ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಸೂಸಲವಾನಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಪರಿಕರ
ಸರ್ಕಾರ ಶಾಲೆಗಳಿಗೆ ಎಲ್ಲಾ ಸೌಲಭ್ಯ ಕಲ್ಪಿಸಿರುವುದರಿಂದ ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಕಲಿಕೆಯ ಕಡೆ ಗಮನ ಹರಿಸಿದಾಗ ಮಕ್ಕಳು ಉತ್ತಮ ನಾಗರಿಕರಾಗಬಹುದು ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.
ಸೋಮವಾರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಂದ ತಾಲೂಕಿನ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ಮಕ್ಕಳಿಗೆ ಸ್ಕೂಲ್ ಬ್ಯಾಗ್, ಛತ್ರಿ, ನೋಟ್ ಬುಕ್, ಜಾಮಿಟ್ರಿ ಬಾಕ್ಸ್ ಹಾಗೂ ಇತರೆ ಶಾಲಾ ಪರಿಕರ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸೀನಿಯರ್ ಚೇಂಬರ್ ಈಗಾಗಲೇ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಇಂದು ಸೂಸಲ ವಾನಿಯ ಸರ್ಕಾರಿ ಶಾಲೆ 30 ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದೇವೆ. ಈ ಎಲ್ಲಾ ಸೌಲಭ್ಯ ಉಪಯೋಗಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಜೇಸಿ ವಾಣಿಯಂತೆ ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂಬ ವಾಕ್ಯದಂತೆ ಶ್ರದ್ಧಾ ಭಕ್ತಿ ಯಿಂದ ಶಿಕ್ಷಣ ಕಲಿತು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬಾಳಬೇಕು ಎಂದು ಕರೆ ನೀಡಿದರು.
-- ಬಾಕ್ಸ್ --
ಬಾಲಕಿಗೆ ನೆರವುಇದೇ ಸಂದರ್ಭದಲ್ಲಿ ಅನಾರೋಗ್ಯ ಪೀಡಿತಳಾದ ರಾವೂರು ಗ್ರಾಮದ ರಮೇಶ ಎಂಬುವರ ಪುತ್ರಿ 6 ವರ್ಷದ ನಿಹಾರಿಕ ಎಂಬ ಪುಟ್ಟ ಬಾಲಕಿಗೆ ಪ್ರತಿ ದಿನ ಅಗತ್ಯವಾಗಿ ಬೇಕಾಗಿರುವ ಬಿಪಿ ಚೆಕಪ್ ಮಾಡುವ ಯಂತ್ರವನ್ನು ಸೀನಿಯರ್ ಚೇಂಬರ್ ನಿಂದ ಕೊಡುಗೆಯಾಗಿ ನೀಡಲಾಯಿತು.