ಕನ್ನಡಪ್ರಭ ವಾರ್ತೆ ನರಗುಂದ
ವಿದ್ಯಾರ್ಥಿಗಳು ಉಪನ್ಯಾಸಕನ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ, ಕಾಲೇಜು ಬಂದ್ ಮಾಡಿ ಬುಧವಾರ ಮತ್ತೆ ಪ್ರತಿಭಟಿಸಿದರು. ಸ್ಥಳಕ್ಕೆ ತಹಶೀಲ್ದಾರ ಶ್ರೀಶೈಲ ತಳವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ, ಕೂಡಲೇ ಬರುವಂತೆ ಮನವಿ ಮಾಡಿದಾಗ ಉಪ ವಿಭಾಗಾಧಿಕಾರಿಗಳು ಪಿಯು ಕಾಲೇಜಿಗೆ ಭೇಟಿ ನೀಡಿ ಅಹವಾಲು ಕೇಳಿದರು.
ಕಾಲೇಜಿನ ಅತಿಥಿ ಉಪನ್ಯಾಸಕರು, ಸಿಬ್ಬಂದಿ ಮತ್ತು ಕೆಲವು ವಿದ್ಯಾರ್ಥಿಗಳಿಗೆ ಉಪನ್ಯಾಸಕ ಮನ್ಸೂರ ಅಲಿಖಾನ ಖಾಜಿ ಹೊಸಪೇಟೆ ಇಲ್ಲಸಲ್ಲದ ಆರೋಪ ಮಾಡುತ್ತಾ ಲೀಗಲ್ ನೋಟಿಸ್ ನೀಡಿದ್ದಾನೆಂಬ ಆರೋಪ ಕೇಳಿದ ಉಪ ವಿಭಾಗಾಧಿಕಾರಿಗಳು ಇವತ್ತು ಸಂಜೆಯೊಳಗೆ ಅವರನ್ನು ಅಮಾನತು ಮಾಡಲಾಗುವುದು ಎಂಬ ಭರವಸೆ ನೀಡಿದರು. ಸಂಜೆಯೊಳಗೆ ಅಮಾನತು ಆಗದಿದ್ದರೆ, ನಾಳೆಯಿಂದ ಮತ್ತೆ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.ಅಧಿಕಾರಿಗಳು ಭರವಸೆ ನೀಡಿ ಹೋದ ಎರಡು ಗಂಟೆಯೊಳಗೆ ಉಪನ್ಯಾಸಕನನ್ನು ಗದಗ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಹಿನ್ನೆಲೆ:
ಮರುದಿನ ಕಾಲೇಜಿನಲ್ಲಿ ಶಾಸಕರು ಹಾಗೂ ಡಿಡಿಪಿಯು ಅವರಿಂದ ಸಭೆ ಜರುಗಿತು. ಶೀಘ್ರ ಕ್ರಮಕೈಗೊಳ್ಳುವ ಭರವಸೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದರು. ಸೆ.4ರಂದು ವಿದ್ಯಾರ್ಥಿಗಳು ಕ್ರಮಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.