ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ತಾಲೂಕು ಆಡಳಿತದ ವತಿಯಿಂದ ಚಾಮುಂಡೇಶ್ವರಿ ದೇವಸ್ಥಾನದ ಬಳಿ ನಡೆದ ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆ ಕಾಲದಲ್ಲೇ ಮುಂದಾಲೋಚನೆ ಇಟ್ಟುಕೊಂಡು ಬಾಬು ಜಗಜೀವನ ರಾಂ ಕಾರ್ಯ ನಿರ್ವಹಿಸಿದ್ದರು. ಹಸಿರು ಕ್ರಾಂತಿಯ ಮೂಲಕ ದೇಶದಲ್ಲಿ ಉಂಟಾಗಿದ್ದ ಆಹಾರ ಕೊರತೆಯನ್ನು ನೀಗಿಸಿದರು. ಅಲ್ಲದೇ ಇಡೀ ಮಾನವರ ಅಭ್ಯುದಯಕ್ಕಾಗಿ ಯೋಜನೆಗಳನ್ನು ರೂಪಿಸಿದ್ದರು ಎಂದರು.
ಸಮತಾ ಸೈನಿಕ ದಳ ಯುವ ಘಟಕ ಅಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಬಾಬು ಜಗಜೀವನ ರಾಂ ಈ ದೇಶದ ಶಕ್ತಿ, ಇವರು ದೇಶದ ಉದ್ದಗಲಕ್ಕೂ ಸ್ವತಂತ್ರ ಸೇನಾನಿಯಾಗಿ ಹೋರಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅಸ್ಪೃಶ್ಯತೆ ವಿರುದ್ಧ ಹೋರಾಡಿ, ಮಹಾತ್ಮಾ ಗಾಂಧಿಯವರ ಜೊತೆಗೂಡಿ ಎಲ್ಲರ ಸರ್ವತೋಮುಖ ಬೆಳವಣಿಗೆಗೆ ದುಡಿದಿದ್ದರು ಎಂದರು.ಬಾಬು ಜಗಜೀವನ ರಾಂ ರವರ 117ನೇ ಜಯಂತಿ ಪ್ರಯುಕ್ತ ಬೆಳ್ಳಿ ರಥದ ಮೂಲಕ ಅವರ ಭಾವಚಿತ್ರವನ್ನು ಹಾರೋಹಳ್ಳಿ ಸರ್ಕಲ್ ನಿಂದ ಆಂಜನೇಯ ದೇವಸ್ಥಾನದವರೆಗೆ ತಮಟೆ, ವಾದ್ಯಗಳ ಮುಖಾಂತರ ಮೆರವಣಿಗೆಯನ್ನು ನಡೆಸಲಾಯಿತು.