
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರತ್ನಗಿರಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯಿಂದ 34ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ರತ್ನಗಿರಿ ಬೋರೆಯ ಕಾಳಿಕಾಂಬಾ ದೇವಾಲಯದಲ್ಲಿ ಆಯೋಜಿಸಿದ್ದ ದುರ್ಗಾಹೋಮ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀರಾಮ ರಾವಣನ ವಿರುದ್ಧ ಜಯ ಸಾಧಿಸಿದ್ದು, ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ್ದು, ಸಜ್ಜನ ಶಕ್ತಿಯ ವಿಜಯವನ್ನು ಸಾರುತ್ತದೆ. ಜಾತಿಗಳು ವಿಭಿನ್ನವಾಗಿದ್ದರೂ ಭಾರತೀಯರ ಸಂಸ್ಕೃತಿ ಒಂದೇ ಆಗಿದೆ. ಸನಾತನ ಪರಂಪರೆಯಲ್ಲಿ ನೀತಿ ಮತ್ತು ನಡವಳಿಕೆಗೆ ಹೆಚ್ಚಿನ ಮಹತ್ವವಿದೆ. ರಾವಣ ಬ್ರಾಹ್ಮಣನಾಗಿದ್ದರೂ ದುರ್ಮಾರ್ಗದಲ್ಲಿ ನಡೆದ ಕಾರಣ ದುಷ್ಟನೆಂದು ಗುರುತಿಸಲ್ಪಟ್ಟನು. ವ್ಯಕ್ತಿಯ ಜಾತಿಗಿಂತ ಆತನ ನೀತಿ ಮತ್ತು ನಡವಳಿಕೆ ಮುಖ್ಯ ಎಂಬ ಸಂದೇಶ ಇದರಿಂದ ತಿಳಿಯುತ್ತದೆ ಎಂದರು.ದೇಶದ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪೋಷಕರು ಮಕ್ಕಳನ್ನು ಧೈರ್ಯವಂತರು, ಸಾಹಸಿಗಳು ಹಾಗೂ ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ಕೆಟ್ಟ ಕೆಲಸ ಮಾಡಬಾರದು ಎಂಬುದನ್ನು ಕಲಿಸುವುದರ ಜತೆಗೆ, ಅನ್ಯಾಯ ಸಹಿಸಿಕೊಂಡು ಸುಮ್ಮನಿರಬಾರದು ಎಂಬ ಧೈರ್ಯವನ್ನೂ ತುಂಬಬೇಕು ಎಂದು ಹೇಳಿದರು.
ಆಯುಧ ಪೂಜೆಯ ಮಹತ್ವವನ್ನು ವಿವರಿಸಿದ ಅವರು, ದೇವತೆಗಳ ಅಭಯಹಸ್ತ ಸಜ್ಜನರ ರಕ್ಷಣೆಯ ಸಂಕೇತ. ತ್ರಿಶೂಲ, ಖಡ್ಗದಂತಹ ಆಯುಧಗಳು ದುಷ್ಟ ಶಕ್ತಿಗಳ ವಿರುದ್ಧದ ಹೋರಾಟವನ್ನು ಪ್ರತಿನಿಧಿಸುತ್ತವೆ. ಆಯುಧ ಪೂಜೆಯ ನಿಜವಾದ ಆಶಯ ಅರಿತು, ಅದರ ಪರಂಪರೆ ಮತ್ತು ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಫೋಟೋ..