ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಆಸ್ತಿ ಹಕ್ಕು ನೆಪದಲ್ಲಿ ಸುಖಾಸುಮ್ಮನೆ ಅತ್ತೆ, ಮಾವ, ತಂದೆ, ತಾಯಿ, ಗಂಡ ಹೀಗೆ ಹಲವರ ಮೇಲೆ ಪ್ರಕರಣ ಮಾಡುತ್ತಿದ್ದಾರೆ. ಇದರಿಂದ ಸಂಬಂಧಗಳನ್ನು ಕಳೆದುಕೊಳ್ಳುವ ದುರಾಲೋಚನೆ ಹೆಚ್ಚಾಗುತ್ತಿದೆ. ಮಹಿಳೆಯರು ಸಂಬಂಧ ಉಳಿಸಿಕೊಳ್ಳುವ, ನಿಮಗೆ ಅಪಾಯ ಬಂದಾಗ ರಕ್ಷಣೆಗಾಗಿ, ತಪ್ಪಿಸಿಕೊಳ್ಳಲು ಹಕ್ಕು, ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕು. ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.ಈ ಹಿಂದೆ ಮಹಿಳಾ ದಿನಾಚರಣೆಗಳು ಮಹಿಳೆಯರಿಗೆ ಎಲ್ಲಾ ಸ್ತರಗಳಲ್ಲೂ ಆಗುತ್ತಿದ್ದ ಶೋಷಣೆ ತಪ್ಪಿಸಲು, ಮಹಿಳಾ ಸಬಲೀಕರಣಕ್ಕೆ ಮಾಡಲಾಗುತ್ತಿತ್ತು. ಮಹಿಳೆಯರ ಹಕ್ಕು, ಜವಾಬ್ದಾರಿ, ನಗಿರುವ ಶಕ್ತಿ, ತನ್ನಲ್ಲಿರುವ ಸಬಲೀಕರಣದ ಅರಿವು ಮೂಡಿಸುವುದಾಗಿತ್ತು. ಆದರೆ, ಇಂದು ಕೇವಲ ಸಂಭ್ರಮಾಚರಣೆ ಮಾತ್ರ ಸೀಮಿತವಾಗಿವೆ. ಮಹಿಳಾ ದಿನಾಚರಣೆಗಳು ಮಹತ್ವ ಈ ಹಿಂದೆ ಎಷ್ಟಿತ್ತು. ಈಗ ಅದು ಕಳೆದುಕೊಳ್ಳುತ್ತಿದೆ. ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು.
ಮಹಿಳಾ ದಿನಾಚರಣೆ ಎಂದು ಪುರುಷ ದ್ವೇಷಿಯಲ್ಲ. ನಿಮ್ಮ ಸಾಧನೆ ಹಿಂದೆ ಒಬ್ಬ ಪುರುಷ ಇದ್ದೆ ಇರುತ್ತಾನೆ. ಅವರು ತಮ್ಮ, ಅಣ್ಣ, ಗಂಡ, ತಂದೆ ಹೀಗೆ ಹಲವು ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ಮಹಿಳೆ ಮೇಲೆ ದೌರ್ಜನ್ಯ, ಶೋಷಣೆ ಕೇವಲ ಪುರುಷರಿಂದ ಆಗುತ್ತಿಲ್ಲ, ಮಹಿಳೆಯರಿಂದಲೂ ಆಗುತ್ತಿದೆ. ಇದರಿಂದ ಹೇಗೆ ಹೊರಬರಬೇಕು ಎಂಬ ಬಗ್ಗೆ ಚಿಂತಿಸಬೇಕು. ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಮೂಡಿಸಿಕೊಂಡು ಸಾಧನೆ ಮಾಡಬೇಕು ಎಂದರು.
1ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ಮಾತನಾಡಿ, ಶ್ರಮ ಪಟ್ಟರೆ ಸಾಧನೆ ಸಾಧ್ಯ. ಈ ಬಗ್ಗೆ ಹೆಣ್ಣು ಮಕ್ಕಳು ಚಿಂತನೆ ಮಾಡಬೇಕು. ನಾವು ಬೇರೆ ಬೇರೆ ಜಿಲ್ಲೆಯವರಾದರೂ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ ಎಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಮಕ್ಕಳು ಗುರಿ ಇಟ್ಟು ಏನೆಲ್ಲಾ ಸಾಧನೆ ಮಾಡಬೇಕು ಅದನ್ನು ಮನಸ್ಸಿನಲ್ಲಿ ಚಿಂತಿಸಿ ಮಾಡಬೇಕು ಎಂದರು.