- ದಾನಿಹಳ್ಳಿಯಲ್ಲಿ ಶ್ರೀ ತರಳಬಾಳು ಜಗದ್ಗುರು ಶಾಲೆ ವಾರ್ಷಿಕೋತ್ಸವ- - - ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ದಾನಿಹಳ್ಳಿ ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿವಕುಮಾರ ಸಿರಿ ಸಂಭ್ರಮ 2024-25ನೇ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ದಾನಿಹಳ್ಳಿ ತರಳಬಾಳು ವಿದ್ಯಾಸಂಸ್ಥೆ 2006ರಲ್ಲಿ ಜನ್ಮತಾಳಿ, ಬೃಹತ್ ಕಟ್ಟಡ ಹೊಂದಿದೆ. ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಯಿಂದ ಪ್ರಾರಂಭಗೊಂಡು, ಈಗ ಎಸ್‌ಎಸ್‌ಎಲ್‌ಸಿವರೆಗೆ ತರಗತಿ ಹೊಂದಿದೆ. ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ದೇಗುಲದ ಗಂಟೆ ಬಾರಿಸುವುದಕ್ಕಿಂತ ಶಾಲೆಯ ಗಂಟೆ ಬಾರಿಸಬೇಕು. ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಉನ್ನತಮಟ್ಟಕ್ಕೆ ಹೋಗಿದ್ದಾರೆ. ಇದರಲ್ಲಿ ಉಪನ್ಯಾಸಕರ ಶ್ರಮವೂ ಕಾರಣರಾಗಿರುತ್ತದೆ. ವಿದ್ಯಾರ್ಥಿಗಳು ಆಟ ಪಾಠಗಳಲ್ಲಿ ಮುಂದಿದ್ದಾರೆ. ಉತ್ತಮ ಪ್ರಜೆಯಾಗಲು ಈ ವಿದ್ಯಾಸಂಸ್ಥೆ ಸಾಕ್ಷಿಯಾಗಿದೆ. ಶಿಕ್ಷಣಕ್ಕಾಗಿ ಭೂ ದಾನ ಮಾಡಿದ ದಾನಿಹಳ್ಳಿ ರೈತಾಪಿ ವರ್ಗದವರ ಸೇವೆ ಸ್ಮರಣೀಯ ಎಂದರು.ಹೊನ್ನಾಳಿ ಶಿವ ಬ್ಯಾಂಕ್ ಅಧ್ಯಕ್ಷ ಕೆ.ಎಸ್.ಶಿವಕುಮಾರ್, ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ ಮಾತನಾಡಿದರು. ಅಧ್ಯಕ್ಷತೆಯನ್ನು ತರಳಬಾಳು ವಿದ್ಯಾಸಂಸ್ಥೆ ಸಲಹಾ ಸಮಿತಿ ಅಧ್ಯಕ್ಷ ಡಿ.ತೀರ್ಥಲಿಂಗಪ್ಪ ವಹಿಸಿದ್ದರು. ಉದ್ಘಾಟನೆಯನ್ನು ಶಿವಮೊಗ್ಗ ವಲಯ ಪ್ರಾದೇಶಿಕ ಅಧಿಕಾರಿ ವಸಂತ ಎನ್. ಬಡಿಗೇರ್ ನೆರವೇರಿಸಿದರು.
ಡಾ.ಶಶಿಧರ್ ಗೌಡ, ಪಿ.ಜಿ.ಈಶ್ವರಪ್ಪ, ಜಿ.ಮಲ್ಲೇಶಪ್ಪ, ಎಸ್.ಪರಮೇಶ್ವರಪ್ಪ, ಡಿ.ಜಯಪ್ಪ, ಕೆ.ಹಾಲೇಶಪ್ಪ, ಜಿ.ಉಜ್ಜಿನಪ್ಪ, ಟಿ.ನಾಗರಾಜಪ್ಪ, ಕೆ.ಸಿ.ಬಸವರಾಜಪ್ಪ, ಎಂ.ಜಯಪ್ಪ ಮತ್ತಿತರರಿದ್ದರು.
- - -