ಕೊಪ್ಪಳ:
ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಿಂದೂಗಳ ಸಮಾವೇಶದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಏನಾಗುತ್ತಿದೆ ಎನ್ನುವುದು ಕಣ್ಣೆದುರಿಗೆ ಇದೆ. ಇಷ್ಟಾದರೂ ನಾವು ಒಗ್ಗಟ್ಟು ಪ್ರದರ್ಶನ ಮಾಡದಿದ್ದರೇ ಹೇಗೆ ಎಂದು ಪ್ರಶ್ನಿಸಿದರು.
ಹಿಂದೂಗಳ ಜನಸಂಖ್ಯೆ ಹೆಚ್ಚಿಸಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ತಾವೆಲ್ಲರೂ ಸಿದ್ಧವಾಗಬೇಕು. ಜನಸಂಖ್ಯೆ ನಿಯಂತ್ರಣ ಮಾಡುವುದಾದರೇ ಎಲ್ಲರಿಗೂ ಒಂದೇ ಎನ್ನುವ ಕಾನೂನು ತರಬೇಕು. ಆದರೆ, ಅದು ಈಗ ಆಗುತ್ತಿಲ್ಲ. ಹೀಗಾಗಿ, ನೀವೆಲ್ಲ ನಾಲ್ಕಾರು ಮಕ್ಕಳನ್ನು ಹೆರಬೇಕು ಎಂದು ಮನವಿ ಮಾಡಿದರು.ಹಿಂದೂಗಳಿಗೆ ಸಮಸ್ಯೆಯಾದರೇ ಸ್ಪಂದಿಸುವುದಕ್ಕಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಹೆಲ್ಪ್‌ಲೈನ್ ಮಾಡಿದ್ದೇವೆ. ಯಾರು ಸಹ ಆತಂಕಪಡುವ, ಎದೆಗುಂದುವ ಅಗತ್ಯವಿಲ್ಲ. ಎಲ್ಲರೂ ಒಗ್ಗೂಡಿ, ಹಿಂದೂ ಸಮಾಜವನ್ನು ಸಂಘಟಿಸಬೇಖಿದೆ. ಇದಕ್ಕೆ ನೀವೆಲ್ಲ ಕೈಜೋಡಿಸಿ ಎಂದರು.
ಈ ವೇಳೆ ಹಿರಿಯರಾದ ಡಾ. ಕೆ.ಜಿ. ಕುಲಕರ್ಣಿ, ಆರ್.ಬಿ. ಪಾನಘಂಟಿ ಸೇರಿದಂತೆ ಇತರರು ಇದ್ದರು.