷ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.
ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರು ನಾಮಕರಣ ಮಾಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದ ಡಾ.ಕೆ.ಸುಧಾಕರ್, ಮಹಾತ್ಮ ಗಾಂಧಿಯನ್ನು ದತ್ತು ಪಡೆದವರಂತೆ ಪ್ರಚಾರ ಮಾಡುವ ಕಾಂಗ್ರೆಸ್ ನಾಯಕರು ಇಲ್ಲಿ ಗಾಂಧಿ ಹೆಸರನ್ನೇ ತೆಗೆದು ತಮ್ಮ ಹೆಸರನ್ನು ಇಟ್ಟುಕೊಳ್ಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಕ್ರೀಡಾಂಗಣಕ್ಕೆ ಕ್ರೀಡಾಪಟುಗಳ ಹೆಸರು ಇಡಬೇಕಾದ ಪರಿಸ್ಥಿತಿ ಬಂದರೆ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಅನೇಕ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ, ಅವರ ಹೆಸರಿಡಲಿ. ಕ್ರೀಡಾಂಗಣಕ್ಕೆ ರಾಜಕಾರಣಿಗಳ ಹೆಸರಿಡುವ ಪ್ರಯತ್ನ ಕೈ ಬಿಟ್ಟು ಮಹಾತ್ಮ ಗಾಂಧಿಯ ಹೆಸರನ್ನೇ ಉಳಿಸಬೇಕು ಎಂದು ಒತ್ತಾಯಿಸಿದರು.ಫೆಬ್ರವರಿ ಒಂದಕ್ಕೆ ನಡೆಯುತ್ತಿರುವ ಕೊಚ್ಚಿಮುಲ್ ಚುನಾವಣೆ ಬಗ್ಗೆ ನನಗೇನು ಅಂತಹ ಆಸಕ್ತಿ ಇಲ್ಲಾ. ಅಲ್ಲಿ ಆದ್ರೆ ಮೇಘಾ ಡೈರಿ ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಮಾಡಿಕೊಡುವುದರಲ್ಲಿ ನಾನು ಶ್ರಮವಹಿಸಿದ್ದೇನೆ. ಅದನ್ನ ಕೋಲಾರದಲ್ಲಿಯೇ ಉಳಿಸಬೇಕೆಂದು ಈಗಿನ ಉಸ್ತುವಾರಿ ಸಚಿವರು ಹೋರಾಟ ಮಾಡಿದರು. ಅವರೇ ಚುನಾವಣೆ ಗೆಲ್ಲುವ ತವಕದಲ್ಲಿದ್ದಾರೆ ನಾವು ಎಷ್ಟೇ ಶ್ರಮ ಹಾಕಿದ್ರು, ಸರ್ಕಾರಿ ನಾಮಿನಿ ಮತಗಲೇ ನಾಲಕ್ಕು ಇರುತ್ತೆ ಸರ್ಕಾರದ ಪ್ರಭಾವ ಬಳಿಸಿ ಅವರೇ ಅಧಿಕಾರ ಮಾಡಬಹುದು ಆದ್ರೂ ಮುಂದೆ ನಮ್ಮ ಸರ್ಕಾರ ಬಂದ ಮೇಲೆ ಅಲ್ಲಿನ ಸ್ವರೂಪವೇ ಬದಲಾಗಲಿದೆ ಎಂದರು.
ಈ ವೇಳೆ ಚಿಮುಲ್ ಚುನಾವಣಾ ಆಕಾಂಕ್ಷಿ ಚಿಕ್ಕ ಗೆರಿಗರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗಂಗರೇ ಕಾಲವೇ ಪ್ರಸಾದ್, ಮಾಜಿ ಅಧ್ಯಕ್ಷರಾದ ನಾಗೇಶ್, ಕಾಳೇಗೌಡ, ಮುಖಂಡರಾದ ಪುರದಗಡ್ಡೆ ಕೃಷ್ಣಪ್ಪ,ಮಂಚನಬಲೆ ಶ್ರೀಧರ್, ಗಿರಿಶ್ ಗರಿಗಿರೆಡ್ಡಿ,ರವಿಕುಮಾರ್, ಸುನಿಲ್, ಮತ್ತಿತರರು ಇದ್ದರು. ಸಿಕೆಬಿ-4 ಸುದ್ದಿಗಾರರೊಂದಿಗೆ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು