ಆಮ್ಲಜನಕ ಪ್ಲಾಂಟ್‌ನಲ್ಲಿ ಸೋರಿಕೆ: ಕೆಲಕಾಲ ಆತಂಕ

KannadaprabhaNewsNetwork | Published : Jul 8, 2024 12:34 AM

ಸಾರಾಂಶ

ಆಕ್ಸಿಜನ್ ಸೋರಿಕೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅನೇಕರು ಭಯಭೀತರಾಗಿ ಹೊರಗೆ ಜೀವದ ಭಯದಿಂದ ಓಡಿ ಹೊರಗೆ ಬಂದರು. 2020 ರಲ್ಲಿಕೊವಿಡ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡುವುದಕ್ಕೆ ರಾಜ್ಯದಲ್ಲೇ ಮೊದಲ ಆಕ್ಸಿಜನ್ ‌ಪ್ಲಾಂಟ ಇದಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ/ಚಿಂಚೋಳಿ

ಜಿಲ್ಲೆಯ ಚಿಂಚೋಳಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ ಸಮಯದಲ್ಲಿ ಪ್ಲಾಂಟ್‌ನಿಂದ ವೈದ್ಯಕೀಯ ದ್ರವ ಆಕ್ಸಿಜನ್ ಸೋರಿಕೆಯಾಗುತ್ತಿದ್ದಂತೆಯೇ ಭೀತಿಯ ವಾತಾವರಣ ಉಂಟಾಗಿತ್ತಲ್ಲದೆ ಇದರಿಂದಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ ಒಳರೋಗಿ ಮತ್ತು ಹೊರರೋಗಿಗಳನ್ನು ಮತ್ತು ಕರ್ತವ್ಯದಲ್ಲಿದ್ದ ಎಲ್ಲಾ ಆರೋಗ್ಯ ಸಹಾಯಕಿಯರನ್ನು ಹೊರ ಹಾಕಲಾಯಿತು.

ಆಕ್ಸಿಜನ್ ಸೋರಿಕೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅನೇಕರು ಭಯಭೀತರಾಗಿ ಹೊರಗೆ ಜೀವದ ಭಯದಿಂದ ಓಡಿ ಹೊರಗೆ ಬಂದರು. 2020 ರಲ್ಲಿಕೊವಿಡ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡುವುದಕ್ಕೆ ರಾಜ್ಯದಲ್ಲೇ ಮೊದಲ ಆಕ್ಸಿಜನ್ ‌ಪ್ಲಾಂಟ ಇದಾಗಿದೆ.

ಆದರೆ ಆಕ್ಸಿಜನ್ ಪ್ಲಾಂಟ್‌ನಲ್ಲಿ ಸೋರಿಕೆಯಾದ ಕಾರಣದಿಂದ ವಸತಿ ಗೃಹದಲ್ಲಿ ಇರುವ ಎಲ್ಲಾ ಮಹಿಳೆಯರು, ಮಕ್ಕಳಿಗೆ ವೃದ್ಧರಿಗೆ ದೂರ ಹೋಗಲು ಆಸ್ಪತ್ರೆಯ ಡಾ. ಸಂತೋಷ ಪಾಟೀಲ ಸೂಚನೆ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ಭೇಟಿ ನೀಡಿ ನಿಗಾ ಇಟ್ಟಿದ್ದಾರೆ.

ಆಸ್ಪತ್ರೆಯ ಸುತ್ತಲಿನ ಪ್ರದೇಶದಲ್ಲಿ ಇರುವ ಜನರು ಭಯ ವಾತಾವರಣದಲ್ಲಿ ಇದ್ದಾರೆ. ಪೋಲಿಸರು ಆರೋಗ್ಯ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ: ಚಿಂಚೋಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಇದು ಆಕ್ಸಿಜನ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ ಎಂದು ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿನ ಆಕ್ಸಿಜನ್ ಪ್ಲಾಂಟ್‌ನಲ್ಲಿ ಸೋರಿಕೆಯಾಗುತ್ತಿದೆ ಎಂದು ಪಟ್ಟಣದಾದ್ಯಂತ ಸುದ್ದಿ ಹಬ್ಬಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಶುಕ್ರವಾರವಷ್ಟೇ ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ವೈದ್ಯಕೀಯ ದ್ರವ ಆಮ್ಲಜನಕ ಭರ್ತಿ ಮಾಡಿದೆ. ಟ್ಯಾಂಕ್ ಸಂಪೂರ್ಣ ಭರ್ತಿಯಾದ ನಂತರ ಅದರಲ್ಲಿನ ಆಂತರಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಎ, ಬಿ, ಸಿ ಎಂಬ ಸುರಕ್ಷತೆಯ ವಾಲ್‌ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಇದಕ್ಕೆ ಯಾರು ಆತಂಕ ಪಡಬೇಕಿಲ್ಲ‌. ಇದು ಎಲ್.ಎಂ.ಓ ಟ್ಯಾಂಕ್‌ನಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.

Share this article