ಅರಣ್ಯವಾಸಿಗಳ ಹಕ್ಕಿಗಾಗಿ ಕಾನೂನು ಹೋರಾಟ ಅನಿವಾರ್ಯ: ನಿಶ್ಚಲನಾಥನಂದ ಸ್ವಾಮೀಜಿ

KannadaprabhaNewsNetwork |  
Published : Mar 25, 2026, 02:30 AM IST
ಫೋಟೋ : ೨೪ಕೆಎಂಟಿ_ಎಂಎಆರ್_ಕೆಪಿ೧  : ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರು ಮಿರ್ಜಾನದಲ್ಲಿ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿಯಾದರು. ರವೀಂದ್ರ ನಾಯ್ಕ, ನಾಗಪತಿ ಗೌಡ, ಸೀತಾರಾಮ ಗೌಡ, ಹರಿಹರ ನಾಯ್ಕ, ಮಲ್ಲೇಶಿ ಬಸವಂತಪ್ಪ ಬಾಳೆಹಳ್ಳಿ, ಅರವಿಂದ ಗೌಡ ಇತರರು ಇದ್ದರು.  | Kannada Prabha

ಸಾರಾಂಶ

ಮನುಷ್ಯರಿಗೆ ಸ್ವತಂತ್ರ ಭೂಮಿ ಹಕ್ಕು ಅನಿವಾರ್ಯ. ಈ ದಿಸೆಯಲ್ಲಿ ಸರ್ಕಾರಗಳ ಸಕಾರಾತ್ಮಕ ಸ್ಪಂದನೆ ಅವಶ್ಯ. ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಮಠದ ಸ್ಪಂದನೆ ಸದಾ ಇದೆ.

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿಯೋಗ ಉದ್ದೇಶಿಸಿ ಮಾತು

ಕನ್ನಡಪ್ರಭ ವಾರ್ತೆ ಕುಮಟಾಅರಣ್ಯವಾಸಿಗಳ ಭೂಮಿ ಹಕ್ಕಿನ ಪ್ರತಿಪಾದನೆಗೆ ಕಾನೂನು ಹೋರಾಟ ಅನಿವಾರ್ಯ ಎಂದು ಆದಿಚುಂಚನಗಿರಿ ಮಿರ್ಜಾನ ಶಾಖಾಮಠದ ನಿಶ್ಚಲನಾಥನಂದ ಸ್ವಾಮೀಜಿ ನುಡಿದರು.

ಮಿರ್ಜಾನದಲ್ಲಿರುವ ಆದಿಚುಂಚನಗಿರಿ ಶಾಖಾಮಠದಲ್ಲಿ ಸೋಮವಾರ ಭೇಟಿಯಾದ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿಯೋಗ ಉದ್ದೇಶಿಸಿ ಮಾತನಾಡಿದರು.ಮನುಷ್ಯರಿಗೆ ಸ್ವತಂತ್ರ ಭೂಮಿ ಹಕ್ಕು ಅನಿವಾರ್ಯ. ಈ ದಿಸೆಯಲ್ಲಿ ಸರ್ಕಾರಗಳ ಸಕಾರಾತ್ಮಕ ಸ್ಪಂದನೆ ಅವಶ್ಯ. ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಮಠದ ಸ್ಪಂದನೆ ಸದಾ ಇದೆ ಎಂದರು.ಜಿಲ್ಲಾ ಸಂಚಾಲಕರಾದ ನಾಗಪತಿ ಗೌಡ ಮತ್ತು ಸೀತಾರಾಮ ಗೌಡ ಹುಕ್ಕಳ್ಳಿ, ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಆಡಳಿತ ಮತ್ತು ಕಾನೂನಾತ್ಮಕ ಸಮಸ್ಯೆಗಳ ಕುರಿತು ವಿವರಿಸಿದರು. ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕಿಗೆ ಸಂಬಂಧಿಸಿ ಹೋರಾಟಗಾರರ ವೇದಿಕೆ ತೆಗೆದುಕೊಂಡ ನಿರ್ಣಯಗಳನ್ನು ಪ್ರಸ್ತುತಪಡಿಸಿದರು. ನಮ್ಮೆಲ್ಲಾ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ಅಪೇಕ್ಷಿಸುತ್ತೇವೆ ಎಂದರು. ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ, ಜಿಲ್ಲೆಯ ೮೦ ಸಾವಿರಕ್ಕೂ ಹೆಚ್ಚು ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸರ್ಕಾರದ ಸ್ಪಂದನೆ ಅವಶ್ಯ. ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನು ವಿಧಿ ವಿಧಾನ ಅನುಸರಿಸದೇ ಪ್ರಥಮ ಹಂತದಲ್ಲಿ ೭೨ ಸಾವಿರಕ್ಕೂ ಮಿಕ್ಕಿ ಅರ್ಜಿಗಳು ತಿರಸ್ಕಾರವಾಗಿರುವುದು ವಿಷಾದಕರ. ಜಿಲ್ಲೆಯಲ್ಲಿ ಇಂದಿನವರೆಗೆ ಕೇವಲ ೨೮೫೩ ಅರಣ್ಯ ಭೂಮಿ ಹಕ್ಕಿನ ಅರ್ಜಿಗಳಿಗೆ ಮಾನ್ಯತೆ ದೊರಕಿದೆ ಎಂದರು.ಹರಿಹರ ನಾಯ್ಕ, ಮಲ್ಲೇಶಿ ಬಸವಂತಪ್ಪ ಬಾಳೆಹಳ್ಳಿ, ಅರವಿಂದ ಗೌಡ ಅಂಕೋಲ, ಸೀತಾರಾಮ ನಾಯ್ಕ, ನಾಗರಾಜ ಮರಾಠಿ ಕೊಡಿಗದ್ದೆ, ಗಣೇಶ ಚಂದಾವರ, ಲಕ್ಷ್ಮಣ ನಾಯ್ಕ ದೊಡ್ನಳ್ಳಿ, ಶಂಕರ ಕೊಡಿಯಾ, ದೇವರಾಜ ಕ್ಯಾದಗಿ, ಬಸಪ್ಪ ಯಲ್ಲಪ್ಪ ಬಸಾಪುರ, ಸತೀಶ ಚೌಡರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಸಂಘಟನೆಗೆ ಪ್ರಶಿಕ್ಷಣ ಮಹಾಭಿಯಾನ ಪೂರಕ: ರೂಪಾಲಿ ನಾಯ್ಕ
ಯುವ ಪೀಳಿಗೆಗೆ ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿ