ವ್ಹಿಪ್‌ ಉಲ್ಲಂಘಿಸಿದ ಜೆಡಿಎಸ್ ಸದಸ್ಯರ ವಿರುದ್ಧ ಕಾನೂನು ಹೋರಾಟ

KannadaprabhaNewsNetwork |  
Published : Aug 24, 2024, 01:16 AM IST
23ಎಚ್ಎಸ್ಎನ್17 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‌ ಮುಖಂಡ ಎನ್‌.ಆರ್‌.ಸಂತೋಷ್‌. | Kannada Prabha

ಸಾರಾಂಶ

ಜೆಡಿಎಸ್ ಪಕ್ಷದ ಚಿಹ್ನೆ ಅಡಿಯಲ್ಲಿ ಸದಸ್ಯರಾಗಿ ಗುರುತಿಸಿಕೊಂಡಿದ್ದ ನಗರಸಭೆ ಸದಸ್ಯರು ವಿಪ್ ಉಲ್ಲಂಘನೆ ಮಾಡಿ ಪರ್ಯಾಯವಾಗಿ ಮತ ಚಲಾವಣೆ ಮಾಡಿದ್ದಾರೆ. ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಚಿಹ್ನೆಯಿಂದ ೧೫ ಜನರು ಗೆಲುವು ಪಡೆದಿದ್ದು, ನಮ್ಮ ಜೊತೆ ಉಳಿದವರು ಕೇವಲ ಇಬ್ಬರು ಮಾತ್ರ. ಅರಸೀಕೆರೆಯಲ್ಲಿ ನಡೆದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಸದಸ್ಯರು ವಿಪ್ ಉಲ್ಲಂಘನೆ ಮಾಡಲಾಗಿದ್ದು, ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಜೆಡಿಎಸ್ ಪಕ್ಷದ ಮುಖಂಡರಾದ ಎನ್.ಆರ್ ಸಂತೋಷ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಅರಸೀಕೆರೆಯಲ್ಲಿ ನಡೆದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಸದಸ್ಯರು ವಿಪ್ ಉಲ್ಲಂಘನೆ ಮಾಡಲಾಗಿದ್ದು, ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಜೆಡಿಎಸ್ ಪಕ್ಷದ ಮುಖಂಡರಾದ ಎನ್.ಆರ್ ಸಂತೋಷ್ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷದ ಚಿಹ್ನೆ ಅಡಿಯಲ್ಲಿ ಸದಸ್ಯರಾಗಿ ಗುರುತಿಸಿಕೊಂಡಿದ್ದ ನಗರಸಭೆ ಸದಸ್ಯರು ವಿಪ್ ಉಲ್ಲಂಘನೆ ಮಾಡಿ ಪರ್ಯಾಯವಾಗಿ ಮತ ಚಲಾವಣೆ ಮಾಡಿದ್ದಾರೆ. ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಚಿಹ್ನೆಯಿಂದ ೧೫ ಜನರು ಗೆಲುವು ಪಡೆದಿದ್ದು, ನಮ್ಮ ಜೊತೆ ಉಳಿದವರು ಕೇವಲ ಇಬ್ಬರು ಮಾತ್ರ. ಎಲ್ಲರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಗಿದ್ದು, ನಗರಸಭೆಯಲ್ಲಿರುವ ನಮ್ಮ ಪಕ್ಷದ ಎಲ್ಲಾ ಸದಸ್ಯರಿಗೆ ನೋಟಿಸ್ ನೀಡಿ ಸಭೆಯಲ್ಲಿ ಪಾಲ್ಗೊಂಡು, ಯಾರನ್ನು ಒಮ್ಮತದಿಂದ ಅಧ್ಯಕ್ಷ ಮತ್ತು ಉಪಧ್ಯಕ್ಷನನ್ನು ಆಯ್ಕೆ ಮಾಡಬೇಕೆಂಬು ಸಲಹೆಯನ್ನು ಕೊಡಬೇಕೆಂದು ಕೇಳಿ ನೋಟಿಸನ್ನು ಸದಸ್ಯರ ಮನೆ ಬಾಗಿಲಿಗೆ ಅಂಟಿಸಿ ಫೋನ್ ಮೂಲಕ ತಿಳಿಸಲಾಗಿತ್ತು. ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ರವರ ನಿರ್ದೇಶನದಂತೆ ಎಚ್.ಡಿ. ರೇವಣ್ಣರವರ ಸಲಹೆ ಸೂಚನೆ ಆಧರಿಸಿ ಸಭೆಯನ್ನೂ ಮಾಡಲಾಗಿತ್ತು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷರಾದ ಕೆ.ಎಸ್. ಲಿಂಗೇಶ್ ರವರು ತಾಲೂಕು ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಇದ್ದುದರಿಂದ ಸುಜಾತ ರಮೇಶ್ ರವರನ್ನು ಅಧ್ಯಕ್ಷರನ್ನಾಗಿ ಮಾಡಲು ಪಕ್ಷ ತೀರ್ಮಾನ ಮಾಡಿತ್ತು ಎಂದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇದ್ದುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗೆಲುವು ಪಡೆದಿದ್ದ ಅಭೀರಾಮಿ ಶಿವರಾಂ ಅವರನ್ನು ನಾವು ಆಯ್ಕೆ ಮಾಡಲಾಯಿತು. ಆದರೇ ಕಳೆದ ಒಂದು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ವಿಪ್ ಅನ್ನು ಉಲ್ಲಂಘನೆ ಮಾಡಿ ಶಾಸಕ ಶಿವಲಿಂಗೇಗೌಡರ ಅಣತಿಯಂತೆ ತೆನೆಹೊತ್ತ ಮಹಿಳೆ ಚಿಹ್ನೆಯಿಂದ ಗೆದ್ದಂತಹವರು ತಮ್ಮ ಮತವನ್ನು ನೀಡಿ ವಿಪ್ ಉಲ್ಲಂಘನೆ ಮಾಡಿರುವುದರಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸಂಪೂರ್ಣವಾಗಿ ಕಾನೂನು ಹೋರಾಟ ಮಾಡಲಿದ್ದೇವೆ. ೧೯೮೭ರ ಕಾಯಿದೆ ನಗರ ಸ್ಥಳೀಯ ಸಂಸ್ಥೆ ಕಾಯಿದೆಯಂತೆ ಕ್ರಮ ತೆಗೆದುಕೊಳ್ಳಲು ಪಕ್ಷ ತೀರ್ಮಾನ ಮಾಡಿದೆ ಎಂದು ಎಚ್ಚರಿಸಿದರು.

ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಶಾಸಕರಾಗಿ ಕೆಲಸ ಮಾಡಿದ್ದ್ದ ಶಾಸಕ ಶಿವಲಿಂಗೇಗೌಡ ಅವರು, ಇದೀಗ ಪಕ್ಷಾಂತರ ಮಾಡಿ ಜೊತೆಗೆ ನಗರಸಭೆ ಸದಸ್ಯರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಕೆಲ ಸದಸ್ಯರು ಮತ ಚಲಾವಣೆ ಮಾಡಿದ್ದಾರೆ. ಇನ್ನು ಜೆಡಿಎಸ್ ಚಿಹ್ನೆಯಿಂದ ಗೆದ್ದ ಈಶ್ವರಪ್ಪ ಅವರು ಅಸಮಾಧಾನದಿಂದ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಜೊತೆ ಮಾತುಕಡೆ ನಡೆಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮಾಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಭೀರಾಮಿ, ಸುಜಾತ ರಮೇಶ್, ಪಕ್ಷೇತರ ಅಭ್ಯರ್ಥಿ ನೀಲಗಿರಿಗೌಡ, ಶಿವಣ್ಣರಾಜ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ