ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಅವಶ್ಯ: ವಕೀಲ ವಿ.ಆರ್. ನಟಶೇಖರ್

KannadaprabhaNewsNetwork |  
Published : Nov 07, 2025, 02:15 AM IST
್ಿಿ | Kannada Prabha

ಸಾರಾಂಶ

ಶೃಂಗೇರಿ, ನಾಗರಿಕ ಸಮಾಜದಲ್ಲಿ ಕಾನೂನುಗಳು ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಅವಶ್ಯ ಎಂದು ಹಿರಿಯ ವಕೀಲ ವಿ.ಆರ್. ನಟಶೇಖರ್ ಹೇಳಿದರು.

ಮಹಿಳಾ ಕಾನೂನುಗಳ ಕುರಿತ ಉಪನ್ಯಾಸ

ಕನ್ನಡಪ್ರಭ ವಾರ್ತೆ, ಶೃಂಗೇರಿ

ನಾಗರಿಕ ಸಮಾಜದಲ್ಲಿ ಕಾನೂನುಗಳು ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಅವಶ್ಯ ಎಂದು ಹಿರಿಯ ವಕೀಲ ವಿ.ಆರ್. ನಟಶೇಖರ್ ಹೇಳಿದರು.

ತಾಲೂಕಿನ ಹೊನ್ನವಳ್ಳಿಯಲ್ಲಿ ಮುಂಗಾರು ಜ್ಞಾನವಿಕಾಸ ಕೇಂದ್ರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಹಿಳಾ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು. ಮಹಿಳೆಯರ ಮೇಲೆನ ಶೋಷಣೆ, ದೌರ್ಜನ್ಯ ತಡೆಗಟ್ಟಲು ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಮಹಿಳೆಯರಿಗೆ ಸಂಬಂಧಿಸಿದ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಅನೇಕರು ಅವುಗಳ ಬಗ್ಗೆ ಸರಿಯಾದ ಮಾಹಿತಿ ಪಡೆದಿಲ್ಲ. ಕಾನೂನು ಕಾಯ್ದೆಗಳ ಬಗ್ಗೆ ನಾವು ತಿಳುವಳಿಕೆ ಹೊಂದಿದ್ದರೆ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಈ ಕಾನೂನುಗಳು ದೈಹಿಕ, ಮಾನಸಿಕ ಮತ್ತು ಆರ್ಥಿಕ ದೌರ್ಜನ್ಯದಿಂದ ರಕ್ಷಣೆ ನೀಡುತ್ತದೆ. ಮಹಿಳಾ ರಕ್ಷಣಾ ಕಾನೂನುಗಳು ವಿವಿಧ ರೀತಿ ಹಿಂಸೆ, ದೌರ್ಜನ್ಯ, ಕಿರುಕುಳಗಳಿಂದ ಮಹಿಳೆಯರನ್ನು ರಕ್ಷಿಸುತ್ತದೆ. ವರದಕ್ಷಿಣೆ ನಿಷೇಧ ಕಾಯ್ದೆ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳಿವೆ.

ಮಹಿಳೆಯರ ಸಂರಕ್ಷಣಾ ಕಾಯ್ದೆ ಇದು ಮನೆಗಳಲ್ಲಿ ನಡೆಯುವ ಎಲ್ಲಾ ರೀತಿ ಹಿಂಸೆಗಳನ್ನು ನಿಭಾಯಿಸುತ್ತದೆ. ಗೃಹದೌರ್ಜನ್ಯದಿಂದ ರಕ್ಷಣೆ,ಆರ್ಥಿಕ ಪರಿಹಾರ,ಆವಾಸದ ಆಧಾರ ನೀಡುತ್ತದೆ. ವರದಕ್ಷಿಣೆ ನಿಷೇದ ಕಾಯ್ದೆ ವರದಕ್ಷಿಣೆ ವಿನಿಮಯ ನಿಷೇಧಿಸುತ್ತದೆ ಮತ್ತು ಶಿಕ್ಷೆ ವಿಧಿಸುತ್ತದೆ. ಇವುಗಳ ಜೊತೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣೆಗೆ ಪೋಕ್ಸೋ ಕಾಯ್ದೆ ಇವೆ. ಇತರೆ ಕಾಯ್ದೆಗಳು ಮಹಿಳೆಯರಿಗೆ ರಕ್ಷಣೆ ಒದಗಿಸುತ್ತದೆ. ಮಹಿಳೆಯರು ಕಾನೂನು ಕಾಯ್ದೆಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ನ್ಯಾಯಾಂಗ ಇಲಾಖೆಯ ರವಿ, ಸಂತೋಷ್ ಕುಮಾರ್, ಮುಂಗಾರು ಜ್ಞಾನ ವಿಕಾಸ ಕೇಂದ್ರದ ಮೇಲ್ವಿಚಾರಕರು, ಸೇವಾ ನಿರತರು ಮತ್ತಿತರರು ಉಪಸ್ಥಿತರಿದ್ದರು.

5 ಶ್ರೀ ಚಿತ್ರ 1-

ಶೃಂಗೇರಿ ಹೊನ್ನವಳ್ಳಿಯಲ್ಲಿ ಮುಂಗಾರು ಜ್ಞಾನವಿಕಾಸ ಕೇಂದ್ರ ಸಹಯೋಗದಲ್ಲಿ ನಡೆದ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ವಕೀಲ ವಿ.ಆರ್.ನಟಶೇಖರ್ ಉಪನ್ಯಾಸ ನೀಡಿದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ