ಹಿರಿಯ ನಾಗರಿಕರಿಗೆ ಆರೋಗ್ಯ ಕುರಿತು ಉಪನ್ಯಾಸ

KannadaprabhaNewsNetwork |  
Published : Jul 16, 2024, 12:35 AM IST
37 | Kannada Prabha

ಸಾರಾಂಶ

ಹೊಸ ಔಷಧಿ ಸೇವನೆ ವಿಜ್ಞಾನದತ್ತ ತರಬೇತಿ ಪಡೆದ ಗ್ಯಾರಿಯಾಟ್ರಿಕ್‌ ಸಹಯಾದಿಂದ ಕನಿಷ್ಠ ಔಷಧಿಯಿಂದ ಗರಿಷ್ಠ ಆರೋಗ್ಯ ರಕ್ಷಣೆಯನ್ನು ಪ್ರತಿ ಹಿರಿಯ ನಾಗರಿಕರು ಪಡೆಯಬಹುದು

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ನಾಗರಿಕರು ಕನಿಷ್ಠ ಔಷಧಿಯಿಂದ ಗರಿಷ್ಠ ಆರೋಗ್ಯ ರಕ್ಷಣೆಗಾಗಿ ಹೊಸ ಔಷಧಿ ಸೇವನೆಯ ವಿಜ್ಞಾನದಲ್ಲಿ ತರಬೇತಿ ಪಡೆದ ಗ್ಯಾರಿಯಾಟ್ರಿಕ್‌ ಅವರನ್ನು ಸಂಪರ್ಕಿಸಬಹುದು ಎಂದು ಹಿರಿಯ ವೈದ್ಯ ಡಾ.ಬಿ.ವಿ. ರಾಜಗೋಪಾಲ ತಿಳಿಸಿದರು.

ಹಿರಿಯ ನಾಗರಿಕರ ಮಂಡಲಿ ಆಯೋಜಿಸಿದ್ದ ಆರೋಗ್ಯ ಸಂಬಂಧಿಸಿದ ಉಪನ್ಯಾಸದಲ್ಲಿ ಅವರು ಮಾತನಾಡಿ, ಹೊಸ ಔಷಧಿ ಸೇವನೆ ವಿಜ್ಞಾನದತ್ತ ತರಬೇತಿ ಪಡೆದ ಗ್ಯಾರಿಯಾಟ್ರಿಕ್‌ ಸಹಯಾದಿಂದ ಕನಿಷ್ಠ ಔಷಧಿಯಿಂದ ಗರಿಷ್ಠ ಆರೋಗ್ಯ ರಕ್ಷಣೆಯನ್ನು ಪ್ರತಿ ಹಿರಿಯ ನಾಗರಿಕರು ಪಡೆಯಬಹುದು ಎಂದರು.

ಇದರಿಂದ ಇತ್ತೀಚೆಗೆ ಗಮನಿಸದೆ ಅನೇಕ ಹಿರಿಯ ನಾಗರಿಕರು ಆರೋಗ್ಯವಂತರಾಗಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಆರೋಗ್ಯ ಜೀವನದ ಬಗ್ಗೆ ವಿವರಿಸಿದ ಅವರು, ಕೆಲವು ಮಂದಿ ಹಿರಿಯ ನಾಗರೀಕರು ಆರೋಗ್ಯಕರ ಜೀವನ ಸಾಗಿಸುತ್ತಿದ್ದರೂ ವಯಸ್ಸಾದ ಸಮಸ್ಯೆಗಳು, ಅವಮಾನ ಪರಿಸ್ಥಿತಿ ಪರಿಸ್ಥಿತಿ ಅನುಭವಿಸಿದ್ದರು. ಕುಟುಂಬಗಳ ವಿಭಜನೆ ಮುಂತಾದ ಕಾರಣದಿಂದ ಯುವ ಪೀಳಿಗೆಯಿಂದ ಅವರನ್ನು ಕಾಳಜಿ ವಹಿಸದಿರುವುದು ದುರಾದೃಷ್ಟಕರ ಎಂದರು.

ಅವರ ಮೂಲಭೂತ ಹಕ್ಕಿನ ಪ್ರಕಾರ ಅವರು ರಚನಾತ್ಮಕ ಮತ್ತು ಸಕ್ರಿಯ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅಪಾಯಕಾರಿ, ಹೃದಯ ಸಂಬಂಧಿತ ಕಾಯಿಲೆ ಎದುರಿಸುತ್ತಿದ್ದಾರೆ. ದೈಹಿಕ ರಚನೆ ಅಭಿವೃದ್ಧಿಪಡಿಸಲು ಆಸ್ಪತ್ರೆಯಲ್ಲಿ ತರಬೇತಿ ಪಡೆದ ಗ್ಯಾರಿಯಾಟ್ರಿಕ್‌ ವೈದ್ಯರನ್ನು ಸಂಪರ್ಕಿಸುವ ಮೂಲಕ ಕಡಿಮೆ ಔಷಧ ಸೇವನೆ ಸಲಹೆಪಡೆದು ದೇಹದ ಸಂಯೋಜನೆ, ಡಿಎನ್‌ಎ, ಜೀವಕೋಶ, ನರಮಂಡಲ, ಅಂತಃಸ್ರಾವಕ ವ್ಯವಸ್ಥೆ ಸಾಮಾನ್ಯ ಜೀವನಕ್ಕೆ ಹೊರಬರಲು ಪ್ರಯತ್ನ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದರು.

ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದರು.

ಮಂಡಳಿ ಅಧ್ಯಕ್ಷ ಡಾ.ಎಚ್‌.ಎಂ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಚೌರ್ಮನ್‌ ಗೌಡಪ್ಪ ಇದ್ದರು, ಕಾರ್ಯದರ್ಶಿ ಕೃಷ್ಣ ಸ್ವಾಗತಿಸಿದರು. ಪ್ರೊ. ಜವರೇಗೌಡ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!