ಕಾರಟಗಿಯಲ್ಲಿ ವಕೀಲರ ಪ್ರತಿಭಟನೆ

KannadaprabhaNewsNetwork |  
Published : Nov 04, 2026, 01:15 AM IST
 ಫೋಟೋ ೩ಕೆಆರ್‌ಟಿಜಿ-೧ ಕಾರಟಗಿ ವಕೀಲರ ಸಂಘದ ಸದಸ್ಯರು ತಹಶೀಲ್ದಾರ್ ಕಚೇರಿಗೆ ತೆರಳಿ, ವಕೀಲರ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತರುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರರ ಮೂಲಕ ಮಂಗಳವಾರ ಸಲ್ಲಿಸಿದರು. | Kannada Prabha

ಸಾರಾಂಶ

ಬೆಂಗಳೂರು ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್ ಅವರ ಹತ್ಯೆ, ವಕೀಲ ಶ್ರೀರಾಮ್ ಅವರ ಕೊಲೆ ಹಾಗೂ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಮೇಲಿನ ಕೊಲೆ ಯತ್ನದ ಘಟನೆಗಳು ವಕೀಲ ಸಮುದಾಯದಲ್ಲಿ ಆತಂಕ ಮತ್ತು ಅಭದ್ರತೆ ಮೂಡಿಸಿವೆ.

ಕಾರಟಗಿ: ರಾಜ್ಯದಲ್ಲಿ ವಕೀಲರ ಮೇಲೆ ಸತತವಾಗಿ ನಡೆಯುತ್ತಿರುವ ಹಲ್ಲೆ ಹಾಗೂ ಕೊಲೆ ಯತ್ನದ ಘಟನೆಗಳನ್ನು ಖಂಡಿಸಿ, ವಕೀಲರ ರಕ್ಷಣೆ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವಂತೆ ಒತ್ತಾಯಿಸಿ ಇಲ್ಲಿನ ನ್ಯಾಯವಾದಿಗಳ ಸಂಘ ಪದಾಧಿಕಾರಿಗಳು ರಾಜ್ಯ ಸರಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ಬೆಂಗಳೂರು ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್ ಅವರ ಹತ್ಯೆ, ವಕೀಲ ಶ್ರೀರಾಮ್ ಅವರ ಕೊಲೆ ಹಾಗೂ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಮೇಲಿನ ಕೊಲೆ ಯತ್ನದ ಘಟನೆಗಳು ವಕೀಲ ಸಮುದಾಯದಲ್ಲಿ ಆತಂಕ ಮತ್ತು ಅಭದ್ರತೆ ಮೂಡಿಸಿವೆ. ಈ ಘಟನೆಗಳನ್ನು ತೀವ್ರವಾಗಿ ಖಂಡಿಸಿ ಜತೆಗೆ ಬೆಂಗಳೂರು ವಕೀಲರ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲಸಿ ಇಲ್ಲಿನ ನ್ಯಾಯವಾದಿಗಳು ಮಂಗಳವಾರ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.

ಮುಖ್ಯಂತ್ರಿಗಳಿಗೆ ಬರೆದ ಮನವಿಯನ್ನು ಇಲ್ಲಿನ ಗ್ರೇಡ್ -೨ ತಹಸೀಲ್ದಾರ್ ಷಣ್ಮುಖಪ್ಪಗೆ ಸಲ್ಲಿಸಿ ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹತ್ಯೆ, ಹಲ್ಲೆ ಹಾಗೂ ಕೊಲೆ ಯತ್ನದ ಘಟನೆಗಳು ವಕೀಲ ಸಮುದಾಯದಲ್ಲಿ ಆತಂಕ ಮೂಡಿಸಿವೆ. ವಕೀಲರ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-೨೦೨೩ಕ್ಕೆ ಅಗತ್ಯ ತಿದ್ದುಪಡಿ ತರಬೇಕು. ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳನ್ನು ಜಾಮೀನು ರಹಿತ ಅಪರಾಧಗಳನ್ನಾಗಿ ಪರಿಗಣಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ವಕೀಲರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಕಚೇರಿ, ದಾಖಲೆ ಮತ್ತು ಆಸ್ತಿ-ಪಾಸ್ತಿಗಳಿಗೆ ಕಾನೂನಾತ್ಮಕ ರಕ್ಷಣೆ ಒದಗಿಸಬೇಕು. ದೇಶಾದ್ಯಂತ ಸಮಗ್ರ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ವಕೀಲರಾದ ನಾಗರಾಜ ಬೂದಿ, ಸೋಮನಾಥ ಹೆಬ್ಬಡದ, ಮಂಜುನಾಥ ಪುರ್ತಗೇರಿ, ಪ್ರವೀಣ ಸಿದ್ದಾಪುರ, ಬಸವರಾಜ್ ಅರಾಪುರ, ಮಂಜುನಾಥ ರೆಡ್ಡಿ ಚೆನ್ನಳ್ಳಿ, ಪರಸಪ್ಪ ನಾಯಕ್, ರಾಮಚಂದ್ರ, ಅಂಬಣ್ಣ ನಾಯಕ್, ರಾಜಶೇಖರ್ ಕಂಬಳಿ, ಭೀಮೇಶ್ ಚಳ್ಳೂರು, ದೇವರಾಜ್ ಚಳ್ಳೂರು, ತಿಮ್ಮನಗೌಡ ಪಿ.ಪಿ., ಹನುಮಂತಪ್ಪ ಹಾಲವಿ, ಅಮರೇಶ್ ಚಳ್ಳೂರು, ಪ್ರಶಾಂತ್ ಪಾಟೀಲ್, ಪೃಥ್ವಿರಾಜ್, ಶರಣಪ್ಪ ರಾಮಾಪುರ, ಯಂಕಪ್ಪ ಚಳ್ಳೂರು, ಹೊನ್ನಪ್ಪ ನಾಯಕ್, ಬಸವರಾಜ್ ತಳವಾರ್, ರಮೇಶ್ ಕುಂಟೋಜಿ, ಬಸನಗೌಡ ಯರಡೋಣ, ಬಸವರಾಜ್ ಸೋಲಬಗೌಡ, ದೇವರಾಜ್ ಬೇರಿಗೆ, ಓಂಕಾರೇಶ್, ಅಂಬಣ್ಣ ಉಳೆನೂರು, ರಾಚಪ್ಪ ಬಳಿಗಾರ್,ಶ್ರೀಕಂಠಯ್ಯ ಸ್ವಾಮಿ, ಸಂಗಮೇಶ ಸೇರಿದಂತೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌