ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಮತದಾನ ಮಾಡುವ ಮೂಲಕ ದೇಶದ ಆಡಳಿತದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಆಶಯದಿಂದ ಮತದಾನದ ಹಕ್ಕು ನೀಡಿದರೆ ನಾವುಗಳು ಅದೇ ಮತವನ್ನು ೫೦೦-೧೦೦೦ ಕ್ಕೆ ಮಾರಿಕೊಂಡು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದೇವೆ. ಇದರಿಂದ ದೇಶದ ಆಡಳಿತ ಚುಕ್ಕಾಣಿಯನ್ನು ಹಣವಂತರು ಅನುಭವಿಸುತ್ತಿದ್ದಾರೆ. ಕಾನೂನು ಅರಿವು ಅಗತ್ಯತಹಸೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ ಯಾರಿಗೆ ಕಾನೂನಿನ ಅರಿವಿರುತ್ತದೆಯೋ ಅಂತಹವರು ಯಾವುದೇ ಅನ್ಯಾಯಕ್ಕೆ ಒಳಗಾಗುವುದಿಲ್ಲ. ಕಾನೂನಿನ ಅರಿವಿಲ್ಲದವರು ಸದಾ ಅನ್ಯಾಯಗಳಿಗೆ ತುತ್ತಾಗುತ್ತಾರೆ. ಅನ್ಯಾಯ ಆದಾಗ ಅದನ್ನು ಪ್ರಶ್ನಿಸುವುದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಎಂ.ವೇಣು, ಮುನಿವೆಂಕಟಸ್ವಾಮಿ ಮತ್ತಿತರರು ಹಾಜರಿದ್ದರು.