ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗುಳೇದಗುಡ್ಡ ಪಟ್ಟಣ ಸೇರಿದಂತೆ ಕೆಲವು ಹಳ್ಳಿಗಳು ಸಂಪೂರ್ಣ ಆಲಮಟ್ಟಿ ಜಲಾಶಯದ ನೀರನ್ನೇ ಅವಲಂಭಿಸಿದ್ದು, ಬೇಸಿಗೆ ಸಮಯ ಆಗಿರುವುದರಿಂದ ಈ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಕೆಲವರು ಖಾಸಗಿ ಬೋರವೆಲ್‌ಗಳಿಂದ ನೀರು ಪಡೆದರೆ, ಇನ್ನು ಕೆಲವರು ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ಆಲಮಟ್ಟಿ ನೀರು ಪೂರೈಕೆಯಾಗುವ ಮಾರ್ಗ ಮಧ್ಯದ ಗ್ರಾಮಸ್ಥರು ನೀರಿಲ್ಲದೆ ಪರದಾಡುವಂತಾಗಿದೆ. ಬೂದಿನಗಡ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಗ್ರಾಮದೇವತೆ ಜಾತ್ರೆ ಇರುವುದರಿಂದ ನೀರಿನ ಕೊರತೆಯಿಣದ ಜಾತ್ರೆಗೆ ಆಗಮಿಸಿದ ಬಂಧುಗಳು ಮತ್ತು ಆತ್ಮೀಯರು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಆದಷ್ಟು ಬೇಗ ಜಾಕ್ವೆಲ್ ದುರಸ್ತಿ ಮಾಡಿ ನೀರು ಪೂರೈಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಬೂದಿನಗಡ ಗ್ರಾಮದ 3 ಜನ ರೈತರ ಕೊಳವೆಬಾವಿಗಳಿಂದ ಜನರಿಗೆ ನೀರು ಕೊಡಲಾಗುತ್ತಿದೆ. ನೀರಿನ ಪೂರೈಕೆಯಲ್ಲಿ ಸ್ವಲ್ಪ ತೊಂದರೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಜಾಕ್ವೆಲ್ ರಿಪೇರಿ ಕೆಲಸ ಆರಂಭವಾಗಿದ್ದು, ಶನಿವಾರದ ವೇಳೆಗೆ ಮುಗಿಯಲಿದ್ದು, ಬಳಿಕ ನೀರು ಪೂರೈಕೆ ಮಾಡಲಾಗುವುದು.-ರಾಜೇಶ ಕೋತಿನ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ