ಕುಷ್ಟಗಿ: ನೆಮ್ಮದಿಯ ಜೀವನಕ್ಕಾಗಿ ಕಾನೂನೂ ತಿಳಿವಳಿಕೆ ಅಗತ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.
ಪಟ್ಟಣದ ದೇವರಾಜು ಅರಸು ಭವನದಲ್ಲಿ ತಾಲೂಕು ಕಾನೂನೂ ಸೇವಾ ಸಮಿತಿ, ವಕೀಲರ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಕರ್ತವ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಕಾನೂನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ದೈನಂದಿನ ಜೀವನ ಯಾವುದೇ ಅಡೆ ತಡೆಯಿಲ್ಲದೆ ನೆಮ್ಮದಿಯಿಂದ ಸಾಗಲು ಕಾನೂನು ಅರಿವು ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾನೂನು ಮನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿವೆ. ಅನೇಕರು ಗೊತ್ತಿದ್ದು ನಿರ್ಲಕ್ಷ್ಯ ಮಾಡಿ ತೊಂದರೆ ಅನುಭವಿಸುತ್ತಾರೆ. ಇನ್ನೂ ಕೆಲವರು ತಿಳಿವಳಿಕೆ ಇಲ್ಲದೆ ತಪ್ಪಿಗೆ ಸಿಲುಕಿ ಶಿಕ್ಷೆ ಅನುಭವಿಸುತ್ತಾರೆ ಹೀಗಾಗಿ ಸಮಾಜದ ವ್ಯವಸ್ಥೆ ಶುದ್ಧವಾಗಿರಲು ಪ್ರತಿಯೊಬ್ಬರು ಕಾನೂನನ್ನು ತಿಳಿಯಬೇಕು. ಅಲ್ಲದೆ ಅದನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರ ದುರ್ಬಲ ವರ್ಗದವರಿಗೆ ನ್ಯಾಯ ಒದಗಿಸುವಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ಸಹಾಯಕ್ಕಾಗಿ 15100 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ದೊಡ್ಡನಗೌಡ ಪಾಟೀಲ, ರಾಯನಗೌಡ, ಇಂದಿರಾ ಸುಹಾಸಿನಿ, ಪರಸಪ್ಪ ಗುಜಮಾಗಡಿ, ಎಚ್.ಆರ್.ನಾಯಕ, ಎಸ್.ಕೆ.ಪಾಟೀಲ್, ತಾಲೂಕು ವಿಸ್ತರಣಾಧಿಕಾರಿ ಗ್ಯಾನಪ್ಪ ಅಡಿವಿ, ಗ್ರೇಡ್ 2 ತಹಸೀಲ್ದಾರ ರಜಿನಕಾಂತ, ರಾಘಪ್ಪ, ಸಿದ್ದಪ್ಪ, ಎಂ.ಬಿ. ಕೊನಸಾಗರ, ಸುನೀಲಕುಮಾರ ಮಠ, ಆಕಾಶ ಸಂಗನಾಳ, ನಿಲಯ ಮೇಲ್ವಿಚಾರಕ ಮುತ್ತಪ್ಪ ಆವಿನ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗ, ವಸತಿ ನಿಲಯದ ವಿದ್ಯಾರ್ಥಿಗಳು ಹಾಜರಿದ್ದರು.