ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ

KannadaprabhaNewsNetwork |  
Published : Sep 10, 2026, 02:00 AM IST
ಕಲ್ಲಪ್ಪ ಶಂಭಣ್ಣ ಪವಾಡಶೆಟ್ಟರ.. | Kannada Prabha

ಸಾರಾಂಶ

ಮೃತರನ್ನು ಗ್ರಾಮದ ಕಲ್ಲಪ್ಪ ಶಂಭಣ್ಣ ಪವಾಡಶೆಟ್ಟರ(41) ಎಂದು ಗುರುತಿಸಲಾಗಿದೆ. ತಮ್ಮ 3 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಕೃಷಿ ನಿರ್ವಹಣೆಗಾಗಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ₹5 ಲಕ್ಷ ಬಂಗಾರದ ಸಾಲ ಹಾಗೂ ₹2 ಲಕ್ಷ ಹಣಕಾಸಿನ ಸಾಲ ಪಡೆದಿದ್ದರು ಎನ್ನಲಾಗಿದೆ.

ಬ್ಯಾಡಗಿ: ಸತತ ಬೆಳೆ ನಷ್ಟದಿಂದಾಗಿ ಮಾನಸಿಕವಾಗಿ ನೊಂದ ರೈತನೊಬ್ಬ ಸಾಲಬಾಧೆ ತಾಳದೇ ಹೊಲದಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕಲ್ಲೇದೇವರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಕಲ್ಲಪ್ಪ ಶಂಭಣ್ಣ ಪವಾಡಶೆಟ್ಟರ(41) ಎಂದು ಗುರುತಿಸಲಾಗಿದೆ. ತಮ್ಮ 3 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಕೃಷಿ ನಿರ್ವಹಣೆಗಾಗಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ₹5 ಲಕ್ಷ ಬಂಗಾರದ ಸಾಲ ಹಾಗೂ ₹2 ಲಕ್ಷ ಹಣಕಾಸಿನ ಸಾಲ ಪಡೆದಿದ್ದರು ಎನ್ನಲಾಗಿದೆ.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಹವಾಮಾನ ವೈಪರೀತ್ಯಗಳಿಂದ ಕಳೆದ 3 ವರ್ಷಗಳಿಂದ ಕೃಷಿಯಲ್ಲಿ ನಿರೀಕ್ಷಿತ ಇಳುವರಿ ದೊರೆಯದೇ ಹಾಕಿದ ಬಂಡವಾಳವೂ ಕೈ ಸೇರಿರಲಿಲ್ಲ. ಇದರಿಂದ ಸಾಲದ ಹೊರೆ ಹೆಚ್ಚಾಗಿದ್ದು, ಮಾಡಿದ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಿಂದ ಕಲ್ಲಪ್ಪ ನೇಣಿಗೆ ಶರಣಾಗಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಮೃತರ ಪತ್ನಿ ರೇಖಾ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕನ್ಯೆ ಸಿಗದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ

ಹಾವೇರಿ: ಹೆಣ್ಣು ಸಿಗಲಾರದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.ಕುರುಬಗೊಂಡ ಗ್ರಾಮದ ನಾಗಪ್ಪ ಪುಟ್ಟಪ್ಪ ಕರೆಡೆಪ್ಪನವರ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತ ನನಗೆ ಯಾರು ಹೆಣ್ಣು ಕೊಡಬೇಕು, ಇನ್ನೂ ವರೆಗೂ ಮದುವೆ ಆಗಿಲ್ಲ ಎಂದು ಮಾನಸಿಕವಾಗಿ ನೊಂದಿದ್ದರು. ಇದೇ ನೋವಿನಲ್ಲಿ, ಮದ್ಯಪಾನ ಮಾಡುವ ಚಟಕ್ಕೂ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸೆ.6ರಂದು ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ವ್ಯಕ್ತಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಾಯಕನಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಕುಷ್ಟಗಿ ತಾಲೂಕು ಬರಪೀಡಿತ ಘೋಷಣೆಗೆ ಆಗ್ರಹ, ರೈತರ ಪಾದಯಾತ್ರೆ