ಮೂಡುಬಿದಿರೆಗೆ ಕಾನೂನು ಸೇವಾ ಸಮಿತಿ: ನ್ಯಾ. ಜೈಬುನ್ನೀಸಾ

KannadaprabhaNewsNetwork |  
Published : Nov 20, 2025, 01:45 AM IST
ಮೂಡುಬಿದಿರೆ ಕೋ-ಓಪರೇಟಿವ್ ಸವೀಸ್ ಸೊಸೈಟಿ-ಸಹಕಾರಿ ಸಪ್ತ ಸಂಧ್ಯಾ ಸಂಭ್ರಮಮೂಡುಬಿದಿರೆ ಸಹಿತ  ಅರ್ಹ ತಾಲೂಕುಗಳಿಗೆ ಕಾನೂನು ಸೇವಾ ಸಮಿತಿ: ನ್ಯಾ. ಜೈಬುನ್ನೀಸಾ | Kannada Prabha

ಸಾರಾಂಶ

ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಸಹಕಾರಿ ಸಪ್ತಾಹ ಸಂಭ್ರಮ 2025 ಸಪ್ತ ಸಂಧ್ಯಾ- ಸಹಕಾರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಚಿತ ಕಾನೂನು ಸೇವೆ ಕುರಿತು ಮಾಹಿತಿ ನೀಡಲಾಯಿತು.

ಮೂಡುಬಿದಿರೆ ಕೋ-ಓಪರೇಟಿವ್ ಸವೀಸ್ ಸೊಸೈಟಿ-ಸಹಕಾರಿ ಸಪ್ತ ಸಂಧ್ಯಾ ಸಂಭ್ರಮಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಉಚಿತ ಕಾನೂನು ನೆರವು ನಾಗರಿಕರ ಮೂಲಭೂತ ಹಕ್ಕಾಗಿದೆ. ಜನಸಾಮಾನ್ಯರಿಗೂ ಉಚಿತ ಕಾನೂನಿನ ಅರಿವು ದೊರೆಯುವಂತಾಗಲು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ರಾಷ್ಟ್ರಮಟ್ಟದಿಂದ ತಾಲೂಕುಮಟ್ಟದ ವರೆಗೂ ಸಕ್ರಿಯವಾಗಿದೆ. ಪ್ರಸ್ತುತ ಮೂಡುಬಿದಿರೆ ಸಹಿತ ಆರು ತಾಲೂಕುಗಳಿಗೆ ತಾಲೂಕು ಕಾನೂನು ಸೇವಾ ಸಮಿತಿ ರಚನೆಯ ಅಗತ್ಯವಿದೆ. ಈ ಸೌಲಭ್ಯ ಶೀಘ್ರ ದೊರೆಯದೆ ಎಂದು ದ.ಕ. ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ. ಜೈಬುನ್ನೀಸಾ ಹೇಳಿದರು.

ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಆಯೋಜಿಸಲಾದ ಸಹಕಾರಿ ಸಪ್ತಾಹ ಸಂಭ್ರಮ 2025 ಸಪ್ತ ಸಂಧ್ಯಾ- ಸಹಕಾರಿ ಕಾರ್ಯಕ್ರಮದಲ್ಲಿ ಉಚಿತ ಕಾನೂನು ಸೇವೆ ಕುರಿತು ಮಾತನಾಡಿದರು.

ಆದಾಯ ಮಿತಿಯೊಳಗಿರುವವರಿಗೆ ಉಚಿತ ಕಾನೂನು ನೆರವು, ಸರ್ವೋಚ್ಚ ನ್ಯಾಯಾಲಯದ ಉಚಿತ ಕಾನೂನು ಸಹಾಯವಾಣಿ ‘15100’ ಅಲ್ಲದೇ ಈ ಬಾರಿ ಡಿಸೆಂಬರ್ 12ರಂದು ನಡೆಯಲಿರುವ ಲೋಕ ಅದಾಲತ್ ಮೂಲಕ ಪ್ರಕರಣಗಳ ರಾಜೀ ಇತ್ಯರ್ಥದ ಅವಕಾಶವಿದೆ. ಜಿಲ್ಲಾಮಟ್ಟದಲ್ಲೂ ಕಾಯಂ ಜನತಾ ನ್ಯಾಯಾಲಯಗಳ ಮೂಲಕ ಉಚಿತವಾಗಿ ನ್ಯಾಯ ಪಡೆಯುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದವರು ಹೇಳಿದರು. ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ ಮುಂಡಲಮನಿ ಮಾತನಾಡಿ, ಸುಶಿಕ್ಷಿತರ ತಾಲೂಕಿನಲ್ಲಿ 10 ಸಾವಿರಕ್ಕೂ ಕೃಷಿ ಭೂಮಿ ಖಾತೆಗಳು ವಾರ್ಸಾ, ಪೌತಿ ಮಾಡದೇ ಬಾಕಿಯಾಗಿವೆ. ಇದರಿಂದ ಸರ್ಕಾರಿ ಸವಲತ್ತುಗಳಿಂದ ಅನೇಕ ಮಂದಿ ವಂಚಿತರಾಗಬೇಕಾಗಿದೆ ಎಂದರು.ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶುಭ ಹಾರೈಸಿದರು. ಶಿರ್ತಾಡಿ ಭುವನ ಜ್ಯೋತಿ ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರದೀಪ್ ಎಂ.ಡಿ. ಅಧ್ಯಕ್ಷತೆ ವಹಿಸಿದ್ದರು.ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ನಿರ್ದೇಶಕ ಎಂ.ಪಿ. ಅಶೋಕ್ ಕಾಮತ್, ಪ್ರೇಮಾ ಸಾಲ್ಯಾನ್, ಅನಿತಾ ಪಿ. ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ್ ಕಾಮತ್ ಉಪಸ್ಥಿತರಿದ್ದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸೊಸೈಟಿಯ ಹಿರಿಯ ಸದಸ್ಯರಾದ ಹರ್ಷೇಂದ್ರ ಪಡಿವಾಳ್, ಸುಧಾಕರ ಆಚಾರ್ಯ, ಸದಾಶಿವ ಆಚಾರ್ಯ, ಮಿಥುನ್ ಬಿ. ಶೆಟ್ಟಿ, ದೇವರಾಜ್ ದಾಸ್, ರಾಜೇಶ್ ಎಂ. ಕೃಷ್ಣಪ್ಪ, ವೃಷಭರಾಜ್ ಜೈನ್, ಸದಾನಂದ ಎ. ಪೂಜಾರಿ, ಹರೀಶ್ ಎಂ.ಕೆ. ಹೊನ್ನಪ್ಪ ಅವರನ್ನು ಗೌರವಿಸಲಾಯಿತು. ಸೊಸೈಟಿಯ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸುದರ್ಶನ್ ವಂದಿಸಿದರು.

ಚೇತನಾ ರಾಜೇಂದ್ರ ಹೆಗ್ಡೆ ಮತ್ತು ಗಣೇಶ್ ಕಾಮತ್ ಎಂ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿಶೇಖರ್ ಅವರ ಶಿಷ್ಯ ಬಳಗದಿಂದ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಿತು.

PREV

Recommended Stories

ಮೆಕ್ಕೆಜೋಳ ರಾಶಿ ಆರಂಭಿಸುತ್ತಿದ್ದಂತೆ ಬೆಲೆ ಕುಸಿತ
ಲೋಪಗಳಾಗದಂತೆ ಅಧಿವೇಶನ ಯಶಸ್ವಿಗೊಳಿಸಿ