ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಸಮಯದಲ್ಲಿ ಶಾಸಕರಿಗಳಿಗೆ ದಿನಕ್ಕೆ ₹ 2500 ದಿನ ಭತ್ಯೆಗಳನ್ನು ನೀಡಲಾಗುತ್ತಿದೆ. ಅದರಲ್ಲಿ, ತಮಗೆ ಇಷ್ಟದ ಊಟ ಉಪಹಾರ ಹಾಗೂ ಚಹಾ, ಕಾಫಿ ಸೇವಿಸಬಹುದು. ಹೀಗಾಗಿ, ಯಾವುದೇ ಕಾರಣಕ್ಕೂ ಶಾಸಕರಿಗೆ ಉಚಿತವಾಗಿ ಊಟ- ಉಪಹಾರ ನೀಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಅಧಿವೇಶನದಲ್ಲಿ ದಿನಭತ್ಯೆ ಮತ್ತು ಉಚಿತ ಊಟ-ಉಪಹಾರಗಳನ್ನು ಶಾಸಕರಿಗೆ ನೀಡಿದ್ದಲ್ಲಿ, ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಭಾಪತಿಗಳು, ಸಭಾಧ್ಯಕ್ಷರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸ್ವಂತ ಜೇಬಿನಿಂದ ಸರ್ಕಾರಕ್ಕೆ ಪಾವತಿಸುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಿದ್ದಪ್ಪ ಬಳೆಗಾರ, ಸಂಗಯ್ಯ ಹಿರೇಮಠ ಉಪಸ್ಥಿತರಿದ್ದರು.