ಆರ್‌ಎಸ್‌ಎಸ್ ಬಗ್ಗೆ ನಾಲಿಗೆ ಹರಿಬಿಡುವುದು ಬಿಟ್ಟು ಸಂಸ್ಕಾರ ಕಲಿಯಲಿ: ಮಾಜಿ ಶಾಸಕ ಸಂಜಯ

KannadaprabhaNewsNetwork |  
Published : Oct 17, 2025, 01:03 AM ISTUpdated : Oct 17, 2025, 01:04 AM IST
ಸಂಜಯ ಪಾಟೀಲ | Kannada Prabha

ಸಾರಾಂಶ

ಬಿಟ್ಟಿ ಪ್ರಚಾರದ ಗೀಳಿನಿಂದ ನವೆಂಬರ್ ಕ್ರಾಂತಿಯವರೆಗೆ ಮಂತ್ರಿ ಪದವಿ ಉಳಿವಿಗಾಗಿ ಹೈಕಮಾಂಡ್‌ ಮೆಚ್ಚಿಸಲು ಅಪ್ರಸ್ತುವಾಗಿ ಮಾತನಾಡುವ ಮರಿ ಪ್ರಿಯಾಂಕಾ ಖರ್ಗೆ ರಾಷ್ಟ್ರ ಸೇವೆಗೆ ಸಮರ್ಪಣೆಯಾಗಿರುವ ಆರ್‌ಎಸ್‌ಎಸ್ ಬಗ್ಗೆ ನಾಲಿಗೆಯನ್ನು ಹರಿಬಿಡುವುದನ್ನು ಬಿಟ್ಟು ಸಂಸ್ಕಾರ ಕಲಿಯಲಿ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಿಟ್ಟಿ ಪ್ರಚಾರದ ಗೀಳಿನಿಂದ ನವೆಂಬರ್ ಕ್ರಾಂತಿಯವರೆಗೆ ಮಂತ್ರಿ ಪದವಿ ಉಳಿವಿಗಾಗಿ ಹೈಕಮಾಂಡ್‌ ಮೆಚ್ಚಿಸಲು ಅಪ್ರಸ್ತುವಾಗಿ ಮಾತನಾಡುವ ಮರಿ ಪ್ರಿಯಾಂಕಾ ಖರ್ಗೆ ರಾಷ್ಟ್ರ ಸೇವೆಗೆ ಸಮರ್ಪಣೆಯಾಗಿರುವ ಆರ್‌ಎಸ್‌ಎಸ್ ಬಗ್ಗೆ ನಾಲಿಗೆಯನ್ನು ಹರಿಬಿಡುವುದನ್ನು ಬಿಟ್ಟು ಸಂಸ್ಕಾರ ಕಲಿಯಲಿ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಟೀಕಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ವಿಷಯ ತಿಳಿಸಿದ ಅವರು, ಪ್ರಿಯಾಂಕಾ ಖರ್ಗೆಯವರ ಬುದ್ದಿ ಒಂದು ರೀತಿ ಓಡಿದರೇ, ಮನಸ್ಥಿತಿ ಇನ್ನೊಂದು ರೀತಿಯಲ್ಲಿದ್ದು ಎರಡಕ್ಕೂ ಸಂಬಂಧವಿಲ್ಲದ ಅಸಂಬದ್ಧ ಮಾತು ಬಾಯಿಮೂಲಕ ಆಡುವುದೇ ಇವರ ಬಾಯಿಚಪಲಕ್ಕಾಗಿ ಏನೆನೋ ಮಾತನಾಡುತ್ತಾರೆ.ಆರೆಸ್ಸೆಸ್ ಎಂದರೇ ರಾಷ್ಟ್ರ ನಿರ್ಮಾಣ ಮಾಡುವ ಸಂಘಟನೆ. ಇಂಥ ದೇಶಭಕ್ತ ಸಂಘಟನೆಯ ಚಟುವಟಿಕೆಗಳ ಮೇಲೆ ನಿಷೇಧ ಹೇರುವ ಪತ್ರ ಬರೆದಿರುವುದನ್ನು ನೋಡಿದರೇ ಸಮಾಜಕ್ಕೆ ಒಳಿತಾಗಬಾರದು, ವ್ಯಕ್ತಿ ನಿರ್ಮಾಣ ಆಗಬಾರದು ಎಂಬ ದುರುದ್ದೇಶದ ಪತ್ರವನ್ನು ಮುಖ್ಯಮಂತ್ರಿಗೆ ಬರೆದಿದ್ದಾರೆ ಎಂದು ಖಾರವಾಗಿ ಟೀಕಿಸಿದ್ದಾರೆ. ಈ ವ್ಯಕ್ತಿ ಯಾವಾಗಲೂ ಅಪ್ರಸ್ತುತ ಮಾತುಗಳ ಮೂಲಕ ತಮ್ಮ ದಿನದ ಕೆಲಸಗಳನ್ನು ಪ್ರಾರಂಭ ಮಾಡುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವರು ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿಕಾರಿ ಕೆಲಸ ಮಾಡಲು ಅವಕಾಶವಿದೆ. ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆಯಲ್ಲೂ ಕ್ರಾಂತಿಕಾರಿ ಕೆಲಸ ಮಾಡಬಹುದು. ಇವತ್ತು ನಮ್ಮ ಕರ್ನಾಟಕ, ನಮ್ಮ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆದ ನಗರ. ಅಂಥ ಇಲಾಖೆಗಳನ್ನು ನಿರ್ವಹಿಸುವ ಈ ಮಹಾನುಭಾವರು ಸಚಿವರಾಗಿ ಈಗ ಎರಡೂವರೆ ವರ್ಷ ಆಗಿದೆ. ಇದರ ಮುಂಚೆಯೂ 2 ಬಾರಿ ಸಚಿವರಾಗಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಮಗ ಎಂಬುವುದೇ ಇವರ ಅರ್ಹತೆ ಬಿಟ್ಟರೆ ಕಾರ್ಯಕ್ಷಮತೆ ಇಲ್ಲದ ಅಸಮರ್ಥ ಸಚಿವರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.ಅನುಭವ, ಜ್ಞಾನ, ಅರ್ಹತೆ ಇದೆಯೋ? ಇಲ್ಲವೋ ಅವರಿಗೆ ಕೂತಲ್ಲೇ ಅಧಿಕಾರ ಲಭಿಸಿದೆ. ವಂಶಪಾರಂಪರ್ಯ ಆಧಾರದಿಂದ ನೀವು ಬಂದಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ ಸಂಘದ ಬಗ್ಗೆ ಮಾತನಾಡಲು, ಜನರು ಅಧಿಕಾರ ಕೊಟ್ಟಿದ್ದಾರೆ. ರಾಜ್ಯದ ಜನತೆಗೆ ವಿಶಿಷ್ಟವಾದ ಸೇವೆ ಮಾಡುವ ಮೂಲಕ ನಿಮ್ಮ ಸಾಧನೆ ಮಾತನಾಡಲಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ. ನೆರೆಹಾವಳಿಯಿಂದ ರೈತರ ಬೆಳೆ ಹಾಳಾಗಿದ್ದು ಪರಿಹಾರ ಇಲ್ಲದೇ ರೈತರು ಆತ್ಮಹತ್ಯೆ ಹಾದಿ ಹಿಡದಿದ್ದಾರೆ. ಇದನ್ನು ಮೊದಲು ಸರಿಮಾಡಲು ಪತ್ರ ಬರೆಯಿರಿ ಖರ್ಗೆಯವರೆ ಎಂದು ಸವಾಲ ಎಸೆದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ‌ ಬಿ.ಕೆ.ಹರಿಪ್ರಸಾದ ಅಧಿಕಾರದ ದಾಹಕ್ಕೆ ತಮ್ಮ ಪಕ್ಷದ ಹಿರಿಯರನ್ನು ಮೆಚ್ಚಿಸುವ ಉದ್ದೇಶಕ್ಕಾಗಿ ಸಂಘವನ್ನು ಉಗ್ರ ಸಂಘಟನೆಗೆ ಹೊಲಿಸುವುದು ಅವರಿಗೆ ಗೌರವ ತಂದುಕೊಡದು. ಅವರ ಅವನತಿಗೆ ದಾರಿಯಾಗಿದೆ. ಮುಳಗಿದ ಕಾಂಗ್ರೆಸ್ ಪಕ್ಷದ ಹಡಗಿನ ಕುರುಹುಗಳನ್ನು ಸಿಗದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟಿಕಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌