ಸಂಗೀತ ಕಲಿಕೆಯಿಂದ ಶಿಕ್ಷಣಕ್ಕೆ ಅಡ್ಡಿಯಾಗದು: ವಿ.ನೈಬಿ ಪ್ರಭಾಕರ್‌

KannadaprabhaNewsNetwork |  
Published : Jun 25, 2025, 11:47 PM IST
ವಿ.ನೈಬಿ ಪ್ರಭಾಕರ್‌ ಸಂವಾದ ನಡೆಸುತ್ತಿರುವುದು  | Kannada Prabha

ಸಾರಾಂಶ

ಮಂಗ​ಳೂ​ರಿನ ಸ್ವರಾಲಯ ಸಾಧನ ಫೌಂಡೇಶನ್‌ ಹಾಗೂ ಕಲಾ ಶಾಲೆ ವತಿಯಿಂದ ಮಂಗ​ಳೂ​ರಿನ ಪಾ​ಲೆ​ಮಾರ್‌ ಗಾ​ರ್ಡನ್‌ನಲ್ಲಿ ನ​ಡೆದ ಸ್ವ​ರಾ​ಲಯ ಸಾ​ಧನಾ ಶಿಬಿರದಲ್ಲಿ ‘ಕಲಾವಿದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ

ಕನ್ನಡಪ್ರಭ ವಾರ್ತೆ ಮಂಗಳೂರು

ಸಂಗೀತ ಅಭ್ಯಾಸ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಂಗೀತ ಕಲಿಕೆ ಶಿಕ್ಷಣಕ್ಕೆ ಪೂ​ರ​ಕ​ವಾ​ಗು​ತ್ತ​ದೆಯೇ ವಿನಃ ಯಾ​ವುದೇ ರೀ​ತಿ​ಯಲ್ಲೂ ಅಡ್ಡಿಯಾಗದು ಎಂದು ಖ್ಯಾತ ಮೃದಂಗ ವಾದಕ ಶೃಂಗೇರಿಯ ವಿದ್ವಾನ್‌ ನೈಬಿ ಪ್ರಭಾಕರ್‌ ಅಭಿಪ್ರಾಯಪಟ್ಟರು.

ಮಂಗ​ಳೂ​ರಿನ ಸ್ವರಾಲಯ ಸಾಧನ ಫೌಂಡೇಶನ್‌ ಹಾಗೂ ಕಲಾ ಶಾಲೆ ವತಿಯಿಂದ ಮಂಗ​ಳೂ​ರಿನ ಪಾ​ಲೆ​ಮಾರ್‌ ಗಾ​ರ್ಡನ್‌ನಲ್ಲಿ ನ​ಡೆದ ಸ್ವ​ರಾ​ಲಯ ಸಾ​ಧನಾ ಶಿಬಿರದಲ್ಲಿ ‘ಕಲಾವಿದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳು 9ನೇ ತರಗತಿ ವರೆ​ಗೆ ​ನಿ​ಷ್ಠೆ​ಯಿಂದ ಸಂಗೀತ ಅಭ್ಯಾಸವನ್ನು ಮಾಡಿಸುತ್ತಾರೆ. ಆದರೆ ಎಸ್‌ಎಸ್‌ಎಲ್‌ಸಿಗೆ ಬಂದ ಕೂಡಲೇ ಸಂಗೀ​ತ​ ಕ​ಲಿ​ಕೆ​ ತಮ್ಮ ಮ​ಕ್ಕ​ಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸಂಗೀತ ಅಭ್ಯಾಸದಿಂದ ದೂರ ಮಾಡುತ್ತಾರೆ. ಇದೊಂದು ತಪ್ಪು ತಿಳಿವಳಿಕೆ ಹಾಗೂ ತಪ್ಪು ನಡೆಯಾಗಿದೆ. ಯಾವತ್ತೂ ಮಕ್ಕಳನ್ನು ಸಂಗೀತ ಕ​ಲಿ​ಕೆ​ಯಿಂದ ದೂರ ಮಾಡಬೇಡಿ ಎಂದು ಅವರು ಹೇ​ಳಿ​ದರು.ನೈಬಿ ಪ್ರಭಾಕರ್‌ ಅ​ವರ ಪತ್ನಿ ವಿ​ದುಷಿ ಸಾ​ವಿತ್ರಿ ಪ್ರ​ಭಾ​ಕರ್‌ ಮಾ​ತ​ನಾಡಿ, ವಿ​ದ್ಯಾ​ರ್ಥಿ​ಗ​ಳಿಗೆ ಶಾಲಾ ಪ​ರೀ​ಕ್ಷೆ​ಗ​ಳಲ್ಲಿ ನೂ​ರಕ್ಕೆ ನೂರು ಅಂಕ ಪ​ಡೆ​ಯ​ಬೇಕು ಎಂಬ ಛಯ ಇ​ದ್ದಂತೆ, ಸಂಗೀ​ತ​ದಲ್ಲೂ ಅಂತಹ ಛಲ ಇ​ರಲೇಬೇಕು. ಹಾ​ಗಿ​ದ್ದರೆ ಮಾತ್ರ ಸಂಗೀತದಲ್ಲಿ ಏ​ಳಿಗೆ ಕಾ​ಣಲು ಸಾಧ್ಯ. ಮು​ಖ್ಯ​ವಾಗಿ ಸಂಗೀ​ತ​ದಲ್ಲಿ ಗುರು ಹಾಗೂ ಗು​ರಿ ಇ​ರ​ಬೇ​ಕು. ಒಂದು ಬಾರಿ ವೇ​ದಿ​ಕೆ​ಯಲ್ಲಿ ಕಾ​ರ್ಯ​ಕ್ರಮ ನೀ​ಡಿದ ಬ​ಳಿಕ ಮುಂದಿನ ಬಾರಿ ಇ​ದ​ಕ್ಕಿಂತಲೂ ಉ​ತ್ತಮ ಕಾ​ರ್ಯ​ಕ್ರಮ ನೀ​ಡುವ ಪ್ರ​ಯತ್ನ ಮಾ​ಡ​ಬೇಕು. ಇ​ದಕ್ಕೆ ಪೋ​ಷ​ಕರು ಸದಾ ಮ​ಕ್ಕಳಿ​ಗೆ ಬೆಂಬ​ಲ​ವಾಗಿ ನಿ​ಲ್ಲ​ಬೇಕು ಎಂದು ಹೇ​ಳಿ​ದ​ರು.

ಹಿ​ರಿಯ ಪ​ತ್ರ​ಕರ್ತ ಆ​ರ್‌.​ಸಿ.​ಭಟ್‌ ಸಂವಾದ ನ​ಡೆ​ಸಿ​ಕೊ​ಟ್ಟ​ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಳಿ ಸಮುದಾಯದ ಮಕ್ಕಳಿಂದ ಗೌರಿ ದಬಾಳ್
ರಾಜ್ಯ ಬಜೆಟ್‌ ಮೇಲೆ ಕೊಪ್ಪಳದ್ದು ಬೆಟ್ಟದಷ್ಟು ನಿರೀಕ್ಷೆ