ಕ್ಷೇತ್ರದ ಪವಿತ್ರತೆಗಾಗಿ ಒಳ್ಳೆಯ ಗುಣಗಳನ್ನು ಹೊಂದಬೇಕು

KannadaprabhaNewsNetwork |  
Published : Apr 09, 2024, 12:45 AM IST
ಅರಣ್ಯ ಸಂರಕ್ಷಣೆಯ ಕುರಿತು ತರಬೇತಿ ಕಾರ್ಯಗಾರ | Kannada Prabha

ಸಾರಾಂಶ

ಮಹದೇಶ್ವರ ಬೆಟ್ಟ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶವು ಅತಿ ಪವಿತ್ರ ಸ್ಥಳವಾಗಿದ್ದು, ಈ ಕ್ಷೇತ್ರವನ್ನು ಪವಿತ್ರತೆಗೊಳಿಸಲು ಮೊದಲು ನಾವೆಲ್ಲರೂ ಒಳ್ಳೆಯ ಗುಣಗಳನ್ನು ಹೊಂದಿರಬೇಕು ಎಂದು ಸಾಲೂರು ಶ್ರೀ ಶಾಂತಮಲ್ಲಿಕಾರ್ಜುನಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಮಹದೇಶ್ವರ ಬೆಟ್ಟ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶವು ಅತಿ ಪವಿತ್ರ ಸ್ಥಳವಾಗಿದ್ದು, ಈ ಕ್ಷೇತ್ರವನ್ನು ಪವಿತ್ರತೆಗೊಳಿಸಲು ಮೊದಲು ನಾವೆಲ್ಲರೂ ಒಳ್ಳೆಯ ಗುಣಗಳನ್ನು ಹೊಂದಿರಬೇಕು ಎಂದು ಸಾಲೂರು ಶ್ರೀ ಶಾಂತಮಲ್ಲಿಕಾರ್ಜುನಸ್ವಾಮೀಜಿ ತಿಳಿಸಿದರು. ಅರಣ್ಯ ಇಲಾಖೆ ಹಾಗೂ ಬೇಡರಕಣ್ಣಪ್ಪ ಪರಿಸರ ಅಭಿವೃದ್ಧಿ ಸಮಿತಿ ತುಳಸಿಕೆರೆ ವತಿಯಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಸಂರಕ್ಷಣೆಯ ಕುರಿತು ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು .ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿ, ಮಹದೇಶ್ವರ ಬೆಟ್ಟ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶವು ಧಾರ್ಮಿಕ ಪವಿತ್ರ ಸ್ಥಳವಾಗಿದ್ದು,

ಈ ಕ್ಷೇತ್ರವನ್ನು ಪವಿತ್ರತೆಗೊಳಿಸಲು ಮೊದಲು ನಾವೆಲ್ಲರೂ ಒಳ್ಳೆಯ ಗುಣಗಳನ್ನು ಹೊಂದಿರಬೇಕು ಮತ್ತು ಇಲ್ಲಿ ಬರುವಂತಹ ಪ್ರತಿಯೊಬ್ಬರಲ್ಲಿ ಮತ್ತು ಸ್ಥಳೀಯ ಜನಾಂಗದವರಲ್ಲಿ ಮಹದೇಶ್ವರರು ಇದ್ದಾರೆ ಎಂಬ ಮನೋಭಾವನೆಯಿಂದ ನೋಡಬೇಕು ಅರಣ್ಯ ಸಂರಕ್ಷಣೆ, ಪರಿಸರ ಸಂರಕ್ಷಣೆಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯು ಕೂಡ ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸ್ಥಳೀಯ ಯುವಕರಿಗೆ ತರಬೇತಿಯನ್ನು ನೀಡಿ ಬೇಡರ ಕಣ್ಣಪ್ಪ ಪರಿಸರ ಅಭಿವೃದ್ಧಿ ಸಮಿತಿಯಿಂದ ಪ್ರವಾಸಿಗರನ್ನು ಮಹದೇಶ್ವರ ಬೆಟ್ಟದಿಂದ ನಾಗಮಲೈಗೆ ಕರೆದುಕೊಂಡು ಹೋಗಿ ಬರುವಾಗ ಪ್ರವಾಸಿಗರೊಂದಿಗೆ ಗೌರವದಿಂದ, ಕಾರ್ಯನಿರ್ವಹಿಸಲು ತಿಳಿಸಿದರು. ಕಾರ್ಯಗಾರದಲ್ಲಿ ಕೀರನಹೊಲ, ತುಳಸಿಕೆರೆ, ನಾಗಮಲೈ, ಮೆದಗಲಾಣೆ ಹಾಗೂ ಮಹದೇಶ್ವರ ಬೆಟ್ಟ ಸೇರಿ ಒಟ್ಟು 27 ಆಸಕ್ತ ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿನಯ್ ಶಿರಸಿ ಪ್ರಥಮ ಚಿಕಿತ್ಸೆ, ಪರಿಸರ ಸಂರಕ್ಷಣೆ ಹಾಗೂ ಪ್ರವಾಸಿಗರೊಂದಿಗೆ ಯಾವ ರೀತಿ ವರ್ತಿಸಬೇಕು ಹಾಗೂ ಇತರ ವಿಷಯಗಳ ಕುರಿತು ತರಬೇತಿ ನೀಡಿದರು. ಪರಿಸರ ಸಂರಕ್ಷಣೆ, ಸ್ಥಳೀಯ ಯುವಕರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡಲು ಅರಣ್ಯ ಇಲಾಖೆಯು ಮುಂದಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು

ಮಲೆ ಮಹದೇಶ್ವರ ವನ್ಯಜೀವಿ ಉಪವಿಭಾಗ, ಮಹದೇಶ್ವರ ಬೆಟ್ಟಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಗೌಡ ಪಾಟೀಲ್, ಬೇಡರಕಣ್ಣಪ್ಪ ಪರಿಸರ ಅಭಿವೃದ್ಧಿ ಅಧ್ಯಕ್ಷ ಕೆಂಪಣ್ಣ ಹಾಗೂ ಕಾರ್ಯದರ್ಶಿ ಭೋಜಪ್ಪ, ಪಾಲಾರ್ ವನ್ಯಜೀವಿ ವಲಯ ವಲಯ ಅರಣ್ಯಾಧಿಕಾರಿ ಭಾರತಿ ನಂದಿಹಳ್ಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ