ತಪ್ಪುಗಳಿಂದ ಪಾಠ ಕಲಿತು, ಉತ್ತಮ ಜೀವನ ರೂಪಿಸಿಕೊಳ್ಳಿ

KannadaprabhaNewsNetwork |  
Published : Oct 30, 2026, 01:15 AM IST
29ಕೆಆರ್ ಎಂಎನ್ 6.ಜೆಪಿಜಿರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಟೆಲಿ-ಮಾನಸ್ ಸಹಾಯವಾಣಿ ದೂರವಾಣಿ ಕೇಂದ್ರ ಹಾಗೂ ಮತ್ತು ಜೂಟ್ ಬ್ಯಾಗ್ ತಯಾರಿಕಾ ತರಬೇತಿ ಕಾರ್ಯಾಗಾರದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಮನುಷ್ಯ ಸಾಂದರ್ಭಿಕ ಶಿಶು ಕೆಲವು ಸಂದರ್ಭಗಳಲ್ಲಿ ಕೈಮೀರಿದ ಪರಿಸ್ಥಿತಿಗಳಲ್ಲಿ ತಪ್ಪುಗಳಾಗಿ ಬಿಡುತ್ತದೆ. ಆ ತಪ್ಪುಗಳಿಂದ ಪಾಠ ಕಲಿತು, ಕೆಟ್ಟ ಆಲೋಚನೆಗಳನ್ನು ಮೆಟ್ಟಿ ನಿಂತು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕಾರಾಗೃಹದ ನಾಲ್ಕು ಗೋಡೆಗಳ ನಡುವೆ ನಡೆಸುವ ಜೀವನವು ಸ್ವತಂತ್ರ ಬದುಕಿನ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದು ನಗರಸಭೆ ಅಧ್ಯಕ್ಷ ಶೇಷಾದ್ರಿ ಹೇಳಿದರು

ರಾಮನಗರ: ಮನುಷ್ಯ ಸಾಂದರ್ಭಿಕ ಶಿಶು ಕೆಲವು ಸಂದರ್ಭಗಳಲ್ಲಿ ಕೈಮೀರಿದ ಪರಿಸ್ಥಿತಿಗಳಲ್ಲಿ ತಪ್ಪುಗಳಾಗಿ ಬಿಡುತ್ತದೆ. ಆ ತಪ್ಪುಗಳಿಂದ ಪಾಠ ಕಲಿತು, ಕೆಟ್ಟ ಆಲೋಚನೆಗಳನ್ನು ಮೆಟ್ಟಿ ನಿಂತು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕಾರಾಗೃಹದ ನಾಲ್ಕು ಗೋಡೆಗಳ ನಡುವೆ ನಡೆಸುವ ಜೀವನವು ಸ್ವತಂತ್ರ ಬದುಕಿನ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದು ನಗರಸಭೆ ಅಧ್ಯಕ್ಷ ಶೇಷಾದ್ರಿ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ನಗರಸಭೆ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಟೆಲಿ-ಮಾನಸ್ ಸಹಾಯವಾಣಿ ದೂರವಾಣಿ ಕೇಂದ್ರ ಹಾಗೂ ಮತ್ತು ಜೂಟ್ ಬ್ಯಾಗ್ ತಯಾರಿಕಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತಪ್ಪು ಮಾಡಿದವರು ಶಿಕ್ಷೆ ಅನುಭವಿಸಿದ ನಂತರ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ಘನತೆಯಿಂದ ಬದುಕಲು ನಿರ್ಧರಿಸಬೇಕು. ಒಂಟಿತನ, ದುಃಖ ಹಾಗೂ ಮಾನಸಿಕ ಒತ್ತಡದಿಂದ ಬಳಲುವವರೊಂದಿಗೆ ಸಮಾಧಾನದಿಂದ ವರ್ತಿಸಿ, ಅವರು ಉತ್ತಮ ಜೀವನದತ್ತ ಸಾಗಲು ಮಾರ್ಗದರ್ಶನ ನೀಡಬೇಕು. ಕಾರಾಗೃಹದಲ್ಲಿ ಒದಗಿಸಿರುವ ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಆರ್. ಪ್ರೀತಿ ಮಾತನಾಡಿ, ಕಾರಾಗೃಹ ವಾಸಿಗಳು ಹೊರ ಹೋದ ನಂತರ ತಮ್ಮದೇ ಆದ ಉತ್ತಮ ಜೀವನವನ್ನು ರೂಪಿಸಿಕೊಂಡು ಕುಟುಂಬದವರು, ತಂದೆ-ತಾಯಿ ಹಾಗೂ ಮಕ್ಕಳಿಗೆ ಗೌರವ ನೀಡಿ ಬದುಕಬೇಕು, ರಾಮನಗರದ ಕಾರಾಗೃಹದಲ್ಲಿ ಟೆಲಿಮನಸ್ ಸಹಾಯವಾಣಿ ದೂರವಾಣಿ ಕೇಂದ್ರವನ್ನು ಸ್ಥಾಪಿಸಲು ನಗರಸಭೆಯ ಅಧ್ಯಕ್ಷರು ವಿಶೇಷ ಕಾಳಜಿ ವಹಿಸಿ ಅಗತ್ಯ ಸೌಲಭ್ಯ ಒದಗಿಸಿದ್ದಾರೆ. ಇದನ್ನು ಬಂದಿವಾಸಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಕುಮಾರ್ ಮಾತನಾಡಿ, ಮಾನಸಿಕ ಸಮಸ್ಯೆಗಳು, ಒಂಟಿತನ, ಆತಂಕ ಮತ್ತು ಒತ್ತಡದಿಂದ ಬಳಲುವವರು ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಮುಂದಾಗಬಾರದು. ಯಾವುದೇ ಸಮಸ್ಯೆಗಳಿದ್ದರೂ ಧೈರ್ಯದಿಂದ ಎದುರಿಸಬೇಕು. ಮಾನಸಿಕ ಒತ್ತಡ ಖಿನ್ನತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಪಡೆಯಲು ಟೆಲಿ ಮಾನಸ್ ಸಹಾಯವಾಣಿ 14416ಕ್ಕೆ ಕರೆ ಮಾಡಬಹುದು. ಅಗತ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಅಮೂಲ್ಯವಾದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷರಾದ ಕೆ ಶೇಷಾದ್ರಿ (ಶಶಿ) ಅವರೊಂದಿಗೆ ಸಮನ್ವಯ ಸಾಧಿಸಿ ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ ದೂರವಾಣಿ ಕೇಂದ್ರವನ್ನು ಸ್ಥಾಪಿಸಲು ಸಂಪೂರ್ಣ ಸಹಕಾರ ನೀಡಿದ ಮನೋವೈದ್ಯಕೀಯ ಸಮಾಜ ಕಾರ್ಯಕರ್ತೆ ಪದ್ಮರೇಖಾ. ಎಸ್ ರವರನ್ನು ಕಾರಾಗೃಹ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದರು.

ಬಂದೀನಿವಾಸಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಹಾಗೂ ಬಂದೀನಿವಾಸಿಗಳ ಕುಟುಂಬದವರ ಕೆಲವು ಆದ್ಯತೆಗಳಿಗೆ ಸ್ಪಂದಿಸುತ್ತಿರುವ ಕಾರಾಗೃಹದ ವಾರ್ಡರ್ ನಾಗರಾಜು ಶಿವರುದ್ರಣ್ಣ ಅವರನ್ನು ರೋಟರಿ ಸಿಲ್ಕ್ ಸಿಟಿ ರಾಮನಗರ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎನ್.ಎಸ್. ಪುಷ್ಪಲತಾ , ಸುನೋದಯ ಕೌಶಲ್ಯ ತರಬೇತಿ ಕೇಂದ್ರ ಅಧ್ಯಕ್ಷರಾದ ಮಹಾದೇವು ಮಲ್ಲುಂಗೆರೆ, ಸ್ನಾತಕೋತರ ಕೇಂದ್ರ ಉಪನ್ಯಾಸಕ ಎಂ. ಪ್ರದೀಪ್ ಕುಮಾರ್ , ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

--------------------------

29ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಟೆಲಿ-ಮಾನಸ್ ಸಹಾಯವಾಣಿ ದೂರವಾಣಿ ಕೇಂದ್ರ ಹಾಗೂ ಮತ್ತು ಜೂಟ್ ಬ್ಯಾಗ್ ತಯಾರಿಕಾ ತರಬೇತಿ ಕಾರ್ಯಾಗಾರದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು.

----------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹600 ಕೋಟಿ ವೆಚ್ಚದಂತೆ ಕಸ ವಿಲೇವಾರಿಗೆ ಅಸ್ತು
ನೀರಾವರಿ ನಿಗಮಗಳ ಕಚೇರಿ ಸ್ಥಳಾಂತರ ವಿರೋಧಿಸುವವರ ವಿರುದ್ಧ ಕ್ರಮಕ್ಕೆ ರೈತರ ಆಗ್ರಹ