ಕನ್ನಡಪ್ರಭ ವಾರ್ತೆ ಮಡಿಕೇರಿವೈಲ್ಡ್ ಮಾಸ್ಟರ್ಸ್ ಕೊಡಗು ವತಿಯಿಂದ 4ನೇ ವರ್ಷದ ಲೆದರ್ ಬಾಲ್ ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಜನವರಿಯಲ್ಲಿ ನಡೆಯಲಿದ್ದು, ಡಿ.27ರೊಳಗೆ ಆಟಗಾರರೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ವೈಲ್ಡ್ ಮಾಸ್ಟರ್ಸ್ ಸಂಸ್ಥೆಯ ಸಹ ಕಾರ್ಯದರ್ಶಿ ರಿಶೀತ್ ಮಾದಯ್ಯ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಐಪಿಎಲ್ ಮಾದರಿಯ ಟಿ-20 ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಲಿದೆ.ವಿಜೇತ ತಂಡಕ್ಕೆ 1 ಲಕ್ಷ ರು. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 60 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ ವೈಯಕ್ತಿಕ ಮ್ಯಾನ್ ಆಫ್ ದಿ ಸಿರಿಸ್, ಬೆಸ್ಟ್ ಬ್ಯಾಟ್ಸ್‌ಮೆನ್, ಬೆಸ್ಟ್ ಬೌಲರ್, ಬೆಸ್ಟ್ ವಿಕೆಟ್ ಕೀಪರ್, ಎಮರ್ಜಿಂಗ್ ಪ್ಲೇಯರ್ ನಂತಹ ಹಲವು ಬಹುಮಾನ ನೀಡಲಾಗುವುದು ಎಂದರು.ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿ ತಂಡದಲ್ಲೂ ಕಡ್ಡಾಯವಾಗಿ 9 ಮಂದಿ ಜಿಲ್ಲೆಯ ಕ್ರೀಡಾಪಟುಗಳಿರಬೇಕು, ಜತೆಗೆ ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಇಬ್ಬರು ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ.ನಾಲ್ಕನೇ ಆವೃತ್ತಿಯಲ್ಲಿ 8 ಫ್ರೆಂಚೈಸಿ ತಂಡಗಳು ಭಾಗವಹಿಸಲಿದ್ದು, ಕೊಡಗಿನ ಕಿರಿಯ ಮತ್ತು ಹಿರಿಯ ಪ್ರತಿಭೆಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಪ್ಲೆಯರ್ ಅಪ್ಲಿಕೇಶಷನ್ ಅನ್ನು ಬಿಡುಗಡೆ ಮಾಡಲಾಗಿದ್ದು, ಆಟಗಾರರ ಹೆಸರನ್ನು ನೋಂದಾಯಿಸಿಕೊಳ್ಳಲು ಡಿ.27 ಕೊನೆಯ ದಿನವಾಗಿದೆ. ಡಿ.30ರ ಒಳಗೆ ತಂಡಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಹೊಸದಾಗಿ ಬರುವ ಫ್ರೆಂಚೈಸಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕುಟ್ಟನ ಪ್ರಶಾಂತ್ -7019671130, ರಿಶೀತ್ ಮಾದಯ್ಯ 9972376151, ಕುಶಾಲಪ್ಪ-8660723170 ಇವರುಗಳನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯಲ್ಲಿ ಲೆದರ್ ಬಾಲ್ ಪಂದ್ಯಾವಳಿಯನ್ನು ನಡೆಸಲು ಉತ್ತಮವಾದ ಮೈದಾನದ ಕೊರತೆ ಇದ್ದು, ಯುವ ಪ್ರತಿಭೆಗಳಿಗೆ ಅಭ್ಯಾಸ ಮಾಡಲು ಸುಸಜ್ಜಿತ ಕ್ರೀಡಾಂಗಣದ ವ್ಯವಸ್ಥೆ ಇಲ್ಲವೆಂದು ಬೇಸರ ವ್ಯಕ್ತಡಿಸಿದ ರಿಶೀತ್ ಮಾದಯ್ಯ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಶಾಸಕರು ಈ ಬಗ್ಗೆ ಗಮನ ಹರಿಸಿ, ಉತ್ತಮ ಕ್ರೀಡಾಂಗಣವನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ವೈಲ್ಡ್ ಮಾಸ್ಟರ್ಸ್ ಸಂಸ್ಥೆಯ ಅಧ್ಯಕ್ಷ ರವಿ ಕಿರಣ್ ರೈ, ಸಮಿತಿಯ ಉಪಾಧ್ಯಕ್ಷರಾದ ಸುಜಿತ್ ಶೆಟ್ಟಿ, ಪ್ರಿನ್ಸ್ ಕುಶಾಲಪ್ಪ, ಕಾರ್ಯದರ್ಶಿ ಕುಟ್ಟನ ಪ್ರಶಾಂತ್ ಹಾಗೂ ನಿರ್ದೇಶಕ ಸಲೀಂ ಇದ್ದರು.