ಬಾರ್‌ ಮಾಲೀಕನ ಮೇಲೆ ಏರ್‌ಗನ್ ದಾಳಿ: ಕಾನೂನು ವಿದ್ಯಾರ್ಥಿ ಸೆರೆ

KannadaprabhaNewsNetwork |  
Published : Dec 14, 2025, 03:00 AM IST
13ಎಚ್‌ಯುಬಿ51, 51ಎಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜಿನಲ್ಲಿರುವ ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಮ್ಯಾಗ್ನಾ ಇಂಟರ್ನ್ಯಾಶನಲ್ನ ಸಿಇಒ ಸೀತಾರಾಮ (ಸ್ವಾಮಿ) ಕೋಟಗಿರಿ ಹಾಗೂ ಕೆಎಲ್ಇ ತಾಂತ್ರಿಕ ವಿವಿಯ ಕುಲಪತಿ ಡಾ.ಪ್ರಭಾಕರ ಕೋರೆ ವಿವಿಧ ಪದವಿ ಪ್ರದಾನ ಮಾಡಿದರು. | Kannada Prabha

ಸಾರಾಂಶ

ಬಾರ್ ಮಾಲೀಕ ರಾಜಗೋಪಾಲ್‌ ಮೇಲೆ ಏರ್‌ಗನ್ ದಾಳಿ ಸಂಬಂಧ ಖಾಸಗಿ ಕಾಲೇಜಿನ ಕಾನೂನು ವಿದ್ಯಾರ್ಥಿಯೊಬ್ಬನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾರ್ ಮಾಲೀಕ ರಾಜಗೋಪಾಲ್‌ ಮೇಲೆ ಏರ್‌ಗನ್ ದಾಳಿ ಸಂಬಂಧ ಖಾಸಗಿ ಕಾಲೇಜಿನ ಕಾನೂನು ವಿದ್ಯಾರ್ಥಿಯೊಬ್ಬನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಸವನಗುಡಿ ನಿವಾಸಿ ಮೊಹಮ್ಮದ್‌ ಅಫ್ಜಲ್‌ (21) ಬಂಧಿತನಾಗಿದ್ದು, ಆತನಿಂದ ಮೂರು ಏರ್‌ ಗನ್‌ ಹಾಗೂ ಆಟಿಕೆ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

ಮೂರು ದಿನಗಳ ಹಿಂದೆ ಕೃಷ್ಣರಾವ್ ಪಾರ್ಕ್‌ನಲ್ಲಿ ವಾಯು ವಿಹಾರ ನಡೆಸುತ್ತಿದ್ದ ಬಾರ್ ಮಾಲೀಕ ರಾಜಗೋಪಾಲ ಅವರಿಗೆ ಏರ್‌ಗನ್‌ ನಿಂದ ಹಾರಿದ ಆಟಿಕೆ ಗುಂಡು ಹೊಕ್ಕು ಗಾಯವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಪೋಷಕರ ಜತೆ ನೆಲೆಸಿದ್ದ ಅಫ್ಜಲ್‌, ಶೋಕಿಗೆ ಏರ್‌ ಗನ್‌ ಬಳಸುತ್ತಿದ್ದ. ಅಂತೆಯೇ ಡಿ.10 ರಂದು ರಾತ್ರಿ ತನ್ನ ಮನೆ ಮುಂದಿನ ಕೃಷ್ಣರಾವ್ ಪಾರ್ಕ್‌ನಲ್ಲಿ ಏರ್‌ಗನ್‌ನಲ್ಲಿ ಆತ ಶೂಟಿಂಗ್ ತರಬೇತಿ ನಡೆಸುತ್ತಿದ್ದ. ಆ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು ಅಲ್ಲೇ ವಾಯು ವಿಹಾರ ನಡೆಸುತ್ತಿದ್ದ ರಾಜಗೋಪಾಲ್ ಅವರಿಗೆ ಹೊಕ್ಕಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಮಧ್ಯಾಹ್ನ 3ಕ್ಕೆ ಪಿಯುಸಿ ಫಲಿತಾಂಶ
ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ