ಕನ್ನಡಪ್ರಭ ವಾರ್ತೆ ಮೈಸೂರು
ಅಲ್ಲಿನ ಬಸವ ಮಂದಿರಕ್ಕೆ ಭೇಟಿ ನೀಡಿ ಮಾತೆ ಬಸವಾಂಜಲಿ ಅವರನ್ನು ಭೇಟಿಯಾಗಿ ಮಠಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಬಸವ ಮಂದಿರದ ದಾಖಲೆಯಲ್ಲಿಯೂ ವಕ್ಫ್ ಎಂದು ನಮೂದಿಸಿರುವ ಕುರಿತು ದಾಖಲೆಗಳನ್ನು ಪಡೆದು ಪರಿಶೀಲಿಸಿದರು. ಬಳಿಕ ಸಮೀಪದ ಮನೆ ಮನೆಗಳಿಗೆ ತೆರಳಿ ಅವರಿಂದಲೂ ಅವರ ಆಸ್ತಿ ಮತ್ತು ಎಷ್ಟು ವರ್ಷದಿಂದ ವಾಸವಿದ್ದಾರೆ ಎಂಬೆಲ್ಲಾ ಮಾಹಿತಿ ಕಲೆ ಹಾಕಿದರು.ಸುಮಾರು 40- 50 ವರ್ಷದಿಂದ ವಾಸವಿರುವ ನಿವಾಸಿಗಳು ತಮ್ಮ ಖಾತೆ, ಕಂದಾಯ ಮುಂತಾದ ದಾಖಲಾತಿ ನೀಡಿದರು. ಈ ಎಲ್ಲವನ್ನೂ ಪರಿಶೀಲಿಸಿ ತಮ್ಮ ಪರವಾಗಿ ಸದನದಲ್ಲಿ ಧ್ವನಿ ಎತ್ತುತ್ತೇವೆ ಮತ್ತು ಬೀದಿಗಿಳಿದು ಹೋರಾಟ ರೂಪಿಸುವುದಾಗಿ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಎನ್. ರವಿಕುಮಾರ್, ಮಾಜಿ ಸಚಿವ ಹಾಲಪ್ಪ ಆಚಾರ್, ಕೇಂದ್ರದ ಮಾಜಿ ಸಚಿವ ನಾರಾಯಣಸ್ವಾಮಿ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ನಗರಾಧ್ಯಕ್ಷ ಎಲ್. ನಾಗೇಂದ್ರ ಮೊದಲಾದವರು ಇದ್ದರು.