ಡಿ.21ರಿಂದ 23ರ ವರೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ ಕನ್ನಡಸಂಸ್ಕೃತಿ ಇಲಾಖೆ ಹಾಗೂ ಪು.ತಿ.ನ ಟ್ರಸ್ಟ್ ಸಹಯೋಗದಲ್ಲಿ ಹೋಬಳಿಯ ಹಸಿರು ಭೂಮಿ ಟ್ರಸ್ಟ್, ದೃಶ್ಯಟ್ರಸ್ಟ್ ಜಂಟಿಯಾಗಿ ಹೋಂಬಾಳೆ ನಾಟಕೋತ್ಸವದ ಮೂಲಕ ರಂಗ ಪ್ರದರ್ಶನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯರ ಹುಟ್ಟುಹಬ್ಬದ ಅಂಗವಾಗಿ ರಂಗನಮನ ಸಲ್ಲಿಸಲು ಡಿ.21ರಿಂದ ಮೂರು ದಿನಗಳ ಕಾಲ ಪು.ತಿ.ನ ಕಲಾಮಂದಿರದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.

ಡಿ.21ರಿಂದ 23ರ ವರೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ ಕನ್ನಡಸಂಸ್ಕೃತಿ ಇಲಾಖೆ ಹಾಗೂ ಪು.ತಿ.ನ ಟ್ರಸ್ಟ್ ಸಹಯೋಗದಲ್ಲಿ ಹೋಬಳಿಯ ಹಸಿರು ಭೂಮಿ ಟ್ರಸ್ಟ್, ದೃಶ್ಯಟ್ರಸ್ಟ್ ಜಂಟಿಯಾಗಿ ಹೊಂಬಾಳೆ ನಾಟಕೋತ್ಸವದ ಮೂಲಕ ರಂಗ ಪ್ರದರ್ಶನ ನಡೆಯಲಿದೆ.

ಡಿ.21ರಂದು ರಾತ್ರಿ ಕುವೆಂಪು ಪುತ್ರ ಪೂರ್ಣಚಂದ್ರತೇಜಸ್ವಿಯವರ ಜೀವನಾಧಾರಿತ ನಾಟಕ ನನ್ನ ತೇಜಸ್ವಿ, ಡಿ.22 ರಂದು ಪ್ರಕಾಶ್ ರಾಜ್ ನಿರ್ದಿಂಗಂತ ತಂಡದಿಂದ ಕೊಡಲ್ಲ ಅಂದ್ರೆ ಕೊಡಲ್ಲ, ಡಿ.23 ರಂದು ನೇಪತ್ಯ ರಂಗತಂಡದಿಂದ ದೇವನೂರು ಮಹಾದೇವ ರಚಿಸಿದ ಕೃತಿಯಿಂದ ಆಯ್ಕೆ ಮಾಡಿ ರಚಿಸಿದ ಒಡಲಾಳ ನಾಟಕಗಳು ಪ್ರದರ್ಶನವಾಗಲಿದೆ. ನೂರಾರು ರಂಗ ಕಲಾವಿದರು ನಾಟಕೋತ್ಸವದಲ್ಲಿ ಭಾಗಿಯಾಗಿ ಕಲಾಪ್ರದರ್ಶನ ನೀಡಲಿವೆ.

ನಾಟಕೋತ್ಸವವನ್ನು ಡಿ.21ರಂದು ಸಂಜೆ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ದೇಶಕ ಟಿ.ಎನ್ ಸೀತಾರಾಮ್, ಪರಿಸರ ತಜ್ಞ ಸಂತೋಷ್ ಕೌಲಗಿ, ಸಾಹಿತಿ ಹರವು ದೇವೇಗೌಡ, ಜಿಲ್ಲಾ, ತಾಲೂಕು ರೈತಸಂಘದ ಅಧ್ಯಕ್ಷ ವಿಜಯಕುಮಾರ್, ಎಂ.ಕೆ.ಕೆಂಪೇಗೌಡ ಭಾಗವಹಿಸಲಿದ್ದಾರೆ ಎಂದು ರಂಗನಿರ್ದೇಶಕ ಗಿರೀಶ್ ಮತ್ತು ನರಹಳ್ಳಿ ಜ್ಞಾನೇಶ್ ತಿಳಿಸಿದ್ದಾರೆ.

ಕೆಎಸ್‌ಪಿ ಹಸಿರು ಪುರಸ್ಕಾರ:

ರೈತ ನಾಯಕ ಕೆ.ಎಸ್ ಪುಟ್ಟಣ್ಣಯ್ಯ ಹೆಸರಲ್ಲಿ ನಾಲ್ವರು ಸಾಧಕರಿಗೆ ಕೆ.ಎಸ್ ಪುಟ್ಟಣ್ಣಯ್ಯ ಹಸಿರು ಪುರಸ್ಕಾರ ನೀಡಲಾಗುತ್ತಿದೆ. ನಿವೃತ್ತ ಪಂಚಾಯತ್ ಅಧಿಕಾರಿ ಎಂ.ಕೆ.ಕೆಂಪೇಗೌಡ, ಪ್ರಗತಿಪರ ರೈತ ಅನಿಲ್‌ಕುಮಾರ್, ಧಾರ್ಮಿಕ ಸೇವೆಯ ಚಂದ್ರಶೇಖರ್ ರೈತ ಹೋರಾಟಗಾರ ಕೆ.ಟಿ.ಗೋವಿಂದೇಗೌಡರಿಗೆ ಪ್ರಸಶ್ತಿ ಪ್ರದಾನ ಮಾಡಲಾಗುತ್ತಿದೆ.