ಧರ್ಮಸ್ಥಳ ಕ್ಷೇತ್ರಕ್ಕೆ 90 ಕಾರುಗಳಲ್ಲಿ ವಕೀಲರ ಜಾಥಾ

KannadaprabhaNewsNetwork |  
Published : Aug 25, 2025, 01:00 AM IST
ವಕೀಲರ ನಿಯೋಗ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. | Kannada Prabha

ಸಾರಾಂಶ

ಬೆಂಗಳೂರಿನ ವಕೀಲರಾದ ನಾರಾಯಣಸ್ವಾಮಿ, ರಮೇಶ್ ಗೌಡ ಹಾಗೂ ಹಾಸನದ ವಕೀಲರ ಸಂಘ ಅಧ್ಯಕ್ಷ ಮೊಗಣ್ಣ ಗೌಡ ನೇತೃತ್ವದಲ್ಲಿ 450 ಮಂದಿ ವಕೀಲರ ನಿಯೋಗ 90 ಕಾರುಗಳ ಜಾಥಾದಲ್ಲಿ ಶನಿವಾರ ಸಂಜೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಂಗಳೂರಿನ ವಕೀಲರಾದ ನಾರಾಯಣಸ್ವಾಮಿ, ರಮೇಶ್ ಗೌಡ ಹಾಗೂ ಹಾಸನದ ವಕೀಲರ ಸಂಘ ಅಧ್ಯಕ್ಷ ಮೊಗಣ್ಣ ಗೌಡ ನೇತೃತ್ವದಲ್ಲಿ 450 ಮಂದಿ ವಕೀಲರ ನಿಯೋಗ 90 ಕಾರುಗಳ ಜಾಥಾದಲ್ಲಿ ಶನಿವಾರ ಸಂಜೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ನ್ಯಾಯವೇ ದೇವರು, ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ ನ್ಯಾಯದಾನ ಪದ್ಧತಿ ಅಳವಡಿಸಲಾಗಿದೆ. ನ್ಯಾಯ ನಮ್ಮ ಅಸ್ಮಿತೆಯಾಗಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರದಿಂದ ತಮಗೆಲ್ಲರಿಗೂ ತೀವ್ರ ಖೇದವಾಗಿದೆ. ಆಧಾರರಹಿತ ಅಪಪ್ರಚಾರ ತಡೆಯಲು ತಾವು ಕೂಡಾ ಪ್ರಯತ್ನಿಸುವುದಾಗಿ ತಿಳಿಸಿದ ಅವರು, ಸತ್ಯ, ಧರ್ಮ, ನ್ಯಾಯದ ಪರಿಪಾಲನೆಗೆ ತಾವೆಲ್ಲರೂ ಹೆಗ್ಗಡೆಯವರ ಜೊತೆ ಬದ್ಧರಾಗಿದ್ದೇವೆ ಎಂದು ವಕೀಲರ ನಿಯೋಗದವರು ಭರವಸೆ ನೀಡಿದರು.

ಎಲ್ಲ ವ್ಯವಹಾರ ಪಾರದರ್ಶಕ: ಡಾ.ಹೆಗ್ಗಡೆಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಧರ್ಮಸ್ಥಳದಲ್ಲಿ ಕಳೆದ ಎಂಟು ಶತಮಾನಗಳಿಂದ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯದಾನಗಳು ಜಾತಿ-ಮತ ಭೇದವಿಲ್ಲದೆ ನಿತ್ಯವೂ ನಡೆಯುತ್ತಿದೆ. ಇವುಗಳಲ್ಲಿ ನೊಂದವರಿಗೆ, ಸೋತವರಿಗೆ ‘ಭಯ’ ಪಡಬೇಡಿ ಎಂದು ನೀಡುವ ‘ಅಭಯದಾನ’ ಅತ್ಯಂತ ಶ್ರೇಷ್ಠವಾಗಿದ್ದು, ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲಾಗುತ್ತದೆ ಎಂದು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.ಧರ್ಮಸ್ಥಳದಲ್ಲಿ ನಡೆಯುವ ಎಲ್ಲ ವ್ಯವಹಾರಗಳು, ಸೇವಾಕಾರ್ಯಗಳು, ದಾನ, ಧರ್ಮಾದಿ ಸತ್ಕಾರ್ಯಗಳು ಟ್ರಸ್ಟ್‌ ಮೂಲಕ ಪಾರದರ್ಶಕವಾಗಿ ನಡೆಯುತ್ತವೆ ಎಂದು ಮಾಹಿತಿ ನೀಡಿದರು.ಬೆಂಗಳೂರು, ಮೈಸೂರು ಮತ್ತು ಹಾಸನದಿಂದ ಬಂದ ವಕೀಲರು, ಬಳಿಕ ದೇವರ ದರ್ಶನ ಮಾಡಿ, ಅನ್ನಪೂರ್ಣದಲ್ಲಿ ಪ್ರಸಾದ ಸ್ವೀಕರಿಸಿ ಊರಿಗೆ ಮರಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ