ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ವಿದ್ಯಾರ್ಥಿಗಳು ಕಲಿಕಾ ಹಂತದಲ್ಲೇ ಕೀಳರಿಮೆ ಹೊಂದದೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ರೋಹಿಣಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ವೈ. ಕಟ್ಟಿ ಹೇಳಿದರು.ಸಮೀರವಾಡಿಯ ಕೆ.ಜೆ.ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಮತ್ತು ಸಹಪಠ್ಯ ಚಟುವಟಿಕೆಗಳ (ಸಿಸಿಎ) ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಮಾತನಾಡಿ, ಮಕ್ಕಳಿಗೆ ಸಂಸದೀಯ ವ್ಯವಸ್ಥೆ ಬಗ್ಗೆ ಅರಿಯಲು ಶಾಲಾ ಸಂಸತ್ತು ಅಗತ್ಯವಾಗಿದೆ. ಇದರಿಂದ ಅವರಲ್ಲಿ ನಾಗರಿಕ ಪ್ರಜ್ಞೆ ಮೂಡಲು ಸಾಧ್ಯವಾಗಲಿದೆ ಎಂದರು.
ಶಾಲೆಯ ಸಂಸತ್ತಿನ ನಾಯಕ ಗೌಸ ಪಕಾಲಿ, ಉಪನಾಯಕ ನಿಶಾಂತ ದಾವಣಗೆರೆ, ಸಿಸಿಎ ನಾಯಕ ರಾಹುಲ್ ಪಾಟೀಲ, ಉಪನಾಯಕಿ ಯಜ್ಞಾ ಉಂದ್ರಿ, ಕ್ರೀಡಾ ನಾಯಕ ಪ್ರಜ್ವಲ್ ಕರಾಡೆ, ಉಪನಾಯಕ ಪ್ರಜ್ವಲ್ ಬಾಗೇವಾಡಿ, ಇಂಗ್ಲಿಷ್ ವಲಯದ ನಾಯಕ ಸಿದ್ದಾರ್ಥ ಪೇಟಿಮನಿ, ಉಪನಾಯಕಿ ಶ್ರೀರಕ್ಷಾ ಗುಂಡಾ, ಅಸೆಂಬ್ಲಿ ನಾಯಕಿ ಲಕ್ಷ್ಮೀ ಪಾಶ್ಚಾಪುರ, ಉಪನಾಯಕ ಶ್ರೇಯಸ್ ಸೊನ್ನದ, ಆರೋಗ್ಯ ಮತ್ತು ನೈರ್ಮಲ್ಯ ನಾಯಕಿ ಐಶ್ವರ್ಯ ಸಂತಿ, ಉಪನಾಯಕ ಮಹೇಜ್ ಪಕಾಲಿ, ಶಿಸ್ತಿನ ನಾಯಕ ಸಾಕೇತ ಅರಳಿಮಟ್ಟಿ, ಉಪನಾಯಕ ಸುಜಲ್ ಪಾಟೀಲ, ಶಾಲಾ ವೀಕ್ಷಕ ವಿದ್ಯಾರ್ಥಿನಿಯರಾದ ಆರ್ಯ ಪೂಜಾರ, ಅವನಿ ಹುಕ್ಕೇರಿ, ಶಾಲೆಯ ಐದು ಹೌಸ್ ನ ಮುಖ್ಯಸ್ಥರು ಪ್ರಮಾಣ ವಚನ ಸ್ವೀಕರಿಸಿದರು.ಹ್ಯಾಪಿ ಹೋಮ್ ನರ್ಸರಿಯ ರಾಜಾರಮೀಜ್ ಡಾಂಗೆ ಅವರು ನೀಡಿದ ಸಸಿಗಳನ್ನು ಶಿಕ್ಷಕರಿಗೆ ವಿತರಿಸಲಾಯಿತು. ಪ್ರಾಚಾರ್ಯ ಸಿ.ಅನಿಲಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಿಸಿಎ ಮುಖ್ಯಸ್ಥರಾದ ಸುಲಭಾ ಸೊನ್ನದ, ಸುರೇಶ ಬಾಡಗಿ, ದಿವ್ಯಾ ಭಿಸೆ, ಕೋ-ಆರ್ವಿನೇಟರ್ ವಿಕ್ರಮ ದೊಡ್ಡಗೌಡರ, ಸುಪರ್ವೈಸರ್ ತಬಸುಮ್ ಗೋರಿ, ದೈಹಿಕ ಶಿಕ್ಷಣ ಶಿಕ್ಷಕರಾದ ಸುನೀಲ ಪಾಟೀಲ, ಚಿಂತಾಮಣಿ ಉಪ್ಪಾರ ಇದ್ದರು.