ನಾಳೆ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾನೂನು ಅರಿವು

KannadaprabhaNewsNetwork |  
Published : Dec 13, 2024, 12:48 AM IST
12ಎಚ್ಎಸ್ಎನ್13: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಪ್ರದೀಪ್. | Kannada Prabha

ಸಾರಾಂಶ

ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಪ್ರತ್ಯೇಕವಾದ ಕಾನೂನಿದೆ. ಹಾಗೆ ಪ್ರತ್ಯೇಕವಾದ ನ್ಯಾಯಾಲಯವಿದೆ ಎಂದು ಸಮುದಾಯದ ದಲಿತ ಜನರಿಗೆ ತಿಳಿದಿಲ್ಲ. ಇದಕ್ಕೆ ಕಾರಣ ದಲಿತ ಸಮುದಾಯದ ಜನರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯಿದೆಯ ಬಗ್ಗೆ ಕಾನೂನು ಅರಿವು ಇಲ್ಲದಿರುವುದು. ಹಾಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಡಿಸೆಂಬರ್ ೧೪ರ ಶನಿವಾರ ಬೆಳಿಗ್ಗೆ ಹತ್ತು ಗಂಟೆಗೆ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾನೂನು ಅರಿವು ಹಮ್ಮಿಕೊಳ್ಳಲಾಗಿದೆ ಎಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಡಿಸೆಂಬರ್ ೧೪ರ ಶನಿವಾರ ಬೆಳಿಗ್ಗೆ ಹತ್ತು ಗಂಟೆಗೆ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾನೂನು ಅರಿವು ಹಮ್ಮಿಕೊಳ್ಳಲಾಗಿದೆ ಎಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಪ್ರಸ್ತುತ ಈ ದೇಶದಲ್ಲಿ ಮಹಿಳೆಯರು ಮಕ್ಕಳ ಮೇಲೆ ದಿನೇ ದಿನೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಆದರೆ ಈವರೆಗೆ ಇದ್ಯಾವುದು ನಿಂತಿಲ್ಲ. ಏಕೆಂದರೆ ನಮಗೆ ಕಾನೂನು ಅರಿವು ಇಲ್ಲದಿರುವುದು. ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಪ್ರತ್ಯೇಕವಾದ ಕಾನೂನಿದೆ. ಹಾಗೆ ಪ್ರತ್ಯೇಕವಾದ ನ್ಯಾಯಾಲಯವಿದೆ ಎಂದು ಸಮುದಾಯದ ದಲಿತ ಜನರಿಗೆ ತಿಳಿದಿಲ್ಲ. ಇದಕ್ಕೆ ಕಾರಣ ದಲಿತ ಸಮುದಾಯದ ಜನರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯಿದೆಯ ಬಗ್ಗೆ ಕಾನೂನು ಅರಿವು ಇಲ್ಲದಿರುವುದು. ದಲಿತರ ಮೇಲಿನ ದೌರ್ಜನ್ಯಗಳಾದಾಗ ಅದಕ್ಕವರು ಹೇಗೆ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕೆಂಬುದು ತಿಳಿಯದಿರುವುದರಿಂದ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆ ಹಾಗೂ ಜಿಲ್ಲೆಯ ಎಲ್ಲಾ ದಲಿತಪರ, ಪ್ರಗತಿಪರ ಸಂಘಟನೆಗಳು, ರಾಜ್ಯ ಮುಖಂಡರು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಬಾಬಾ ಸಾಹೇಬರ ಅನುಯಾಯಿಗಳು ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿದ್ದಾರೆ.

ಡಿ.14 ರ ಬೆಳಗ್ಗೆ 11 ಗಂಟೆಗೆ ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯುವ ಕಾನೂನು ಅರಿವು ಹಾಗೂ ವಿಚಾರ ಸಂಕಿರಣಕ್ಕೆ ಎಲ್ಲಾ ಸಮುದಾಯದ ಸಾರ್ವಜನಿಕರು ಆಗಮಿಸಿ ಈ ಕಾರ್ಯಕ್ರಮನ್ನು ಯಶಸ್ವಿಯಾಗಿಸಬೇಕೆಂದು ಮನವಿ ಮಾಡಿದರು.

ಪತ್ರಿಕೆಗೋಷ್ಠಿಯಲ್ಲಿ ಭೀಮ್ ಅರ್ಮಿ ಸಂಘಟನೆಯ ಖಜಾಂಚಿ ಎಂ.ಸಿ. ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ತಾಲೂಕು ಅಧ್ಯಕ್ಷ ಡಿ.ಕೆ. ಹೇಮಂತ್, ಆಲೂರು ತಾಲೂಕು ಅದ್ಯಕ್ಷ ಜಗದೀಶ್ ನಿಡನೂರು, ಸಂಚಾಲಕ ಪರಮೇಶ್, ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!
ರಾಜ್ಯದ 15 ಜಿಲ್ಲೆಗಳಲ್ಲಿ ಅಕಾಲಿಕ ಮಳೆ : ಮಾರ್ಚ್ 25 ರವರೆಗೆ ಅಬ್ಬರಿಸಲಿದೆ