ಆಧ್ಯಾತ್ಮಿಕ ಕೇಂದ್ರಗಳ ವೀಕ್ಷಣೆಯೊಂದಿಗೆ ಇತಿಹಾಸ ತಿಳಿದುಕೊಳ್ಳಿ

KannadaprabhaNewsNetwork |  
Published : Jan 14, 2025, 01:01 AM IST
ಫೋಟೋ: 14 ಹೆಚ್‌ಎಸ್‌ಕೆ 1 ಹೊಸಕೋಟೆ ತಾಲೂಕಿನ ಸೋಂಪುರ-ಸೊಣದೇನಹಳ್ಳಿ ಗ್ರಾಮದಿಂದ ಓಂಶಕ್ತಿ ದೇವಾಲಯಕ್ಕೆ ಪ್ರಯಾಣ ಬೆಳಸಿದ ಭಕ್ತಾದಿಗಳ ವಾಹನಕ್ಕೆ ಗ್ರಾಮದ ಮುಖಂಡ ಅರ್‌ಟಿಸಿ ಗೋವಿಂದ್ ರಾಜ್ ಚಾಲನೆ ನೀಡಿದರು. | Kannada Prabha

ಸಾರಾಂಶ

ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವವರು ಅಲ್ಲಿನ ದೇವರುಗಳ ವೀಕ್ಷಣೆ ಜೊತೆಗೆ ಅಲ್ಲಿನ ಇತಿಹಾಸವನ್ನು ಅಧ್ಯಯನ ಮಾಡಿಕೊಂಡು ಬರಬೇಕು ಎಂದು ಸಮಾಜ ಸೇವಕ ಆರ್‌ಟಿಸಿ ಗೋವಿಂದರಾಜ್ ತಿಳಿಸಿದರು.

ಕನ್ನಡಪ್ರಭವಾರ್ತೆ ಹೊಸಕೋಟೆ

ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವವರು ಅಲ್ಲಿನ ದೇವರುಗಳ ವೀಕ್ಷಣೆ ಜೊತೆಗೆ ಅಲ್ಲಿನ ಇತಿಹಾಸವನ್ನು ಅಧ್ಯಯನ ಮಾಡಿಕೊಂಡು ಬರಬೇಕು ಎಂದು ಸಮಾಜ ಸೇವಕ ಆರ್‌ಟಿಸಿ ಗೋವಿಂದರಾಜ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಸೊಣ್ಣದೇನಹಳ್ಳಿ ಗ್ರಾಮದಲ್ಲಿ ನಾಲ್ಕನೇ ವರ್ಷದ ಓಂ ಶಕ್ತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮ ಸುಬೀಕ್ಷವಾಗಿರಬೇಕು ಎಲ್ಲರೂ ಉತ್ತಮ ಆರೋಗ್ಯವಾಗಿರಬೇಕು ಎಂದು ಕಳೆದ 4 ವರ್ಷದಿಂದ ಓಂ ಶಕ್ತಿ ದೇವಾಲಯಕ್ಕೆ ಪ್ರವಾಸವನ್ನು ಕಳುಹಿಸುವ ಕಾರ್ಯ ಮಾಡುತ್ತಿದ್ದೇನೆ. ಎಲ್ಲರೂ ದೇವರ ದರ್ಶನ ಪಡೆಯುವ ಮೂಲಕ ತಮ್ಮ ಪ್ರಾರ್ಥನೆ ಸಲ್ಲಿಸಿ. ನಿಮ್ಮ ಎಲ್ಲಾ ಇಷಾöರ್ಥಗಳು ನೆರವೇರಲಿ. ಗ್ರಾಮದ ಓಂ ಶಕ್ತಿ ಭಕ್ತ ಮಂಡಳಿಯಿಂದ ತಮಿಳು ನಾಡಿನ ಮೇಲ್ ಮರುವತ್ತೂರಿನ ದೇವಾಲಯಕ್ಕೆ ಪ್ರವಾಸ ಹೊರಟಿರುವ ಭಕ್ತಾಧಿಗಳ ಆಂತರಿಕ ಸಮಸ್ಯೆಗಳು ಬಗೆಹರಿಯುವ ಜೊತೆಗೆ ನಾಡು ಉತ್ತಮವಾಗಿರಲಿ ಎಂಬ ಮನೋಭಾವ ಎಲ್ಲರಿಗೂ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಈ ಪ್ರವಾಸವನ್ನು ಆಯೋಜನೆ ಮಾಡಿದ್ದೇನೆ. ಇದಕ್ಕೆಲ್ಲ ನಮ್ಮ ತಾಲೂಕಿನ ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ಬೆಂಡಿಗಾನಹಳ್ಳಿ ಕುಟುಂಬ ಪ್ರೇರಣೆಯಗಿದ್ದು ಭಕ್ತರ ಇಷ್ಟಾರ್ಥ ಸಿದ್ದಿಗೊಂಡು ಗ್ರಾಮದಲ್ಲಿ ಶಾಂತಿ ನೆಮ್ಮದಿಯಾಗಿರಲಿ ಎಂದು ಹಾರೈಸಿದರು.ಓಂ ಶಕ್ತಿ ದೇವಿಯ ದರ್ಶನದೊಂದಿಗೆ 3 ದಿನ 16 ದೇಗುಲಗಳ ದರ್ಶನದ ಪ್ರವಾಸ ಯಾತ್ರೆ ವಾಹನಕ್ಕೆ ಬೀಳ್ಕೊಡುಗೆ,

ಶರತ್ ಬಚ್ಚೇಗೌಡ ಸಚಿವರಾಗಲು ಹರಕೆ: ಶಾಸಕ ಶರತ್ ಬಚ್ಚೇಗೌಡ ಮುಂದಿನಗಳಲ್ಲಿ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಬೇಕೆಂಬ ಮಹದಾಸೆಯೊಂದಿಗೆ ಓಂ ಶಕ್ತಿ ದೇವಿಯ ಹರಕೆ ಹೊತ್ತಿದ್ದೇನೆ. ಈ ಹಿಂದೆಯೂ ಸಹ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸದ ನಂತರ ನೂರಾರು ಭಕ್ತರನ್ನು ಉಚಿತವಾಗಿ ತೀರ್ಥಯಾತ್ರೆಗೆ ಕಳುಹಿಸಿದ್ದೆ. ಅವರ ಮುಂದಿನ ರಾಜಕೀಯ ಜೀವನ ಉಜ್ವಲವಾಗಿ ಬೆಳಗಿ ತಾಲೂಕಿನ ಅಭಿವೃದ್ಧಿ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದರು.ಎಸ್.ಡಿ ಆಂಜಿನಪ್ಪ, ದೇವರಾಜ , ಗಣೇಶ, ಮುನಿರಾಜು ಬುಳ್ಳಿ, ನಾರಾಯಣ ಸ್ವಾಮಿ, ಅಖಿಲ್ ಉಪಸ್ಥಿತರಿದ್ದರು

PREV

Recommended Stories

ಪರ್ಕಳ: ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಸಂಪನ್ನ
ಆರತಿ ಬೆಳಗಿ, ತಿಲಕ ಇರಿಸಿ, ರಕ್ಷಾ ಬಂಧನ ಆಚರಿಸಿದ ಚಿಣ್ಣರು